
ಹಾಸನ: ಕದಂಬ ಸೈನ್ಯ ಕನ್ನಡ ಸಂಘಟನೆಯು ಭುವನೇಶ್ವರಿದೇವಿ ದೇವಸ್ಥಾನ ಆಡಳಿತ ಮಂಡಳಿ ಸಹಕಾರದೊಂದಿಗೆ ಭುವನಗಿರಿ ಶ್ರೀ ಭುವನೇಶ್ವರಿದೇವಿ ದೇವಸ್ಥಾನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಸಾಹಿತ್ಯ ಸಮಾಜ ಸೇವೆ, ಪ್ರಗತಿಪರ ರೈತರು ಮತ್ತು ರಂಗ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಸುದೀರ್ ಆರ್, ನಾಯರ್ ಬನವಾಸಿ ಪತ್ರಕರ್ತರು ಇವರಿಗೆ ಕದಂಬ ಕಾಕುತ್ಸವರ್ಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಕದಂಬ ರಂಗ ಪ್ರಶಸ್ತಿ ಪುರಸ್ಕೃತರು ಸಾಹಿತಿ ಗೊರೂರು ಅನಂತರಾಜು ಹಾಸನ, ಸಿದ್ಧಾಪುರ ತಾ. ಕಸಾಪ ಅಧ್ಯಕ್ಷರು ಚಂದ್ರಶೇಖರ ನಾಯ್ಕ ಕಂಬ್ರಿಗದ್ದೆ, ಪಿ.ವಿ.ಹೆಗಡೆ ಹೊಸಗದ್ದೆ ಯಕ್ಷಗಾನ, ಶಿರಸಿಯ ರಿತೀಶ್ ಕೆ.ರಾಮದಾಸ್, ಮಹದೇವ ಜಿ.ಛಲವಾದಿ, ಸಿದ್ದಾಪುರ ತಾಲ್ಲೂಕಿನ ಮುರುಗೇಶ್ ಬಸ್ತಿಕೊಪ್ಪ ಗಣಪತಿ ಹೆಗಡೆ ವಡ್ಡಿನಗದ್ದೆ, ಗಾಯಿತ್ರಿ ಭಟ್, ಶಿವಾನಂದ ನಿಂಗಪ್ಪ ಇಸರೆಡ್ಡಿ ಬಾಗಲಕೋಟೆ. ಕದಂಬ ರಂಗರತ್ನ ಪ್ರಶಸ್ತಿ ಪುರಸ್ಕೃತರು ನಾಗಪತಿ ವಡ್ಡಿನಗದ್ದೆ ಸಿದ್ದಾಪುರ, ಹಾಸನದ ಪ್ರೊ.ಎ.ಹೆಚ್.ಗಣೇಶ ಅಂಕಪುರ, ರವಿಕುಮಾರ್ ಬೇಕರಿ ರಾಜೇಗೌಡ ಅರಕಲಗೊಡು, ವೆಂಕಟೇಗೌಡ ಪಟ್ನ ಆಲೂರು ತಾ. ಕದಂಬ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕತರು ಪುಟ್ಟಸ್ವಾಮಿಗೌಡರು, ಹೊಳೆನರಸೀಪುರ, ಜಿ.ಕೆ. ಬಸವರಾಜ ಜಯಪುರ, ಕದಂಬ ಸೇವಾರತ್ನ ಪ್ರಶಸ್ತಿ ಪುರಸ್ಕøತರು ಮಂಜುನಾಥ ಡಿ.ನಡುವಿನಮನಿ, ಗೋಕರ್ಣ, ಸುಕನ್ಯಾ ಈರಯ್ಯ ಹಿರೇಮಠ, ವೀರರಾಣಿ ಚೆನ್ನಭೈರಾದೇವಿ ಪ್ರಶಸ್ತಿ ಪುರಸ್ಕøತರು ಸಿದ್ದಾಪುರ ತಾಲ್ಲೂಕಿನ ಕಲಾವಿದರು ಸುಮಿತ್ರ ಗಣಪತಿ ಶೇಟ್, ಲೀಲಾವತಿ ಎಸ್. ಕೊಂಡ್ಲಿ, ಹಾಸನದ ಶಶಿಕಲಾ ಜಗದೀಶ್. ಕದಂಬ ಸೈನ್ಯ ಸಂಸ್ಥಾಪಕ ಅಧ್ಯಕ್ಷರು ಬೇಕ್ರಿ ರಮೇಶ್ ಅಧ್ಯಕ್ಷತೆಯಲ್ಲಿ ರಮೇಶ್ ಹನುಮಂತಪ್ಪ ಹಡಗದ, ಹಾದ್ರಿಹಳ್ಳಿ ಹಿರೇಕೆರೂರು ತಾ. ಮತ್ತು ಸಿದ್ದಾಪುರ ತಾ. ಪತ್ರಕರ್ತರ ಸಂಘದ ಅಧ್ಯಕ್ಷರು ರಮೇಶ್ ಹೆಗಡೆ ಹಾರ್ಸಿಮನೆ ಉದ್ಘಾಟನೆಯನ್ನು ನೆರವೇರಿಸಿದರು.
ಪತ್ರಕರ್ತರು ಕನ್ನಡ ಹೋರಾಟಗಾರರು ಉದಯಕುಮಾರ್ ಕಾನಳ್ಳಿ ಬನವಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರು ಗಂಗಾಧರ ಕೊಳಗಿ, ಕೆಕ್ಕಾರ ನಾಗರಾಜಭಟ್ಟ್, ಪಂ.ಪುಟ್ಟರಾಜ ಗವಾಯಿ ರೈತಸಂಘದ ರಾಜ್ಯಾಧ್ಯಕ್ಷರು ಎಂ.ಪಿ.ಮುಳಗುಂದ ಗದಗ, ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸಿ.ಎನ್.ಹೆಗಡೆ, ರಾಘವೇಂದ್ರ ನಾಯ್ಕ, ಕದಂಬ ಸೇನೆ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಮನಗರ ಜಿಲ್ಲಾಧ್ಯಕ್ಷರು ಉಮೇಶ್ ರಾಂಪುರ, ಉತ್ತರ ಕನ್ನಡ ಜಿಲ್ಲಾ ಸಂಚಾಲಕರು ಗುತ್ಯಪ್ಪ ಮಾದರ್ ಕಪ್ಪಗೇರಿ ಬನವಾಸಿ, ಬಾಗಲಕೋಟೆ ಜಿಲ್ಲಾಧ್ಯಕ್ಷರು ಬಸವನಗೌಡ ಪಾಟೀಲ್ ಮುಧೋಳ, ರಾಮನಗರ ಜಿಲ್ಲಾ ಉಪಾಧ್ಯಕ್ಷರು ರವಿದೇವರಹೊಸಹಳ್ಳಿ, ವಿಜಯಪುರ ಜಿಲ್ಲೆ ಉಪಾಧ್ಯಕ್ಷರು ಇರ್ಫಾನ್ ಎಸ್. ಬೆಳಗಿ ಮೊದಲಾದವರು ಇದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

