ಕಥೆಗಳಲ್ಲಿ ಅಡಗಿದೆ ಬದುಕಿನ ನೈಜ ಘಟನೆಗಳು

Upayuktha
0


ಥೆ  ಓದುವುದು ಅಂದ್ರೇ ಯಾರಿಗೆ ಇಷ್ಟವಿಲ್ಲ ಹೇಳಿ?  ಚಿಕ್ಕ ಮಕ್ಕಳಿಂದ ಹಿಡಿದು ವಾಯೋವೃದ್ಧರ ತನಕ ಕಥೆ ಪುಸ್ತಕವನ್ನು ಓದುವ ಅವ್ಯಾಸ ಎಲ್ಲರಲ್ಲೂ ಅಡಗಿದೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಪಂಚತಂತ್ರ ಕಥೆಗಳೆಂದರೆ ಅತೀ ಅಚ್ಚು ಮೆಚ್ಚು. ಆ ಕಥೆಗಳಲ್ಲಿ ಹೆಚ್ಚಾಗಿ ಮಕ್ಕಳ ಮನಸ್ಸಿಗೆ  ಇಷ್ಟವಾಗುವ ಕಥೆಗಳನ್ನೇ ನೀಡುತ್ತಾರೆ. ಆದರೆ ಎಲ್ಲರ ಮನಸ್ಸು ಒಂದೇ ರೀತಿ ಇರಕೂಡದು. ಏಕೆಂದರೆ, ಕೆಲವರಿಗೆ ಲವ್ ಸ್ಟೋರಿ ಕಥೆಗಳು ಇಷ್ಟವಾದರೆ ಇನ್ನು ಕೆಲವರಿಗೆ ಭಯಾನಕ ಕಥೆಗಳು ಇಷ್ಟವಾಗುವುತ್ತದ್ದೆ. ಅದು ಅವರವರ ಆಲೋಚನೆಗಳಿಗೆ ಬಿಟ್ಟಂತದ್ದು. ಕಥೆ ಓದುದೇ ಒಂದೊಳ್ಳೆ ಅವ್ಯಾಸ. ಪ್ರತಿಯೊಬ್ಬರು ಕಥೆಗಳನ್ನು ಓದುವುದರಿಂದ ಅವರು ಇನ್ನಷ್ಟು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾ ಮುನ್ನಡೆಯುತ್ತಾರೆ.


ಕೇಲವು ಕಥೆ ಪುಸ್ತಕಗಳನ್ನು ಓದುವಾಗ, ಏಕೋ ಏನೋ ಈ ಕಥೆ ನನ್ನ ಜೀವನದಾಗೆ ಇದೆಯಲ್ಲ ಎಂದು ಒಂದೊಮ್ಮೆ ಭಾರಿ ಅನಿಸಿ ಬಿಡುತ್ತದೆ.ಅಷ್ಟಳದೇ ಆ ಕಥೆಯನ್ನು ಪೂರ್ತಿ ಓದಿದ ನಂತರವು ಅದರ ಸಾಕಷ್ಟು ಕುತೂಹಲ ಸಂಗತಿಗಳು ಮನಸಿನಲ್ಲಿಯೇ ಹಾಗೆ ಮೆಳಕು ಹಾಕುತ್ತಾ ಇರುತ್ತದೆ. ಕೇಲವು ಕಥೆಗಳು ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟರೆ, ಇನ್ನುಳಿದ ಕಥೆಗಳು ಭಯವನ್ನು ಸೃಷ್ಟಿಸಿ ಬಿಡುತ್ತದೆ. ಅದು, ನಾವು ಯಾವ ಕಥೆಯನ್ನು ಓದುತ್ತಿದ್ದೆವು ಅದರ ಮೇಲೆ ಅವಲಂಬಿತವಾದದ್ದು. ಮಾನವನ ಮನಸ್ಸನ್ನು ಕತ್ತಲೆಯಿಂದ ಹೊರಹಾಕಿ, ಹೊಸ ಆಲೋಚನೆಗಳತ್ತ ಮುನ್ನುಗ್ಗುಲು ಕಥೆಗಳು ಅನುವುಮಾಡಿಕೊಡುತ್ತದೆ.


ಒಬ್ಬ ಪೂರ್ಣ ವ್ಯಕ್ತಿಯನ್ನು ಪರಿಪೂರ್ಣ  ವ್ಯಕ್ತಿಯನ್ನಾಗಿ ಮಾಡುವ ಶಕ್ತಿ ಕಥೆಗಳಿಗಿದೆ. ಸಾಮಾನ್ಯವಾಗಿ ಒಂದು ಕಥೆ ಪುಸ್ತಕವನ್ನು ಓದಲು ಶುರು ಮಾಡಿದಾಗ ಅದರ ಕಡೆ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆ ಕಥೆಯ ಬಗ್ಗೆ ಪೂರ್ಣ ಮಾಹಿತಿ ನಮಗೆ ದೊರಕಬೇಕು ಅದಕ್ಕಾಗಿ ನಮ್ಮ ಮನಸ್ಸು ಆ ಕಥೆಯನ್ನು ಇನ್ನಷ್ಟು ಪ್ರಜ್ಞಾಪೂರ್ವವಾಗಿ ಓದಲು ಶುರು ಮಾಡುವಂತೆ ಆಜ್ಞಾಪಿಸುತ್ತದೆ. ಕಥೆಗಳನ್ನು ಓದಲು ಶುರು ಮಾಡಿದಾಗ  ಆ ಕಥೆಗೆ ಸಂಬಂಧಿಸಿದ ಪಾತ್ರಗಳ ಚಿತ್ರಗಳು ನಮ್ಮ ಮನಸಿನಲ್ಲಿಯೇ ನಿರ್ಮಿತವಾದಗ ಮಾತ್ರ ಆ ಕಥೆಯನ್ನು ಪೂರ್ತಿಯಾಗಿ ಅವರಿಸಿದ್ದೇವೆ ಎಂದರ್ಥ.


ನಾವು ಓದಿದ ಕಥೆಗಳ ಪಾತ್ರವು ಸಾಯಬಹುದು  ಆದರೆ ಆ ಪಾತ್ರವು ನಮಗೆ ಕಳಿಸಿದ ಜೀವನದ ಪಾಠ ಎಂದೆಂದಿಗೂ ಓದುಗನ ಮನಸಲ್ಲಿ ಜೀವಂತವಾಗಿರುತ್ತದೆ. ಪ್ರತೀ ಕಥೆಯು ಜೀವನದ ಮೌಲ್ಯವನ್ನು ಕಲಿಸಿಕೊಡುತ್ತದೆ. ಆದರೆ ಆ ಮೌಲ್ಯಗಳನ್ನು ಜೀವನಕ್ಕೆ ಅಳವಡಿಸಿಕೊಂಡು ಹೋಗೋದು ಇಲ್ಲವಷ್ಟೇ. ಕಥೆ ಪುಸ್ತಕವನ್ನ ಇನ್ನಷ್ಟು ಹೆಚ್ಚಾಗಿ ಓದಿ, ನಾವು ಕೂಡ ಕಥೆಗಳನ್ನು ರಚಿಸುವ ರೀತಿ ಮುನ್ನಡೆಯಬೇಕು. ಕೆಲವು ಕಥೆಗಳ ಪಾತ್ರವು ನಮ್ಮ ನಿಜ ಬದುಕಿಗೆ ಅವಲಂಬಿತವಾದರೆ ಆ ಕಥೆಯೇ ನನ್ನದೆಂಬ  ಭಾವನೆ ಮತ್ತು ತುಟಿಯ ಅಂಚಿನಲ್ಲಿ ಮುಗುಳ್ನಗೆ ಬಂದು ಹಾಗೆಯೇ ಮರೆಯಾಗುತ್ತದೆ. ಆದರೆ ಯಾವ ಪಾತ್ರವು ನಮ್ಮ ಬದುಕಿಗೆ ಸೀಮಿತವಾಗಿರುದಿಲ್ಲ. ಆ ಪಾತ್ರಕ್ಕೆ ನಾವು ಒಡ್ಡಿಕೊಂಡು ಹೋಗಬೇಕು ಅಷ್ಟೇ. ಆದ್ದರಿಂದ ಪುಸ್ತಕದಲ್ಲಿ ಬರುವ ಕಥೆಯನ್ನು ಮರೆತು ನಮ್ಮ ಜೀವನವನ್ನೇ ಒಂದೊಳ್ಳೆ ಕಥೆಯಾಗಿ ನಿರ್ಮಿಸುವ ಅಧಿಕಾರ ನಮಲ್ಲಿ ಇರುದರಿಂದ ಅದರ ಕಡೆ ಇನ್ನಷ್ಟು ಗಮನವನ್ನರಿಸಬೇಕು ಅಷ್ಟೇ.


-ಶಿಲ್ಪಾ ಆದಪ್ಪ ಗೌಡ

ಎಸ್ ಡಿ ಎಮ್ ಕಾಲೇಜು ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top