ಕನ್ಯಾನ: ಇಲ್ಲಿನ ಬಂಡಿತ್ತಡ್ಕ ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಊರಿನ ನಾಗರಿಕರು ಹಾಗೂ ಪೋಷಕರ ಸಹಕಾರದೊಂದಿಗೆ ಆದಿತ್ಯವಾರದಂದು ‘ಮಕ್ಕಳ ಹಬ್ಬ’ ಕಾರ್ಯಕ್ರಮ ನಡೆಯಿತು. ‘ಹಳೆ ಬೇರು ಹೊಸ ಚಿಗುರು’ ಎಂಬ ಪರಿಕಲ್ಪನೆಯಡಿಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ, ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಸಂಸ್ಥಾಪಕ ಉನೈಸ್ ಪೆರಾಜೆ ಅವರು ಮಕ್ಕಳ ಜಾರುಬಂಡಿ ಹಾಗೂ ನೂತನ ಆಟೋಪಕರಣಗಳನ್ನು ಉದ್ಘಾಟಿಸಿದರು. ಬಳಿಕ ಮುಖ್ಯ ಅತಿಥಿಗಳಾದ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಗಂಗಾಧರ ಬನಾರಿ ಅವರು, ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ಗಿಡಕ್ಕೆ ನೀರು ಉಣಿಸುವ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕೆಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕುಎಂದು ಕಿವಿಮಾತು ಹೇಳಿದರು. ಉನೈಸ್ ಪೆರಾಜೆ ಮಾತನಾಡಿ, ಮುಚ್ಚುವ ಹಂತದಲ್ಲಿರುವ ಕನ್ನಡ ಶಾಲೆಗಳಲ್ಲಿ ಆಟೋಪಕರಣಗಳ ಅಳವಡಿಕೆಯು ಮಕ್ಕಳನ್ನು ಆಕರ್ಷಿಸಲು ಮತ್ತು ದಾಖಲಾತಿ ಹೆಚ್ಚಿಸಲು ಸಹಕಾರಿ ಎಂದರು.
ದಾಖಲಾತಿ ಹೆಚ್ಚಳಕ್ಕೆ ವಿನೂತನ ಕೊಡುಗೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೃಷ್ಣಕುಮಾರ್ ಕಮ್ಮಜೆ ಮಾತನಾಡಿ, ಶಾಲಾ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಖಾತೆಯಲ್ಲಿ ಠೇವಣಿ ಇಡುವ ಹಾಗೂ ಅವರಿಗೆ ಉಚಿತ ಬ್ಯಾಗ್, ಪುಸ್ತಕ ಮತ್ತು ಬರವಣಿಗೆ ಉಪಕರಣಗಳನ್ನು ನೀಡುವ ಮಹತ್ವದ ಘೋಷಣೆ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಅವರುಕಾರ್ಯಕ್ರಮದ ಸಂಘಟನೆ ಮತ್ತು ಶಾಲಾ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಮೊಯಿದುಕುಂಞ, ಬುಶ್ರಿಯಾ, ಅಬ್ದುಲ್ ಮಜೀದ್, ಎಸ್‍ಡಿಎಂಸಿ ಅಧ್ಯಕ್ಷೆಕಮರುನ್ನೀಸಾ, ಸದಸ್ಯರಾದ ನೌಫಲ್ ಸಾಲೆತ್ತೂರ್, ರಾಜಶೇಖರ್ ಶೆಟ್ಟಿ, ಶಾರದಾ ಮತ್ತುಊರ ಪ್ರಮುಖರು ಉಪಸ್ಥಿತರಿದ್ದರು.
ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ:
ಈ ಸಂದರ್ಭದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳಾದ ನಾಟಿ ವೈದ್ಯಅಬ್ಬಾಸ್ ಹಾಜಿ ಬಂಡಿತ್ತಡ್ಕ, ವಿಶ್ರಾಂತ್ ಪೊಲೀಸ್ ರಾಜೀವ ಬೆಳ್ಚಾಡ ಬನಾರಿ, ಕ್ರೀಡಾಪಟು ಹಾಗೂ ಭಜನಾಕಾರ ಕೃಷ್ಣರಾಜ್ ಭಟ್‍ಕೊಣಲೆ, ಪಂಡಿತ ಹಮೀದ್ ಮುಸ್ಲಿಯಾರ್ ಪೆಲತ್ತಕಟ್ಟೆ, ಭಜನಾಕಾರ ಬಾಬು ಬೆಳ್ಚಾಡ, ಭೂತಾರಾಧನೆ ಸಾಧಕ ಗಂಗಯ್ಯ ನಲಿಕೆ ಮರ್ತನಾಡಿ, ವೈದ್ಯೆ ಡಾ.ಪಾತಿಮಾ ಕುಕ್ಕಾಜೆ, ಹಾಗೂ ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷ ಅಬ್ದುಲ್ಲ ಬನಾರಿ ಅವರನ್ನು ಸನ್ಮಾನಿಸಲಾಯಿತು. ದಾನಿಗಳು ನೀಡಿದ ಮಿಕ್ಸಿ ಮತ್ತು ಡಯಾಸ್‍ಗಳನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಮುಂದಿನ ವರ್ಷಕೆಗೀಗಾಗಲೇ ದಾಖಲಾತಿಮಾಡಿಕೊಂಡ ಮಗುವನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಹಳೆ ವಿದ್ಯಾರ್ಥಿಗಳಿಂದ ‘ಮದಿಮೆದಇಲ್ಲಡ್’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೆಕೀನಾ ಸ್ವಾಗತಿಸಿ, ವಂದಿಸಿದರು. ಅತಿಥಿ ಶಿಕ್ಷಕಿ ವನಿತಾ ಮತ್ತುಅತಿಥಿ ಶಿಕ್ಷಕ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

%20(1).jpg)
