ಶ್ರೀನಿವಾಸ ಉತ್ಸವ ಬಳಗದಿಂದ ಪುರಂದರ ದಾಸರ ಆರಾಧನಾ ಸಂಗೀತೋತ್ಸವ

Upayuktha
0


ಬೆಂಗಳೂರು: ದಾಸಸಾಹಿತ್ಯದ ಪಿತಾಮಹ ಶ್ರೀ ಪುರಂದರದಾಸರ ಆರಾಧನೆಯನ್ನು ಸ್ಮರಿಸುವ ಗಾನ–ಜ್ಞಾನ ಯಜ್ಞವು ದಾಸಸಾಹಿತ್ಯ ಪ್ರಚಾರದ ಉದ್ದೇಶದೊಂದಿಗೆ ಶ್ರೀನಿವಾಸ ಉತ್ಸವ ಬಳಗದ ಆಶ್ರಯದಲ್ಲಿ ಬಸವನಗುಡಿಯ ಶ್ರೀಮದ್ ಉತ್ತರಾದಿ ಮಠದ ಆವರಣದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಿತು.


ವಿದುಷಿ ಲಕ್ಷ್ಮಿ ಭಾಸ್ಕರ್ ಅವರ ನೇತೃತ್ವದ ಸರಸ್ವತಿ ಸಂಗೀತ ಶಾಲೆ ಹಾಗೂ ವಿದುಷಿ ಚಂದ್ರಿಕಾ ಬದರಿನಾಥ್ ಅವರ ನೇತೃತ್ವದ ಶಾರದ ಗಾನಾಮೃತ ಶಿಷ್ಯರು ಪುರಂದರದಾಸರ ಕೃತಿಗಳ ಗೋಷ್ಠಿಗಾಯನವನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಪುರಂದರದಾಸರ ಬೃಹತ್ ಶಿಲಾವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ಡಾ. ಸತ್ಯಧ್ಯಾನಾಚಾರ್ ಕಟ್ಟಿ, ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ ನೆರವೇರಿಸಿದರು.


ಒಂಬತ್ತು ಭಜನಾ ಮಂಡಳಿಗಳಿಂದ ದಿನವಿಡೀ ನಿರಂತರ ನಾಮಸಂಕೀರ್ತನೆ ನಡೆದು, ಸಂಜೆ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಹಾಗೂ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಮತ್ತು ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ಅವರ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕಾ ಕೃತಿಗಳ ಗೋಷ್ಠಿಗಾಯನವನ್ನು ಸಮರ್ಪಿಸಿದರು.


ಈ ಸಂದರ್ಭದಲ್ಲಿ ವಿದುಷಿ ರಮ್ಯ ಮುರಳಿ ಹಾಗೂ ಕೃಪಾ ಶ್ರೀಕಾಂತ್ ಅವರಿಗೆ ‘ಹರಿದಾಸಾನುಗ್ರಹ ಪ್ರಶಸ್ತಿ’ಯನ್ನು ಹರಿದಾಸ ವಾಹಿನಿ ಮಾಸಿಕದ ಸಂಪಾದಕ ಡಾ. ಎ.ಬಿ. ಶ್ಯಾಮಾಚಾರ್ಯರು ಪ್ರದಾನಿಸಿದರು. ಬಳಗದ ಪೋಷಕರಾದ ಕೆ.ಆರ್. ಗುರುರಾಜ ರಾವ್, ಬಿ.ಆರ್.ವಿ. ಪ್ರಸಾದ್, ಮಾಧ್ಯಮ ಸಮಾಲೋಚಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಪದ್ಮಜಾ ಸಾರಂಗ ಹಾಗೂ ಅನಿತಾ ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top