ಪುತ್ತೂರು: ಖೋ ಖೋ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಇದೇ ಜನವರಿ 11 ರಿಂದ 15 ರವರೆಗೆ ತೆಲಂಗಾಣ ರಾಜ್ಯದ ಖಾಝಿಪೇಟ್ ನಲ್ಲಿ ನಡೆಯಲಿರುವ 58ನೇ ರಾಷ್ಟ್ರೀಯ ಸೀನಿಯರ್ ಖೋ ಖೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಪುರುಷರ ಖೋ ಖೋ ತಂಡದ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್.ಎನ್ ಆಯ್ಕೆಯಾಗಿದ್ದಾರೆ.
ಖೋ ಖೋ ಕೋಚಿಂಗ್ ನಲ್ಲಿ ಎನ್.ಐ.ಎಸ್ ಅರ್ಹತೆ ಪಡೆದ ತರಬೇತುದಾರರಾಗಿರುವ ಕಾರ್ತಿಕ್ ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಅವರು ಪ್ರಾಥಮಿಕ ಶಿಕ್ಷಣವನ್ನು ಬಿ ಇ .ಎಂ ಶಾಲೆ, ಪ್ರೌಢ ಶಿಕ್ಷಣವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪಿ .ಯು ಶಿಕ್ಷಣವನ್ನು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್, ಹಾಗೂ ಪದವಿಯನ್ನು ಪುತ್ತೂರಿನ ಜಿಡೆಕಲ್ಲು ಸರಕಾರಿ ಪದವಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಪಿ..ಎಡ್ ಮತ್ತು ಎಂ.ಪಿ .ಎಡ್ ಪದವಿಯನ್ನು ಆಳ್ವಾಸ್ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಎನ್.ಐ.ಎಸ್ ಕೋಚಿಂಗ್ ಡಿಪ್ಲೋಮೋ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಖೋ ಖೋ ಫೆಡರೇಶನ್ ಆಫ್ ಇಂಡಿಯಾದಿಂದ ರಾಷ್ಟ್ರೀಯ ಖೋ ಖೋ ತೀರ್ಪುಗಾರರಾಗಿ ಕೂಡ ಅರ್ಹತೆ ಪಡೆದಿದ್ದಾರೆ.
ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಕೂಡ ಪ್ರತಿನಿಧಿಸಿರುತ್ತಾರೆ. ಪುತ್ತೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಶಾಲಾ ಕಾಲೇಜುಗಳಲ್ಲಿ ಖೋ ಖೋ ತರಬೇತಿ ನೀಡುತ್ತಿದ್ದಾರೆ. ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿಯಾಗಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟಗಳನ್ನು ಸಂಘಟಿಸಿದ್ದಾರೆ. ಇವರು ಪುತ್ತೂರು ನೆಹರು ನಗರದ ಸಿಟಿಗುಡ್ಡೆ ನಾರಾಯಣ ಮತ್ತು ವಿಜಯ ದಂಪತಿಯ ಪುತ್ರ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


