ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎನ್‌ಸಿಸಿ ಆರ್ಮಿ, ನೇವಿ ಮತ್ತು ಏರ್ ವಿಂಗ್‌ನವರು ಎನ್‌ಸಿಸಿ ಹಳೆವಿದ್ಯಾರ್ಥಿಗಳ ಸಭೆ 2025 ಅನ್ನು ಡಿಸೆಂಬರ್ 27, 2025 ರಂದು ಶನಿವಾರ ವಿವಿಯ ಸಹೋದಯ ಸಭಾಂಗಣದಲ್ಲಿ ಆಯೋಜಿಸದ್ದರು. ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಮಾಜಿ ರಿಜಿಸ್ಟ್ರಾರ್ ಡಾ. ಅಲ್ವಿನ್ ಡೇಸಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಇಂಡಿಯನ್ ಏರ್‍ಫೋರ್ಸ್‍ನ ನಿವೃತ್ತ ಸ್ಕ್ವಾಡನ್ ಲೀಡರ್ ನೆವಿಲ್ ತಾನಿಯ ಡಿಕೋಸ್ಟ ಗೌರವ ಅತಿಥಿಯಾಗಿದ್ದರು. ಅಲೋಶಿಯಸ್ ವಿವಿಯ ಆಡಳಿತ ವಿಭಾಗದ ನಿರ್ದೇಶಕ ಡಾ. ಚಾರ್ಲ್ಸ್ ವಿ. ಫುರ್ಟಾಡೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸುಮಾರು 60 ಮಾಜಿ ಕೆಡೆಟ್‌ಗಳು ಭಾಗವಹಿಸಿದ್ದು, ಅವರಿಗೆ ಹಲವಾರು ಚಟುವಟಿಗೆಗಳನ್ನು ನಡೆಸಲಾಯಿತು.ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳಾದ ಸಿಪಿಟಿ ಶಕಿನ್ ರಾಜ್, ಫ್ಲೈಯಿಂಗ್ ಆಫೀಸರ್ ಡಾ. ಅಲ್ವಿನ್ ಮಿಸ್ಕಿತ್ ಮತ್ತು ಸಿಟಿಒ ಒಲ್ವಿನ್ ಡಿಸೋಜಾ ಅವರು ಕಾರ್ಯಕ್ರಮ ಸಂಯೋಜಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

