ಚಿತ್ರಕಲಾ ಗ್ರೇಡ್ ಪರೀಕ್ಷೆ: ಶೇ.100 ಫಲಿತಾಂಶದೊಂದಿಗೆ ಆಳ್ವಾಸ್ ವಿಶಿಷ್ಟ ಸಾಧನೆ

Upayuktha
0


ಮೂಡುಬಿದಿರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಾಲೆ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ.  ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 92 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.  


ಕೇಶವ್ ಮಲ್ಯ, ಅಹನಾ ಆರ್ ಶೆಟ್ಟಿ, ಅನ್ವಿತ್ ದೀಪಕ್ ತಂಡೇಲ್, ಅನ್ವಿ ಎಸ್ ಪೂಜಾರಿ, ಸೃಷ್ಟಿ ಬಾಲಪ್ಪ ಲಟ್ಟಿ, ಪ್ರತಿಜ್ಞಾ, ಅಭಿಷೇಕ್ ರಾಮಚಲ್, ರಿಷಾನ್ ಕೆ ಎಸ್, ಋತ್ವಿಕ್ ರವಿ ಕೊನ್ನೂರ್, ಸುಪ್ರೀತಾ ರಾಯಪ್ಪ ಇಡುಡ್ಡಿ, ಪ್ರಶಾಂತ್ ಭೀಮಪ್ಪ ಕೊಲ್ಕಾರ್, ಎಂ ಅನೂಪ್ ಮಲ್ಯ, ಆದ್ಯಾ ವಿ ಶೆಟ್ಟಿ, ಪ್ರೀತಮ್, ಪವನ್ ಎ, ನಂದೀಶ್ ಮಲ್ಲಿಕಾರ್ಜುನ್ ಕಡಲಿಗೊನ್ನವರ್,  ದರ್ಶನ್ ಚೊಳಪ್ಪ ಸಮಾಜೆ, ಮಾಲಿಯಪ್ಪ ಶಣ್ಮುಖಪ್ಪ ಕಂಬಾರ್,  ವಿಶ್ವ ಶಂಕ್ರಪ್ಪ ಉಂಡಿ ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳು  ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಾಗಿದ್ದಾರೆ.


ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top