ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ,ಆತನ ಹಿಂದೆ ಯಶಸ್ಸಿಗಾಗಿ ಮಾಡಿದಂತಹ ಸಾಕಷ್ಟು ಪ್ರಯತ್ನ, ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಧೈರ್ಯ, ಸಾಧನೆಗಳ ಪಟ್ಟಿಯೇ ಇರುತ್ತದೆ. ನಿರಂತರತೆಯ ಪ್ರತಿ ಯಶಸ್ಸಿನ ಸೂತ್ರ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಪ್ರಯತ್ನಕ್ಕೆ ಒಂದು ದಿನ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ ಪ್ರಯತ್ನವನ್ನು ಮಾಡುವ ತಾಳ್ಮೆ ನಮ್ಮ ಜೊತೆ ಇರಬೇಕು. ಜೀವನದಲ್ಲಿ ಮೊದಲು ನಿರ್ದಿಷ್ಟವಾದ ಗುರಿ ಹೊಂದಿರಬೇಕು. ನಂತರ ಆ ಗುರಿಯ ಕಡೆ ಸಾಗಬೇಕು. ಆಗ ಯಶಸ್ಸು ಲಭಿಸುದರಲ್ಲಿ ಒಂದೆರಡು ಮಾತಿಲ್ಲ.
ಯಶಸ್ಸು ಎಂಬುವುದು ಯಾವುದೇ ಅದೃಷ್ಟದಿಂದ ಒಳಿಯುವಂತದ್ದಲ್ಲ, ಬದಲಾಗಿ ಅದರ ಹಿಂದೆ ಅಪಾರವಾದ ಶ್ರಮ ಮತ್ತು ತಾಳ್ಮೆ ಇರುತ್ತದೆ. ಮನುಷ್ಯ ಸೋಲನ್ನು ಅನುಭವಿಸುದರಿಂದ ಆತನ ಯಶಸ್ಸು ಮತ್ತಷ್ಟು ಹತ್ತಿರವಾಗುತ್ತದೆ.ಏಕೆಂದರೆ ಆ ಸೋಲಿನಿಂದ ಆತ ಸಾಕಷ್ಟು ಅನುಭವದ ಪಾಠಗಳನ್ನು ಕಲಿಯುತ್ತಾನೆ.
ವಿಶ್ವಮಾನವ ಎಂದು ಕರೆಯಲ್ಪಡುವ ಸ್ವಾಮಿ ವಿವೇಕಾನಂದರು ಹೇಳುವಾಗೆ " ಪ್ರಯತ್ನಿಸಿ ನೋಡು ಪ್ರಯತ್ನಿಸುವುದರಲ್ಲಿ ತಪ್ಪೇನಿದೆ, ಒಂದು ವೇಳೆ ಗೆದ್ದರೆ ಸಂತೋಷ ಸೋತರೆ ಅನುಭವವಂತು ದೊರಕೆ ದೊರೆಯುತ್ತದೆ ಅಲ್ಲವೇ?. ಈ ಮಾತಿನಂತೆ ಜೀವನದಲ್ಲಿ ಮುನ್ನಡೆದರೆ ಯಶಸ್ಸು ಖಂಡಿತ.
ಸೋಲೇ ಜೀವನದ ಅಂತ್ಯವಲ್ಲ. ಬದಲಾಗಿ ಅದೊಂದು ಯಶಸ್ಸಿನತ್ತ ಮುನ್ನಡೆಯಲು ಅನುವು ಮಾಡಿಕೊಡುವ ಬೆಳಕಿನ ಹಾದಿ.
ಕೇವಲ ಕನಸು ಕಾಣುವುದರಿಂದ ಯಾವುದೇ ರೀತಿಯ ಯಶಸ್ಸು ಲಭಿಸುವುದಿಲ್ಲ.ಆದರೆ ಆ ಕನಸನ್ನು ನನಸು ಮಾಡುವ ಮಾರ್ಗದಲ್ಲಿ ನಡೆದರೆ ಯಶಸ್ಸಿನ ದಾರಿ ಸುಲಭವಾದದ್ದು. ಜಗತ್ತಿನಲ್ಲಿ ನಿರಂತರತೆಗೆ ಅಸಾದ್ಯವಾದದ್ದು ಯಾವುದು ಇಲ್ಲ. ಹೇಗೆ ಒಂದು ನದಿ ಹರಿಯುವಾಗ ಅದರ ಮುಂದೆ ಸಾಕಷ್ಟು ಕಲ್ಲು, ಬಂಡೆ ಎದುರಾದರು ಅದನ್ನೆಲ್ಲ ದಾಟಿ ಹೇಗೆ ಸಮುದ್ರವನ್ನು ಸೇರುತ್ತದೆಯೋ, ಅದೇ ರೀತಿ ಜೀವನದಲ್ಲಿ ಎದುರಾಗುವ ಎಲ್ಲ ಸೋಲುಗಳಿಗೆ ಎದೆಗುಂದದೆ, ಅದನ್ನೆಲ್ಲಾ ಮೆಟ್ಟಿ ನಿಲ್ಲುತ್ತಾನೋ ಆತನೇ ನಿಜವಾದ ವ್ಯಕ್ತಿ.
ಸೋಮಾರಿತನ ಮನುಷ್ಯನ ಶತ್ರುವಾದರೆ, ಪರಿಶ್ರಮ ಮಾನವನ ಮಿತ್ರ.ಸೋಲು ಮತ್ತು ಗೆಲುವು ವಿರುದ್ಧಾರ್ಥಕ ಪದವಾದರೆ, ಮನುಷ್ಯನ ಜೀವದಲ್ಲಿ ಗೆಲುವು ಮಾತ್ರ ವಿರುದ್ಧ ಪದವಾಗಿದೆ. ಏಕೆಂದರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಗೆಲುವಿನ ಹಾದಿಯನ್ನು ಹಿಡುಯುವುದು ಅತೀ ವಿರಳವಾದದ್ದು. ಯಾಕಂದ್ರೆ ಅಲ್ಲಿ ಯಾವುದೇ ರೀತಿಯ ಪ್ರಯತ್ನ ಮತ್ತು ಪರಿಶ್ರಮವಿರುವುದಿಲ್ಲ ಅಷ್ಟೇ. ಗೆದ್ದಾಗ ಆಗುವ ಖುಷಿ ಯಾವುದೇ ಚಿನ್ನ ಆಭರಣಗಳಿಗೆ ಸರಿಸಾಟಿಯಲ್ಲ. ಆದ್ದರಿಂದ ಪ್ರತಿಯೊಬ್ಬರು ಸಕಲ ಪ್ರಯತ್ನದಿಂದ ಮುನ್ನಡೆದರೆ ಅಲ್ಲಿ ಮಾತ್ರ ಯಶಸ್ಸು ನಮ್ಮತ್ತ ಕೈ ಚಾಚಿ ಕೊಂಡು ಬರಲು ಸಾಧ್ಯ.
-ಶಿಲ್ಪಾ ಆದಪ್ಪ ಗೌಡ
ದಿಡುಪೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



