ಹೊಸದಿಲ್ಲಿ: ಮಧ್ವನವಮೀ ಉತ್ಸವವು ನವದೆಹಲಿ ವಸಂತ್ ಕುಂಜ್ ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ವೈಭವದಿಂದ ನೆರವೇರಿತು. ಮುಂಜಾನೆ ಕೃಷ್ಣ ದೇವರು ಮುಖ್ಯಪ್ರಾಣದೇವರಿಗೆ ಅರ್ಚಕರಾದ ವಿದ್ವಾನ್ ಸುಮನ್ ಆಚಾರ್ಯ ಸೂರಜ್ ಆಚಾರ್ಯ ಮತ್ತು ಅಧ್ಯಾಪಕ ವಿದ್ವಾನ್ ಶ್ರೀನಿಧಿ ಆಚಾರ್ಯ ಕುಲಕರ್ಣಿಯವರು ಶ್ರೀ ಹರಿವಾಯುಸ್ತುತಿ ಪುನಶ್ಚರಣ ಸಹಿತ ಕ್ಷೀರಾಭಿಷೇಕ ಪ್ರಸನ್ನ ಪೂಜೆಗಳನ್ನು ನೆರವೇರಿಸಿದರು.
ಬಳಿಕ ಮಧ್ವಾಚಾರ್ಯರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ (ಡಾ ಬನ್ನಂಜೆ ಗೋವಿಂದಾಚಾರ್ಯರ ವ್ಯಾಖ್ಯಾನ) ವಿಷ್ಣುತತ್ವ ನಿರ್ಣಯ ಹಾಗೂ ಮಧ್ಚಾಚಾರ್ಯರ ಮಹಾತ್ಮೆಯ ಶ್ರೀ ಮಧ್ವ ವಿಜಯ ಗ್ರಂಥಗಳು ಹಾಗೂ ಮಧ್ವರ ಭಾವಚಿತ್ರಗಳನ್ನು ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿ ಉತ್ಸವ ನಡೆಸಲಾಯಿತು. ಶ್ರೀಮಧ್ವ ವಿಜಯದ ಸಾಮೂಹಿಕ ಪಾರಾಯಣ ನಡೆಯಿತು.
ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಕೇಂದ್ರೀಯ ಸಂಸ್ಕೃತ ವಿವಿಯ ಪ್ರಾಧ್ಯಾಪಕರಾದ ವಿದ್ವಾನ್ ಜಯಕಾಂತ್ ಶರ್ಮಾ ಅವರು ಅಧ್ಯಕ್ಷತೆ ವಹಿಸಿ ಮಧ್ಚಾಚಾರ್ಯರ ಸಿದ್ಧಾಂತದ ಹಿನ್ನೆಲೆಯಲ್ಲಿ ಪಂಚಬೇಧ ನಿರೂಪಣೆ ಎಂಬ ವಿಷಯದಲ್ಲಿ ಪ್ರಗಲ್ಭ ಉಪನ್ಯಾಸ ನೀಡಿದರು.
ಗುರುಕುಲದ ಇಬ್ಬರು ಬಾಲಕರು ಮಧ್ವಾಚಾರ್ಯರ ಜನ್ಮವೃತ್ತಾಂತ ಮತ್ತು ಸಿದ್ಧಾಂತಗಳ ಕುರಿತಾಗಿ ಮಾತನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಯವರು ಶುಭಾಶಂಸನೆಗೈದರು. ಸುಮನ್ ಆಚಾರ್ಯರು ಸ್ವಾಗತಿಸಿ ವಿದ್ಯಾರ್ಥಿ ಮಂಗಲಮ್ ನಿರೂಪಿಸಿದರು. ಅಧ್ಯಾಪಕರಾದ ವಿದ್ವಾನ್ ಕೃಷ್ಣ ಆಚಾರ್ಯರು ವಂದನೆ ಸಲ್ಲಿಸಿದರು. ವಿದ್ವಾನ್ ಶ್ರೀಕರ ಕುಲಕರ್ಣಿ ಸಂಯೋಜನೆಯಲ್ಲಿ ಸಹಕರಿಸಿದರು. ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯರ ಪೂರ್ಣ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

