ಸುರಪುರ: 'ಇಂದು ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವು ನಮ್ಮ ಯುವಜನರ ಕೈಯಲ್ಲಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ. ನಮ್ಮ ಕನ್ನಡ ನಾಡು 'ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನ' ಸುಂದರ ನಾಡಾಗಿದೆ. ದೇಶಕ್ಕಾಗಿ ದುಡಿದು ಅಮರರಾದವರಿಗೆ ಈ ಗಣರಾಜ್ಯದ ಗೌರವವನ್ನು ಅರ್ಪಿಸಬೇಕು, ಮಕ್ಕಳಿಗೆ ದೇಶಪ್ರೇಮವನ್ನು, ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಕಲಿಸಬೇಕು, ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಶಿಕ್ಷಕರ ಮೇಲಿದೆ' ಎಂದು ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
ಅವರು ರಂಗಂಪೇಟೆಯ ತಕ್ಷಶಿಲಾ ಇಂಟರನ್ಯಾಶನಲ್ ಶಾಲೆಯಲ್ಲಿ ನಡೆದ 77ನೇ ಪ್ರಜಾರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
'ದೇಶವು ಮಕ್ಕಳನ್ನು ತನ್ನ ಉತ್ತಮ ನಾಗರಿಕರನ್ನಾಗಿ ನೋಡಲು ಬಯಸುತ್ತದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರು. ದೇಶ ಇಂದು ಇಷ್ಟು ಪ್ರಗತಿಯನ್ನು ಕಾಣಲು ಎಲ್ಲರ ಕೊಡುಗೆ ತುಂಬಾ ಇದೆ' ಎಂದು ಮುಖ್ಯ ಅತಿಥಿಗಳಾಗಿದ್ದ ಚಿಂತಕ ರಾಮು ಅರಳಳ್ಳಿ ಅವರು ಹೇಳಿದರು.
'ನಮ್ಮ ಶಾಲೆಯು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಈ ನಮ್ಮ ಮಕ್ಕಳೇ ಜಗತ್ತಿನ ನಾಳಿನ ಆಶಾಕಿರಣಗಳು. ದೇಶದ ಅಭಿವೃದ್ಧಿಗೆ ನಾವೆಲ್ಲರೂ ಸೇರಿ ಕೈ ಜೋಡಿಸೋಣ' ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಅಂಬಿಕಾ ಯನಗುಂಟಿ ಅವರು ಹೇಳಿದರು.
ಶಾಲೆಯ ಪ್ರಿನ್ಸಿಪಾಲ ರಾಕೇಶ ನಾಯರ ಉಪಸ್ಥಿತರಿದ್ದರು. ಪ್ರಜಾರಾಜ್ಯೋತ್ಸವದ ಧ್ವಜಾರೋಹಣವನ್ನು ಅಂಬಿಕಾ ಯನಗುಂಟಿ, ಶ್ರೀನಿವಾಸ ಜಾಲವಾದಿ, ರಾಮು ನಾಯಕ ಅರಳಳ್ಳಿ ಅವರು ನೆರವೇರಿಸಿದರು.
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಷಣ ಮಾಡಿದರು ಹಾಗೂ ಅನೇಕರು ರಾಷ್ಟ್ರ ನಾಯಕರ ಛದ್ಮ ವೇಷ ಧರಿಸಿ ಗಮನ ಸೆಳೆದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಶಾಲೆಯ ಶಿಕ್ಷಕರಾದ ಸಚಿನಕುಮಾರ ನಾಯಕ, ನಿಂಗಮ್ಮ, ಫರ್ಜಾನ ಬೇಗಂ, ಹರ್ಷಾ, ದಿವ್ಯಜ್ಯೋತಿ, ಬಸವರಾಜ, ಹೈಯಾಳಪ್ಪ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಹರ್ಷಿಕಾ ಬೇಗಂ ಹಾಗೂ ಭಾಗ್ಯಶ್ರೀ ಸ್ವಾಗತಿಸಿದರು, ಶಿಕ್ಷಕಿ ಪ್ರೇಮಾ ವಂದಿಸಿದರು, ಶಿಕ್ಷಕಿ ಸುನಿತಾ ಅವರು ಕಾರ್ಯಕ್ರಮ ನಿರೂಪಿಸಿದರು. ಅತ್ಯಂತ ಚೈತನ್ಯಪೂರ್ಣವಾಗಿ ಎಲ್ಲ ಕಾರ್ಯಕ್ರಮಗಳು ನಡೆದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

