ಯಕ್ಷ ಪ್ರಸಾದಿನೀ-2026: “ಕಾರ್ತವೀರ್ಯ-ಚಕ್ರಚಂಡಿಕೆ” ಯಕ್ಷಗಾನ ಪ್ರದರ್ಶನ ಮಾ. 3ರಂದು

Upayuktha
0



ಪುತ್ತೂರು: ಸಾರ್ವಜನಿಕರಿಗೆ ಆಯುರ್ವೇದ ಚಿಕಿತ್ಸೆಗೆ ಸಂಗೀತ-ನಾಟ್ಯವನ್ನು ಒಳಗೊಳಿಸುವ Healing Arts ಕಲ್ಪನೆಯಂತೆ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೇತೃತ್ವದಲ್ಲಿ “ಯಕ್ಷ ಪ್ರಸಾದಿನೀ-2026” ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.


ಈ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 3, 2026 (ಮಂಗಳವಾರ) ಸಾಯಂಕಾಲ 6.30ಕ್ಕೆ ನರಿಮೊಗರು ಶಾಲಾ ವಠಾರದಲ್ಲಿನ ಕ್ರೀಡಾಂಗಣದಲ್ಲಿ (ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನ ದರ್ಬೆಯಿಂದ ಸುಮಾರು 6 ಕಿ.ಮೀ ದೂರ) ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಆಚಾರ್ಯಘಟ್ಟದ ಪೌರಾಣಿಕ ಕಥಾನಕ “ಕಾರ್ತವೀರ್ಯ-ಚಕ್ರಚಂಡಿಕೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಈಯಕ್ಷಗಾನ ಪ್ರದರ್ಶನವನ್ನು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಮಂಡಳಿಯ ಕಲಾವಿದರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮವು ರಾತ್ರಿ 1 ಗಂಟೆಯವರೆಗೆ ಮುಂದುವರಿಯಲಿದೆ. ಪ್ರವೇಶ ಪೂರ್ಣವಾಗಿ ಉಚಿತವಾಗಿದೆ.


ಹೆಚ್ಚಿನ ಮಾಹಿತಿ ಹಾಗೂ ಸೂಚನೆಗಳುಗಾಗಿ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ www.prasadini.com ಅನ್ನು ಭೇಟಿ ಮಾಡಬಹುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top