ಮಂಗಳೂರು ಕನ್ನಡ ಸಾಹಿತ್ಯ ಪರಿಷತ್‌ದಿಂದ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ

Upayuktha
0


ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಇದರ ವತಿಯಿಂದ ದಿನಾಂಕ  ಶುಕ್ರವಾರ ಸಂಜೆ ಶಾರದಾ ವಿದ್ಯಾಲಯ  ಕೊಡಿಯಾಲ್ ಬೈಲ್ ಇಲ್ಲಿ ಶ್ರೀ ವಿನಯ ಹೆಗ್ಡೆ ಇವರಿಗೆ ಶ್ರದ್ದಾಂಜಲಿ ಸಭೆ ಜರುಗಿತು. ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಮಂಜುನಾಥ ರೇವಣಕರ್ ಅವರ ಅಧ್ಯಕ್ಷತೆ ಯಲ್ಲಿ ಈ ಸಭೆ ಜರುಗಿತು. 


ಕಸಾಪ ಮಂಗಳೂರು ಇದರ ಕಾರ್ಯದರ್ಶಿ ಡಾ. ಮುರಲೀ  ಮೋಹನ್ ಚೂಂತಾರು ಅವರು ಮಾತನಾಡಿ ಶ್ರೀ ವಿನಯ ಹೆಗ್ಡೆಯವರು ಕಲೆ ಮತ್ತು ಸಾಹಿತ್ಯಕ್ಕೆ ಬಹು ದೊಡ್ಡ ಪೋಷಕರಾಗಿದ್ದರು. ಆರೋಗ್ಯ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದ ಜೊತೆಗೆ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಾರೆ.ಅವರ ಸಾವಿನಿಂದ ಬಹು ದೊಡ್ಡ ನಷ್ಟ ಸಾಹಿತ್ಯ ವಲಯಕ್ಕೆ ಆಗಿದೆ ಎಂದರು.ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂದು ಹಾರೈಸಿದರು.


ಕಸಾಪ ಇದರ ಅಧ್ಯಕ್ಷರಾದ ಮಂಜುನಾಥ  ರೇವಣ್ಕರ್ ಮಾತನಾಡಿ ಶ್ರೀ ವಿನಯ ಹೆಗ್ಡೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅವಿಸ್ಮರಣೀಯ.


ಆರೋಗ್ಯ ಕ್ಷೇತ್ರಕ್ಕೂ ಅವರು ಮಹೋನ್ನತ ಕೊಡುಗೆ ನೀಡಿ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ನುಡಿದರು.


ಗೌರವ ಕಾರ್ಯದರ್ಶಿ ಕಸಾಪ ಮಂಗಳೂರು, ಗಣೇಶ್ ಪ್ರಸಾದ್ ಜೀ ಅವರು ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು‌ .ಕಸಾಪ ಮಂಗಳೂರು ಇದರ  ಕಾರ್ಯಕಾರಿ ಸಮಿತಿ ಸದಸ್ಯರಾದ ಸನತ್ ಜೈನ್, ರವೀಂದ್ರನಾಥ್, ಕೃಷ್ಣಪ್ಪ ನಾಯಕ್, ನಿಜಗುಣ ದೊಡ್ಡಮನಿ ಮುಂತಾದವರು ಈ ಸಂದರ್ಬದಲ್ಲಿ ಹಾಜರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top