ಮಂಗಳೂರು: ನಗರದ ಪ್ರಸಿದ್ಧ ಸಂಗೀತ ಸಂಸ್ಥೆ ಸ್ವರಲಯ ಸಾಧನಾ ಫೌಂಡೇಶನ್ ಹಾಗೂ ಕಲಾ ಶಾಲೆ ವತಿಯಿಂದ ಜ.14ರಂದು ನಗರದ ಪುರಭವನದಲ್ಲಿ ಆಯೋಜನೆಗೊಳ್ಳಲಿರುವ ಸ್ವರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಹಿಂದೂಸ್ಥಾನಿ ಗಾಯಕ, ಪದ್ಮಶ್ರೀ ಪಂಡಿತ್ ಅಜೋಯ್ ಚಕ್ರವರ್ತಿ ಅವರ `ಸ್ವರ ಸಂಧ್ಯಾ' ಸಂಗೀತ ಕಛೇರಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ಕಛೇರಿ ನಡೆಸಿಕೊಡಲಿರುವ ಪಂ.ಅಜೋಯ್ ಚಕ್ರವರ್ತಿ ಅವರಿಗೆ ಹಾರ್ಮೋನಿಯಂ ನಲ್ಲಿ ಅಜಯ್ ಜೋಗ್ಲೆ ಹಾಗೂ ತಬಲಾದಲ್ಲಿ ಇಶಾನ್ ಘೋಷ್ ಸಹಕರಿಸಲಿದ್ದಾರೆ.
ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕುಮಾರ್ ಗಂಧರ್ವ ರಾಷ್ಟ್ರೀಯ ಪ್ರಶಸ್ತಿ, ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, 2012ರಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿಗಳು ಅಜೋಯ್ ಚಕ್ರವರ್ತಿ ಅವರಿಗೆ ಸಂದಿವೆ.
ಜ.14ರಂದು ಮಧ್ಯಾಹ್ನ 2 ಗಂಟೆಗೆ ಸ್ವರ ಸಂಕ್ರಾಂತಿ ಕಾರ್ಯಕ್ರಮ ಆರಂಭವಾಗಲಿದ್ದು, ಮೊದಲಿಗೆ ಕಲಾ ಶಾಲೆಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸ್ವರಲಯ ಸಿಂಫೋನಿ ವಯೋಲಿನ್ ಕಛೇರಿ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆ ಬಳಿಕ ಪಂಡಿತ್ ಅಜೋಯ್ ಚಕ್ರವರ್ತಿ ಅವರ ಹಿಂದುಸ್ಥಾನಿ ಗಾಯನ ಕಛೇರಿ ನಡೆಯಲಿದೆ.
ಕಲಾಸಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, www.swaralayasadhanafoundation.org ವೆಬ್‍ಸೈಟ್ ಮೂಲಕ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಉಚಿತ ಪಾಸ್‍ಗೆ ನೋಂದಾಯಿಸಬಹುದು. ಪಾಸ್ ನೋಂದಾವಣೆ ಮಾಡಿದ ಕಲಾಸಕ್ತರಿಗೆ ಮಾತ್ರ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಇರಲಿದೆ ಎಂದು ಸ್ವರಲಯ ಸಾಧನಾ ಫೌಂಡೇಶನ್‍ನ ಮ್ಯಾನೇಜಿಂಗ್ ಟ್ರಸ್ಟಿ ವಿದ್ವಾನ್ ವಿಶ್ವಾಸ್‍ಕೃಷ್ಣ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜ್ಯೋತಿ ರಮೇಶ್ (9900149113 ಅಥವಾ ಸವಿತಾ ರಮೇಶ್ (9663707080) ಅವರನ್ನು ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



