ಕ್ರೀಡೆಯಲ್ಲಿ ಯಶಸ್ಸಿಗೆ ಶಿಸ್ತೇ ಮುಖ್ಯ

Upayuktha
0


ನಾವು ನಮ್ಮ ಜೇವನದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಿರುತ್ತೇವೆ. ಆದರೆ ಅದೆಷ್ಟೋ ಚಟುವಟಿಕೆಗಳಲ್ಲಿ ಕ್ರೀಡೆ ಎಂದರೆ ಎಲ್ಲರ ಮನಸ್ಸನ್ನು ಒಂದು ಕಡೆ ವಾಲಿಸಿ, ಎಲ್ಲರ ಮನಸ್ಸನ್ನು ಗೆಲ್ಲುವ ಒಂದು ಪ್ರಕ್ರಿಯೆ. ಆದರೆ ಅದು ಎಷ್ಟು ಮನರಂಜನೆ ನೀಡಿದರುರೂ ಕೆಲವೊಬ್ಬರು ಕ್ರೀಡೆ ಎಂದರೆ ಭಯ ಪಡುತ್ತಾರೆ. ಆದರೆ ಭಯ ಪಡುವುದೇ ಸಹಜ ಅಲ್ಲ, ಕ್ರೀಡೆ ಎಂದರೆ ದೇವರಂತೆ ಪೂಜಿಸುವ ಜನ ಕೂಡ ಇದ್ದಾರೆ. ಹಾಗಂತ ಕ್ರೀಡೆಯನ್ನು ಎಲ್ಲರೂ ಪ್ರೀತಿಸಬೇಕು ಅಂತೇನಲ್ಲ, ಆದರೂ... ಭಯಪಡುವಂತಾದರೂ ಏನಿದೆ? ಅದಲ್ಲದೆ ಕ್ರೀಡೆಯನ್ನು ಪ್ರೀತಿಸುವವರು ಹಾಗೂ ಪೂಜಿಸುವವರು ಎಲ್ಲರೂ ಕ್ರೀಡಾಪಟುಗಳಾಗಿರುತ್ತಾರೆ ಅಂತೇನಿಲ್ಲ, ಕ್ರೀಡೆಯ ಬಗ್ಗೆ ಏನೂ ತಿಳಿಯದವರು ಸಹ ಕ್ರೀಡೆಯನ್ನು ಪ್ರೀತಿಸುತ್ತಾರೆ.


ಕ್ರೀಡೆಯೆಂಬುದು ಬರಿ ಒಂದು ಜೇವನದ ಮನರಂಜನೆ, ಹುಚ್ಚು ಆಟಗಳು ಅಂತೂ ಅಲ್ಲವೇ ಅಲ್ಲ, ಕ್ರೀಡೆ ಎಂಬುದು ಮುಖ್ಯವಾಗಿ ಕಲಿಯಬೇಕಾದ ಶಿಸ್ತಿನ ಮೂಲ. ಕ್ರೀಡೆ ಎಂಬುದು ಜೇವನದ ಅರ್ಧ ಭಾಗದಷ್ಟು ನಮಗೆ ಪಾಠವನ್ನು ಕಲಿಸಿ ಕೊಡುತ್ತದೆ ಅನ್ನುದಕ್ಕೆ ಸಾಕ್ಷಿಯೇ ಬೇಕಾಗಿಲ್ಲ. ''ಸೋತರೆ ಯಾವ ರೀತಿಯ ಅನುಭವ, ಮುಂದೆ ಯಾವ ರೀತಿ ಎದುರಿಸಬಹುದು, ಅದೇ ರೀತಿ ಗೆದ್ದರೆ ಯಾವ ರೀತಿ ಮುಂದೆ ಇತಿಹಾಸ ಸೃಷ್ಟಿಸಬಹುದು ಎಂಬುದು ಕ್ರೀಡೆ ಕಲಿಸಿ ಕೊಡುತ್ತದೆ. ಮೊದಲಾಗಿ ಜವಾಬ್ದಾರಿ, ಬೇಜವಾಬ್ದಾರಿಯನ್ನು ತಿಳಿಸಿಕೊಡುತ್ತದೆ. ಹಾಗೆ ತಾಳ್ಮೆಯಿಂದ ಇರುವುದನ್ನು ಕಲಿಸಿಕೊಡುತ್ತದೆ. ಕ್ರೀಡೆಯಿಂದ ಒಂದು ಕುಟುಂಬ ಸೃಷ್ಟಿಯಾಗುತ್ತದೆ ಹಾಗೆ ಎಷ್ಟೋ ಮನಸಿನ ನೋವು ದೂರವಾಗಿ ಸಂತೋಷದ ಕಡೆ ಭಾಗುತ್ತದೆ. ಯಾವುದೇ ರೀತಿಯ ಬೇಧ ಭಾವ ಮಾತೇ ಬರುವುದಿಲ್ಲ, ಹಾಗೆಯೇ ಯಾರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಕೂಡ ಈ ಕ್ರೀಡೆ ನಮಗೆ ಕಲಿಸಿ ಕೊಡುತ್ತದೆ. ಆಟ ಅಂತ ಬಂದಾಗ ನಾವು ಗೆಳೆಯರು ಎಂದು ಮರೆತು ಆಟ ಆಡ್ತೇವೆ, ಮುಗಿದ ನಂತರ ಒಂದೇ ತಾಯಿ ಮಕ್ಕಳಂತೆ ಜೊತೆ ಗೂಡಿ ಊಟ ಮಾಡ್ತೇವೆ. ನಿಜವಾಗಿ ಈ ಬಾಂಧವ್ಯವನ್ನೆಲ್ಲ ಕ್ರೀಡೆಯಿಂದ ನಾವು ಕಲಿತುಕೊಳ್ಳುತ್ತೇವೆ. 


ಒಬ್ಬರು ಶಿಸ್ತಿನ ಮೂಲವಿದ್ದರೆ, ಇನ್ನೊಬ್ಬರು ಶಿಸ್ತಿನ ವಿರುದ್ಧ ಆದರೂ ಕೂಡ ಈ ಕ್ರೀಡೆ ಅದನ್ನು ನಿಯಂತ್ರಿಸುತ್ತದೆ.


ಹೀಗೆ ಕ್ರೀಡೆ ಎಂಬುದು ಜೇವನದ ಹಲವು ನಿರ್ಧಾರಗಳನ್ನು ತಿಳಿಸಿಕೊಡುತ್ತದೆ ಹಾಗೆಯೇ ಅವಕಾಶಗಳನ್ನು ನೀಡುತ್ತದೆ. ಕ್ರೀಡೆ ಎಂಬುದು ಜೇವನದ ಒಂದು ಭಾಗ ಆದರೆ ಅದೆಷ್ಟೋ ಭರವಸೆ, ತಾಳ್ಮೆ, ಜವಾಬ್ದಾರಿ, ಹಾಗೂ ಶಿಸ್ತನ್ನು ಅರ್ಧದಷ್ಟು ಕಲಿಸಿಕೊಡುತ್ತದೆ. ಕ್ರೀಡೆಯಿಂದ ಏನನ್ನು ಕಲಿಯುತ್ತೇವೆ, ಕಲಿಯುವುದಿಲ್ಲ ಗೊತ್ತಿಲ್ಲ ಆದರೆ ಶಿಸ್ತಿನ ಪಾಠವನ್ನು ಮಾತ್ರ ಖಂಡಿತ ಕಲಿಯುತ್ತೇವೆ.


ನಮ್ಮ ನಮ್ಮ ಕ್ರೀಡೆ ಹಾಗೂ ನಮ್ಮದಲ್ಲದ ಕ್ರೀಡೆಯನ್ನು ಪ್ರೀತಿಸೋಣ, ಗೌರವಿಸೋಣ, ಆದಷ್ಟು ಕ್ರೀಡೆಯನ್ನ ಆಡೋಣ, ಆದರಿಂದ ಕಲಿಯಬೇಕಾದ ಮೌಲ್ಯಗಳನ್ನು ಕಲಿತು ನಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳೋಣ.



-ಸಹನಾ ಪೂಜಾರಿ 

ಬಂದಾರು





 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top