ಅಗಲ್ಪಾಡಿ ಜಾತ್ರೋತ್ಸವ: ಡಾ. ವಾಣಿಶ್ರೀ ತಂಡದಿಂದ 169ನೇ ಸಾಂಸ್ಕೃತಿಕ ವೈಭವ

Upayuktha
0


ಬದಿಯಡ್ಕ: ಆಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ನೇತೃತ್ವದಲ್ಲಿ ನಡೆಯುವ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಸಂಸ್ಥೆಯ ವತಿಯಿಂದ ನಿತ್ಯ ವಿನೂತನ ವೈವಿಧ್ಯಮಯ 169 ನೇ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


ದೇವಸ್ಥಾನದ ಭವ್ಯ ವೇದಿಕೆಯಲ್ಲಿ ಸಾಹಿತ್ಯಾಮೃತ ಗಾನಾಮೃತ ಕನ್ನಡ ಕೋಗಿಲೆಗಳ ನಿನಾದ ಕಾರ್ಯಕ್ರಮ ಬಹಳ ವೈಭವದಿಂದ ಜರಗಿತು. ಕನ್ನಡ ಸಾಹಿತ್ಯಾಮೃತ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ದೇವಿಗೆ ಡಾ. ವಾಣಿಶ್ರೀ ಅವರು ಅರ್ಪಿಸಿದರು.


ದಿವಾಕರ ಕಾಸರಗೋಡು ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಮಲ್ಲ ನಿವಾಸಿ ಸೀತಾರಾಮ್ ಅವರಿಂದ ಕನ್ನಡ ಹಾಗೂ ತುಳು ಹಾಡಿನ ಮೂಲಕ ಸಂಗೀತ ಕಲಾಸೇವೆ ಜರಗಿತು. ವಿಶ್ವನಾಥ ಪುತ್ತಿಗೆ ಶಿವನ ಹಾಡು ಹೇಳಿ ಕಾರ್ಯಕ್ರಮಕ್ಕೆ ಹೊಸ ಕಳೆ ಕೊಟ್ಟರು.


ಭಾಗವಹಿಸಿದ ಸಂಸ್ಥೆಯ ಎಲ್ಲಾ ಕನ್ನಡ ಸಂಗೀತ ಮಾಣಿಕ್ಯಗಳಿಗೆ ದೇವಸ್ಥಾನದ ವತಿಯಿಂದ ಶಾಲು ಹೊದೆಸಿ ಗೌರವ ಪುರಸ್ಕಾರ ನೀಡಲಾಯಿತು. ಸಂಸ್ಥೆಯ ವತಿಯಿಂದ ಗೌರವಧನ ಪುಸ್ತಕ ಕೊಡಲಾಯಿತು.



ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದೆಸಿ ದೇವರ ಪ್ರಸಾದ ಕೊಟ್ಟು ಕನ್ನಡಮ್ಮನ ಮಗದಷ್ಟು ಸೇವೆಗಾಗಿ ಹರಸಿದರು.


ಕಾರ್ಯಕ್ರಮದಲ್ಲಿ ನಾಗರಾಜ್ ಭಟ್, ಮಧುಸೂಧನ ಭಟ್, ಶಿವದಾಸ್, ಮುರಳಿ ಭಟ್, ಬಾಲಸುಬ್ರಹ್ಮಣ್ಯ ಭಟ್, ಶಾಂತರಾಮ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top