ಮುಳಿಯಾರು: ಆಧುನಿಕ ಶ್ರವಣಕುಮಾರ ಖ್ಯಾತಿಯ ಕೃಷ್ಣಕುಮಾರ ಅವರು ತಾಯಿ ಚೂಡಾರತ್ನ ಅವರೊಂದಿಗೆ "ಮಾತೃಸೇವಾ ಸಂಕಲ್ಪಯಾತ್ರೆ" ಮಾಡುತ್ತಾ ದೇಶಸಂಚಾರ ಮಾಡುತ್ತಾ ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರಕ್ಕೆ ಆಗಮಿಸಿ ದೇವದರ್ಶನಮಾಡಿ ಪ್ರಸಾದಭೋಜನ ಸ್ವೀಕರಿಸಿದರು.
ಕ್ಷೇತ್ರ ಪ್ರಬಂಧಕ ಎನ್ ಸೀತಾರಾಮ ಬಳ್ಳುಳ್ಳಾಯ ಹಾಗೂ ಸ್ಥಳೀಯರು ಅವರನ್ನು ಸ್ವಾಗತಿಸಿ ಸತ್ಕರಿಸಿದರು. ನಿವೃತ್ತ ಅಧ್ಯಾಪಕ ಗೋವಿಂದಬಳ್ಳಮೂಲೆ ಉಪಸ್ಥಿತರಿದ್ದು ಈ ಸಂದರ್ಭದಲ್ಲಿ ಕೃಷ್ಣಕುಮಾರ ಅವರು ತಮ್ಮ ಯಾತ್ರೆಯ ವಿಶಿಷ್ಠ ಅನುಭವ ಕಥನವನ್ನು ವಿವರಿಸಿದರು.
ಈಗಾಗಲೇ ಮಾತೃಶ್ರೀಯವರೊಂದಿಗೆ ತಮ್ಮ ಬಜಾಜ್ ಸ್ಕೂಟರಿನಲ್ಲಿ ಭಾರತದೇಶದಾದ್ಯಂತ ಸಂಚರಿಸಿ ತಮ್ಮ ಸಂಕಲ್ಪವನ್ನು ಸಾಧಿಸುತ್ತಿರುವುದನ್ನು ಗಮನಿಸಿದ ಬಜಾಜ್ ಕಂಪೆನಿಯವರು ಅವರಿಗೆ ಎಲೆಕ್ಟ್ರಿಕ್ ಸ್ಕೂಟರನ್ನು ಕೆಡುಗೆಯಾಗಿ ನೀಡಿ ಗೌರವಿಸಿದೆ.
ಇತ್ತೀಚೆಗೆ ಕಾಸರಗೋಡಿನ ಕನ್ನಡ ಭವನದ ರಜತಮಹೋತ್ಸವದ ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಶ್ರೀಯುತರಿಗೆ ಮಾತೃ ಸೇವಾ ರತ್ನ 2026 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


