ಸುರತ್ಕಲ್: ಸುರತ್ಕಲ್ ಸುಭಾಷಿತ ನಗರದ ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ದಿಕ್ಕಿನಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸುರತ್ಕಲ್ ರೋಟರಿ ಕ್ಲಬ್ ಮತ್ತು ಶ್ರೀ ದುರ್ಗಾ ಫೆಬ್ರಿಕೇಷನ್ ವರ್ಕ್ಸ್ ಸುರತ್ಕಲ್ ಸಹಾಭಾಗಿತ್ವದಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣ ಮಾಡಲು ಶಂಕು ಸ್ಥಾಪನಾ ಸಮಾರಂಭವು ನಡೆಯಿತು.
ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ಮೇಜರ್ ಡೋನರ್ ರಾಮಕೃಷ್ಣ ಪಿ.ಕೆ. ಮೈಸೂರು ಅವರು ಶಂಕುಸ್ಥಾಪನೆ ನೆರವೇರಿಸಿದರು. ನಗರಗಳ ವಿಸ್ತರಣೆಯೊಂದಿಗೆ ಮೂಲಭೂತ ಸೌಲಭ್ಯಗಳ ಅವಶ್ಯಕತೆ ಇದ್ದು ರೋಟರಿ ಸಂಸ್ಥೆಯು ಸಮಾಜ ಸೇವೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದೆ ಎಂದರು.
ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್ ಶೆಟ್ಟಿ ಶುಭ ಹಾರೈಸಿದರು. ಶ್ರೀ ದುರ್ಗಾ ಫೆಬ್ರಿಕೇಷನ್ ನ ರೊ. ದಿನೇಶ್ ಶೆಟ್ಟಿ ಯೋಜನೆ ಯ ವಿವರ ನೀಡಿದರು. ರೋಟರಿ ವಲಯ 2ರ ಝೋನಲ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ, ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ಉಪಾಧ್ಯಕ್ಷ ರಮೇಶ್ ರಾವ್, ಕೋಶಾಧಿಕಾರಿ ಮೋಹನ್ ರಾವ್ ಹೆಚ್, ಸಮುದಾಯ ಸೇವಾ ನಿರ್ದೇಶಕ ಚಂದ್ರ ಕಾಂತ್ ಮರಾಠೆ, ಹಿರಿಯ ಸದಸ್ಯರಾದ ಸತೀಶ್ ರಾವ್ ಇಡ್ಯಾ, ಸಚ್ಚಿದಾನಂದ ಹೊಸಬೆಟ್ಟು, ಶ್ರೀನಿವಾಸ್ ರಾವ್, ಆನಂದ ರಾವ್, ಪುರುಷೋತ್ತಮ ರಾವ್, ಶ್ರೀನಿವಾಸ್, ಸತೀಶ್ ಸದಾನಂದ್, ರಮೇಶ್ ಭಟ್ ಮತ್ತು ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್‌ನ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕಾರ್ಯದರ್ಶಿ ರಾಮ್ ಮೋಹನ್ ವೈ. ವಂದಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಕೃಷ್ಣಮೂರ್ತಿ ಕಾರ್ಯಕ್ರಮ ಸಂಯೋಜಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


