ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿ ಮೊದಲ ದಿನ ಯಶಸ್ವಿಯಾಗಿ ಸಂಪನ್ನ

Upayuktha
0

ಚಿಂತಕರು, ಓದುಗರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳ ಸಮಾಗಮ



ಮಂಗಳೂರು ಲಿಟ್ ಫೆಸ್ಟ್ ವೇದಿಕೆ,ಮಂಗಳೂರು: ಎಪ್ಪತ್ತಕ್ಕೂ ಹೆಚ್ಚು ಚಿಂತಕರು, ಸಾಹಿತ್ಯಾಸಕ್ತ ಓದುಗರು, ಯುವ ಪೀಳಿಗೆಯ ಮಂದಿ ಎಲ್ಲರ ಭಾಗವಹಿಸುವಿಕೆಯಿಂದ ಮಂಗಳೂರು ಲಿಟ್ ಫೆಸ್ಟ್ ಎಂಟನೇ ಆವೃತ್ತಿಯ ಮೊದಲ ದಿನ ಯಶಸ್ವಿಯಾಗಿ ಸಂಪನ್ನಗೊಂಡಿದೆ.


ಟಿಎಂಎ ಪೈ ಇಂಟರ್ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ ಅಲ್ಲಿ ಹೊತ್ತಿಗಗಳನ್ನು ಹೊತ್ತ ಸರಸ್ವತಿ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಉದ್ಘಾಟನಾ ಗೋಷ್ಠಿಯಲ್ಲಿ ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಎಂಬ ವಿಷಯದ ಕುರಿತು ಅಜಕ್ಕಳ ಗಿರೀಶ್‌ ಭಟ್‌ ಹಾಗೂ ಶತಾವಧಾನಿ ಆರ್‌ ಗಣೇಶ್‌ ಸಂವಾದ ನಡೆಸಿದರು. ಮೌಲ್ಯಗಳ ಬಗ್ಗೆ ಆರ್.‌ ಗಣೇಶ್‌ ಮಾತನಾಡಿದರು. 


8ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಸ್ವೀಕರಿಸಿದ ಡಾ.ಮೀನಾಕ್ಷಿ ಜೈನ್ ಅವರು ಬಳಿಕ ನಾಗರೀಕತೆಯ ಜೊತೆಗೆ ಮರುಸಂಪರ್ಕ ಎಂಬ ಗೋಷ್ಠಿಯಲ್ಲಿ ಭಾಗವಹಿಸಿದರು. ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌ ‘ಗ್ರೇಟ್‌ ಪವರ್‌ ಗೇಮ್ಸ್‌ ʼ ಎಂಬ ಗೋಷ್ಠಿಯಲ್ಲಿ ಅಮೆರಿಕ, ಚೀನಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಭಾರತದ ವಿರುದ್ಧ ಕೆಲಸ ಮಾಡುವ ಬಗ್ಗೆ ಹಾಗೂ ಹೇಗೆ ಭಾರತ ಬಲಿಷ್ಠವಾಗುವತ್ತ ಸಾಗುತ್ತಿದೆ ಎನ್ನುವುದರ ಕುರಿತು ಮಾತನಾಡಿದರು. 


ವಿದ್ಯಾರ್ಥಿಗಳ ಸಂಭ್ರಮ:

ವಿವಿಧ ಸಾಹಿತ್ಯಾಸಕ್ತರ ಜತೆಗೆ ಹಲವು ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಲಿಟ್‌ ಫೆಸ್ಟ್‌ ಸಂಭ್ರಮದಲ್ಲಿ ಭಾಗಿಯಾದರು. ಸೆಲ್ಫಿ ಸ್ಟಾಂಡ್‌, ಬುಕ್‌ ಅಡ್ಡ ಸೇರಿದಂತೆ ಎಲ್ಲ ಗೋಷ್ಠಿಗಳಲ್ಲೂ ಆಸಕ್ತರು ಭಾಗಿಯಾಗಿ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಗೋಷ್ಠಿಯ ರಂಗನ್ನು ಹೆಚ್ಚಿಸಿದರು. ತಮ್ಮಿಷ್ಟದ ಲೇಖಕರ ಹಸ್ತಾಕ್ಷರ, ಸೆಲ್ಫಿ ಪಡೆದು ಸಂಭ್ರಮಿಸಿದರು. 


ಆಸಕ್ತಿಕರ ಗೋಷ್ಠಿ:

ಮುಖ್ಯ ವೇದಿಕೆಯಲ್ಲಿ ʼಭೈರಪ್ಪನವರ ಸಾಹಿತ್ಯದಲ್ಲಿ ಇತಿಹಾಸ ಪ್ರಜ್ಞೆʼ ಕುರಿತು ಸಂದೀಪ್‌ ಬಾಲಕೃಷ್ಣ ಹಾಗೂ ರೋಹಿತ್‌ ಚಕ್ರತೀರ್ಥ ಸಂವಾದ ಜನರ ಗಮನ ಸೆಳೆಯಿತು. ಬಳಿಕ ʼವೈಚಾರಿಕ ಆಂದೋಲನ: ರಾಷ್ಟ್ರೀಯ ಸಾಹಿತ್ಯದ ಭೂಮಿಕೆʼ ವಿಷಯದ ಮೇಲೆ ನರೇಂದ್ರ ಕುಮಾರ್‌ ಎಸ್. ಎಸ್‌ ಹಾಗೂ ಪಲ್ಲವಿ ರಾವ್‌ ನಡೆಸಿದ ಸಂವಾದಕ್ಕೂ ಅತ್ಯುತ್ತಮ ಸ್ಪಂದನೆ ದೊರಕಿತು. ಕೊನೆಯ ಅವಧಿಯಲ್ಲಿ ಪಿ. ಶೇಷಾದ್ರಿ ನಿರ್ದೇಶನದಲ್ಲಿ ಮೂಡಿ ಬಂದ ʼಭೈರಪ್ಪ ಬದುಕು ಮತ್ತು ಬರಹʼ ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇನ್ನೊಂದು ವೇದಿಕೆಯಲ್ಲಿ ʼನೇತ್ರಾವತಿ ಟು ನೈಲ್‌ʼ ಎಂಬ ಗೋಷ್ಠಿಯಲ್ಲಿ ನದಿಗಳ ಕುರಿತಾಗಿ ಡಾ. ರಘಹು ಮುರ್ತುಗುಡ್ಡೆ, ಸಿಎ ಗಿರಿಧರ್‌ ಕಾಮತ್‌, ಸಿಎಂಡಿಇ ಉದಯ್‌ ರಾವ್‌ ಮಾತನಾಡಿದರು,. ಈ ಗೋಷ್ಠಿಯನ್ನು ಪ್ರಶಾಂತ್‌ ವೈದ್ಯರಾಜ್‌ ನಿರ್ವಹಿಸಿದರು. ಜಿ.ಬಿ ಹರೀಶ್‌ ಹಾಗೂ ಅರುಣ್‌ ಭಾರಧ್ವಾಜ್‌ ನಡೆಸಿದ ʼಪದಗಳೊಳಗಿನ ಪಥಗಳುʼ ಸಂವಾದದಲ್ಲಿ ಆನಂದ ಕುಮಾರಸ್ವಾಮಿ ಅವರ ಸಾಹಿತ್ಯದಲ್ಲಿರುವ ವಿಷಯಗಳ ಕುರಿತು ಚರ್ಚಿಸಲಾಯಿತು. ಬಳಿಕ ಸೀಮಾ ಬುರ್ಡೆ ನಿರ್ವಹಿಸಿದ ಸಿನಿಮಾ ಬರವಣಿಗೆ ಹಾಗೂ ನಟನೆಯ ಕುರಿತು ರಂಜನಿ ರಾಘವನ್‌ ಹಾಗೂ ಪೂರ್ಣಿಮಾ ಸುರೇಶ್‌ ಮಾತನಾಡಿದರು. ಕೊನೆಯ ಅವಧಿಯಲ್ಲಿ ʼತುಳು ಭಾಷೆ, ಜನಪದ, ಸಾಹಿತ್ಯ ಹಾಗೂ ಸಂಸ್ಕೃತಿ: ನಿನ್ನೆ-ಇಂದು-ನಾಳೆʼ ಗೋಷ್ಠಿಯನ್ನು ಡಾ. ರವೀಶ ಪಡುಮಲೆ, ಯದುಪತಿ ಗೌಡ ಹಾಗೂ ಡಾ. ವಸಂತ ಕುಮಾರ್‌ ಪೆರ್ಲ ನಡೆಸಿಕೊಟ್ಟರು. 


ಹರಟೆ ಕಟ್ಟೆ:

ಎರಡು ವೇದಿಕಗಳಲ್ಲಿ ಗೋಷ್ಠಿಗಳು ನಡೆಯುತ್ತಿದ್ದರೆ ಇನ್ನೊಂದು ಆಕರ್ಷಣೆ ಎಂದರೆ ಹರಟೆ ಕಟ್ಟೆ. ಅತಿಥಗಳು ಹಾಗೂ ಪ್ರೇಕ್ಷಕವರ್ಗ ಸಂವಾದ ನಡೆಸಬಹುದಾದ ಜಾಗ ಇದಾಗಿತ್ತು. ʼಅನುವಾದಗಳಲ್ಲಿ ಭೈರಪ್ಪʼ ಎಂಬ ಗೋಷ್ಠಿಯನ್ನು ಡಾ. ಎಂ.ಎಸ್‌ ವಿಜಯಾ ಹರನ್‌ ಹಾಗೂ ಡಾ. ಎಚ್‌.ಆರ್‌ ವಿಶ್ವಾಸ್‌ ನಡೆಸಿದರು. ಹಾಗೇ ʼಗೀತಾ ಫಾರ್‌ ಜೆನ್‌ ಝಿʼ ಎಂಬ ವಿಶೇಷ ಗೋಷ್ಠಿ ಇಲ್ಲಿ ಏರ್ಪಡಿಸಲಾಗಿತ್ತು. ಹರಿಣಿ ಪಗದಲ್‌ ಹಾಗೂ ಆಶ್ರಿಸ್‌ ಚೌಧರಿ ಇದರ ಮುಖ್ಯ ಮಾತುಗಾರರಾಗಿದ್ದರು. ವಿಕ್ರಮ್‌ ಫಡ್ಕೆ ಹಾಗೂ ಕಶ್ಯಪ್‌ ಎನ್.‌ ನಾಯ್ಕ್‌ ನಡೆಸಿದ ಸಂವಾದದಲ್ಲಿ ಭೈರಪ್ಪನವರ ಸಾಹಿತ್ಯದಲ್ಲಿ ರಾಜನೀತಿಯ ಪಾತ್ರ, ಲೋಕಪ್ರಜ್ಞೆಯ ಪಾರಮ್ಯ ಬಗ್ಗೆ ಬೆಳಕು ಚೆಲ್ಲಲಾಯಿತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top