ಬಾಳ ಹಾದಿಯಲಿ ನೂರು ಕನಸು,
ನಗುವ ಮೊಗದಿ ಮರೆಮಾಚು ಮನಸು ll೦೧ll
ಹೃದಯದ ಬಡಿತಕೆ ಪ್ರೀತಿಯ ತಾಳ,
ಕಣ್ಣಿನ ಭಾಷೆಗೆ ಮೌನವೇ ಜಾಲ ll೦೨ll
ಸೋಲನು ಕಂಡು ಕುಗ್ಗದಿರು ನೀನು,
ಗೆಲುವಿನ ಹಾದಿಗೆ ನೀನೇ ಏಣಿ ಇನ್ನು ll೦೩ll
ಪ್ರೀತಿಯ ಹಣತೆಯ ಹಚ್ಚುತ ಸಾಗು,
ನೊಂದವರ ಬಾಳಿಗೆ ಬೆಳಕಾಗಿ ಮಿಗು ll೦೪ll
ಸಮಯದ ಸುಳಿಯಲ್ಲಿ ಎಲ್ಲವೂ ಮಾಯ,
ಪ್ರೀತಿಯೊಂದೇ ಚಿರಕಾಲದ ಹಾಯ ll೦೫ll
ಒಳ್ಳೆಯ ನಡತೆಯೇ ಬದುಕಿನ ಆಸ್ತಿ,
ಸಂತಸ ಹಂಚುತ ಇರಲಿ ನಿನ್ನ ಕುಸ್ತಿ ll೦೬ll
ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


