ಧರ್ಮ ಮಾರ್ಗಕ್ಕೆ ಸೂತ್ರ ಅಗತ್ಯ: ರಾಮಚಂದ್ರಾಪುರ ಶ್ರೀ

Upayuktha
0

  • ಮಾಣಿ ಮಠದ ವಾರ್ಷಿಕೋತ್ಸವ ಕಾರ್ಯಕ್ರಮ
  • ಪೂಗ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು




ಪುತ್ತೂರು: ಜ್ಞಾನದ ದಾರಿಗೆ ಸ್ಥಾನ, ಧರ್ಮದ ಮಾರ್ಗಕ್ಕೆ ಸೂತ್ರದ ಅಗತ್ಯವಿದೆ. ಕಷ್ಟಗಳನ್ನು ಕೇಳುವ, ಉದ್ದಾರಕ್ಕೆ ದಾರಿ ತೋರಿಸುವ ಜತೆಗೆ ಹತ್ತು ಹಲವು ಶುಭಚಿಂತನೆಗಳನ್ನು ಇಟ್ಟುಕೊಂಡು ಮಠ ನಿರ್ಮಾಣವಾಗಿದೆ. ಗುರು ಪರಂಪರೆ ಹಾಗೂ ಶಿಷ್ಯರು ಸಂಗಮಗೊಳ್ಳುವ ಮಠಕ್ಕೆ ವಿಶೇಷ ಮಹತ್ವವಿದೆ. ಮಠದ ಸತ್ವ, ಪ್ರೇರಣೆ ನಮ್ಮ ಒಳಗೆ ಬರಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.


ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.



ವೇದ ಶಾಸ್ತ್ರಗಳು ನಮ್ಮ ಮೂಲವಾಗಿದ್ದು, ನಮಗೆ ಅದರ ಅರಿವು ಇರಬೇಕು. ಸಮಾಜದಲ್ಲಿ ಧರ್ಮ ಪ್ರವೃತ್ತಿ ಜಾಗೃತವಾಗಿದೆ. ಪರಂಪರೆಗಳನ್ನು ಬಿಡುವ ಕಾರ್ಯವಾಗಬಾರದು. ಮಠಕ್ಕೆ ಕೊಟ್ಟಿರುವುದು ಸಮಾಜಕ್ಕೆ ಅರ್ಪಣೆಯಾಗುತ್ತದೆ. ಮಠ ಯಾರನ್ನೂ ಏನನ್ನೂ ಕೇಳದೆ ಅದರಷ್ಟಕ್ಕೇ ನಡೆದುಕೊಂಡು ಹೋಗಬೇಕು ಎಂದ ಶ್ರೀಗಳು, ಪರಂಪರೆ ಅಡಕೆಯನ್ನು ಮಂಗಲವಾಗಿ ಕಂಡಿದೆ. ಆದರೆ ಬೇರೆಬೇರೆ ವಸ್ತುಗಳ ಸಹವಾಸದಿಂದ ಅಡಕೆಗೆ ಅಪಕೀರ್ತಿ ಬಂದಿದೆ ಎಂದು ಅಭಿಪ್ರಾಯಪಟ್ಟರು.




ಸಮರ್ಪಣೆ, ವಿವಿಧ ಕಾರ್ಯಕ್ರಮ:

ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ, ಪೂಗ ಪೂಜೆ, ಮಹಾ ಗಣಪತಿ ಹವನ, ಪೂರ್ಣ ನವಗ್ರಹ ಶಾಂತಿ, ರಾಮತಾರಕ ಹವನ, ಆಂಜನೇಯ ಹವನ ನಡೆಯಿತು. ಆಂಜನೇಯ ದೇವರಿಗೆ ರಜತ ಕವಚದ ರುದ್ರಾಕ್ಷಿ ಮಾಲೆ ಸಮರ್ಪಣೆ ನಡೆಯಿತು. ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ ಮಾಡಿದರು. ನೂತನ ಗುರಿಕ್ಕಾರರಿಗೆ ಸಾಟಿ ಸನ್ನದು ಪ್ರಧಾನ ಮಾಡಲಾಯಿತು. ರಾಮಕೃಷ್ಣ ಭಟ್ ಕುಕ್ಕಿನಡ್ಕ ರಾಮನೈವೇದ್ಯಕ್ಕೆ ಭತ್ತ ಸಮರ್ಪಣೆ ಮಾಡಿದರು. ರಘುರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಯೋಜನೆಗೆ ಸಮರ್ಪಣೆಗಳು  ನಡೆದವು.



ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃ ಪ್ರಧಾನೆ ದೇವಿಕಾ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ರಮೇಶ್ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ದರ್ಬೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಸೇವಾ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು.


ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವಲೋಕನ ನಡೆಸಿ, ವಾರ್ಷಿಕ ವರದಿ ವಾಚಿಸಿದರು. ಪತ್ರಕರ್ತ ಉದಯಶಂಕರ ನೀರ್ಪಾಜೆ, ಸುರೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top