ಉಡುಪಿ: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಸಂಯೋಜನೆಯಲ್ಲಿ ಶುಕ್ರವಾರ ರಾತ್ರಿ ವಿವಿಧ ಖ್ಯಾತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ 'ನಳ-ದಮಯಂತಿ' ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಹಿಲ್ಲೂರು ರಾಮಕೃಷ್ಣ ಹೆಗಡೆ, ಪರಮೇಶ್ವರ ಭಂಡಾರಿ ಕರ್ಕಿ, ಶಶಾಂಕ ಆಚಾರ್ಯ, ಶಿವಾನಂದ ಕೋಟ, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ (ಋತುಪರ್ಣ), ಕೊಂಡದಕುಳಿ ರಾಮಚಂದ್ರ ಹೆಗಡೆ (ನಳ ಮಹಾರಾಜ), ಅಶೋಕ್ ಭಟ್ ಸಿದ್ಧಾಪುರ (ಶನಿ), ಚಪ್ಪರಮನೆ ಶ್ರೀಧರ ಹೆಗಡೆ (ಹಾಸ್ಯ) ಮೂರೂರು ಸುಬ್ರಹ್ಮಣ್ಯ ಹೆಗಡೆ (ದಮಯಂತಿ), ಮುಗ್ವಾ ಗಣೇಶ್ ನಾಯ್ಕ, ವಿನಯ್ ಬೇರೊಳ್ಳಿ, ನಿರಂಜನ ಜಾಗ್ನಳ್ಳಿ, ದೀಪಕ್ ಕುಂಕಿ ಉತ್ತಮವಾಗಿ ಪಾತ್ರ ನಿರ್ವಹಿಸಿದರು.
ಶೀರೂರು ಮಠದ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ ಶೆಟ್ಟಿ ಬೈಕಾಡಿ, ಕಲಾರಂಗದ ನಾರಾಯಣ ಹೆಗಡೆ ಎಲ್ಲ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ, ಪ್ರೇಕ್ಷಕರಿಗೆ ಪರಿಚಯಿಸಿದರು. ಪ್ರದರ್ಶನದ ಬಳಿಕ ಎಲ್ಲ ಕಲಾವಿದರಿಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆ, ಕೃಷ್ಣನ ಮೂರ್ತಿ ನೀಡಿ ಆಶೀರ್ವದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

