ಗೋಳು- ಅಂಕೋಲಾ ಭಾವಿಕೇರಿಯ ನಿರಾಶ್ರಿತರ ಜೀವನ ಆಧಾರಿತ ಕಥೆ

Upayuktha
0


ಲೇ ಚುಕ್ರಿ, ಎಲ್ಲ ಹಾಳಾಗ ಹೋಗಿದ್ದಿಯೇ,

ಇಲ್ಯ ಅಬಲ್ಲಿ ಹೂವ್ ಕೋಯ್ಯಕಣತಿರುವ ಕಾಣುಕಿಲ್ವೇನೆ, ಆ ನಮೂನಿ ಕೂಗೂದ ಎಂತಕ ಅಂತಿ.

ಆಯ್ತಾಝೇ ಮಾರಾಯ್ತಿ, ಕಾಣನಿಲಾಗಿದ್ದೇ ಒಡೆದಿರ ಮನಿಗೆ ಒಂದ ದಡಿ ಬೆಲ್ಲ, ಹಂಗೆ ಗೇಣಿ ಅಕ್ಕಿ ಕೂಡುದ ಇತ್ತಲ್ಲ, ತಗಂಡ ಹೋಗ ಕುಟಾಕ ಬತಿ, ಊರ ಬದಿಗ ಹೋಗದೇ ಬಾಳ ದಿನಾಗೋಯ್ತ. ನಂಗ ಉಂದ ಒಣಮೀನಾಗಲೇ, ಇಲ್ಲ ನಿಲಿಕಲ್ಲನ ನಾಲ್ಕ ಮಾಯ್ಸ್ ಇದ್ರ ಕೂಡ ಕೆಂಡದಲ ಹಾಕಂಡ, ತೊಡಿ ಅಂಬಲಿ ಕೂಡಕ ಹೋಗಬತಿ, ಬರುದ ಮುರಸಂಜಿಗೆ ಆತಿದೆನ.


ಆದಿನ ಕಾನಬೀರ ಮನಿಗ ನಿನ್ನ ಮುದಿ ಸಲುವಾಗೆ, ಪುಡವಿ ಪ್ರಸಾದ ಕೇಳುಕ ಹೋದಗ ಸಿಕ್ಕದ್ರ, ಮನಿ ಬದಿಗೆ ಬಂದ ಹೋಗೆ ಸಣ್ಣಿ ಅಂತೆ ಇದ್ರ

ನಿನ್ನ ಮೊಖದ ಮ್ಯಾಲ ದೋಸಿ ಹೂಯ್ಯ, ಒಡೆದಿರ ಮನಿ ಕಡ, ಒಡೆದಿರ ಮನಿ, ಈಗ ಯಾವ ಒಡೆದಿರ ಮನಿಗ ಹೋತ್ಯ, ಈ ನಿನ್ನ ಗಂಡ ಊರು ಕೇರಿ ಬಿಟ್ಟ ಬಂದ ಒಂದೆರಡ ವರ್ಷಾದ್ರು, ಭಾವಿಕೇರಿ, ಒಕ್ಕಲಕೇರಿ ಅಂದಕಣತೆ ಕುತ್ಕಂಡಿಯ. ಈಗ ನೀ ಮತ್ತ ಸುರು ಹಚ್ಚಂಡಿಯಾ.  


ಹೌದೇ ಮಾರಾಯತಿ, ನೀ ಹೇಳುದ ಕರಿ, ನಿಮ್ಮಪ್ಪ ಈಗೂ ಮನಿಕಂಡಗಲ್ಲ. ಕಾನಬೀರ ಮನಿ, ಮೇಲನಕೇರಿ ಗದ್ದಿ, ಹನಮಂತು ಚಾ ದಂಗಡಿ ಅಂತೆ ಇರ್ತ. ಹೀಂಗೆ ಆಗ ಮನಸಿಗೇನರು ಹಚ್ಚಂಡ ಸತ್ತ, ಗಿತ್ ಹೋದ್ರೆ ಅಂತ. ಈ ರಾಶಿ ಕರಿಮಣಿ ಹಾಕಂಬು ಹೆಂಗಸ ನಾನ, ಕಡಿಕ ಕರಿದಾರ ಕಟ್ಕಂಡ ತಿರಗಬೇಕಾಗುದ.


ಆಯ್ತಾಯ್ತ, ನಾ ಉಂದ ಹೇಳದರ ನೀ ಮತ್ತುಂದೆ ಹೇಳತಿರತಿ, ನೀ ಹೀಂಗೆಲ್ಲ ಅಪ್ಪನ ಮುಂದೆಲ್ಲ ಹೇಳುಕ ಹೋಗಬ್ಯಾಡ, ಆ ಬೊಮ್ಮು ಗೌಡನ ಮನಿಲ ಹುಚ್ಚ ಹಿಡಕಂಡ ಕುತರ, ಹಂಗೆ ನಮ್ಮನಿನು ಆಗುದ ಬ್ಯಾಡ.


ಏನ್ ಹೇಳೆಂವಿಯೇ, ಚುಕ್ರಿ, ಅಂವ್ ಆ ಪಾಟಿ ಚಾಲಾಕಿ ಇದ್ದಲ್ಲೆ. ಹೌದೇ, ನಾ ಮೊನ್ನಗ ಕಾಯಪಲ್ಲಿನೆಲ್ಲ ಮಾರುಕ ತಗಂಡ ಹೋಗಿದ್ದಲ್ಲೇ, ಆಗೆಲ್ಲರು ಮಾತಾಡಂಕತೆ ಇದ್ರ ಅಂವ್, ಒಕ್ಕಲಕೇರಿ ಬಿಟ್ ಬೇಲಿಕೇರಿ ಕತ್ರಿ ಮ್ಯಾನ, ನೀರಿಲ್ಲದಿದ್ ಜಾಗ ಸಿಕ್ಕತ ಕಡ, ಅಲ್ಲೇ ನಮ್ಮಂಗೆ ಸಣ್ಣಕ ಮನಿನು ಮಾಡ್ಕಂಡ ಇದ್ದನಲ್ಲ. ಮಗಳ ಮುದಿಯಾಗುಕ ಬಂದದನಲ್, ಬೆಳಂಬರದ ಸೋಮುಗೌಡನ ಮಗ, ಇವ ಮನಿ ಮಠ ಬಿಟ್ಟ ಬಂದದ ಕಂಡ್ಕಂಡ ಮುದಿನೇ ಬ್ಯಾಡ ಅನಕಂಡ ಹೋದನ ಕಡ. ಅದೇ ಬೇಜಾರದಲ್ಲೆ ಇದ್ದ ಕಡ.


ಕಡ ಮೊನ್ನಗೇನ ಅಪ್ಪಮಗ, ಒಕ್ಕಲಕೇರಿ ಬದಿಗೆ, ಧನನೆಲ್ಲ ಹುಡಕಂಡ ಹೋಗದ್ರ ಆ ಹಾಳಾದ ದನ, ಕುನ್ನಿ ಮಾತ್ರ ಅಲ್ಲೇ ಸಾಯ್ತವಲ್ಲ, ನಾವ್ ಮನಸರೆಲ್ಲ, ಊರಬಿಟ್ಟ ಬಂದ್ರು, ಅನಕಣತೆ ಊರು, ಶಾಲಿ, ತಿಂಗನ ಮರ ಎಲ್ಲ ಹಾಳ ಬಿದ್ದದ ನೋಡಕಂಡ ಬುಯಕಣತೆ ಬರುವಾಗ, ಕರದೇವ್ರ ಕಟ್ಟಿ ಕಡೆ ಏನ್, ದಡಸದಂಗಾಗ ಬಿದ್ದಂವ, ಎಲ್ಲ ಕಡ. ಮನಿಗ ತಂದ ಮನಗಸರ ಕಡ, ಮಾತಿಲ್ಲ ಕತಿ ಇಲ್ಲ. ನಾ ಚಮಡಿ ಗದ್ದಿ ಹೊಂಡ ತಿಗಿಬೇಕ, ಶೇಂಗಾ ಕೀಳಬೇಕ, ಒಡಿದಿರ ಮನಿಗನ ಶೇಂಗ ಹಾಕಬೇಕ ಹೀಂಗೆ ಬ್ಯಾಡದಿದ್ದೆ ಸುದ್ದಿ ಹೇಳಿತೆ ಇರುದೆ ಮಾಡತಿನ ಕಡ.


ಅಯ್ಯೋ ನನ್ನ ಕರದೇವೋ, ಬೊಮ್ಮಗೌಡ ಆಪಾಟಿ ಒಕ್ಕಲಕೇರಿ ನಡಗಸ್ತಿದ್ದನ್ನಲ್ಲೇ ಮಾರಾಯ್ತಿ. ಏನ್ ಕತಿ ಇದಂತಿ. ಅವನ ಮಗನು ಕೆಲ್ಸನು ಇಲ್ಲ ಅನಕಂಡ ಪ್ಯಾಟಿ ಬದಿಗ ಹೋಗಿನ ಕಡ, ಈಗ ಅಬ್ಬಿ ಮಗಳು ಇದ್ರೆ ಅವ್ರ ನೋಡಬೇಕ, ಅವ್ರ ಜೀವನು ದೊಡ್ಡಿಂದಲ್ಲ, ಅವರೆಡು ಜನ ಸಿಕ್ಕಾಪಟ್ಟಿ ತ್ರಾಸ ತಿಕಂತೆ ಎನ್ನ ಕಳಗನ ಹಿತ್ತದ ಚೋಮಿ ಇದತಲ್ಲ ಅದಕು ಸಿಕ್ಕಾಪಟ್ಟೆ ಮಳ್ಳಿ ಮಳ್ಳಿಯಂಗ ಮಾಡ್ಕ ಊರೆಲ್ಲ ತಿರಗತಿತ್ತಕಡ.


ಅಯ್ಯೋ ಮಾರಾಯ್ತಿ, ಇದೇನ ಗ್ರಹಚಾರ ಅಂತಿ, ನೌಕಾನೆಲಿಗೆ ಹೋದ್ರ ದುಡ್ಡ ಕುಡತರ, ಜಾಗಕುಡತರ ಅಂದ್ಯಂಡೆ ಹಗಲಲ್ಲೆ, ನಕ್ಷತ್ರ ತೋರದ್ರ, ಮನಿ ಮಠ ಬಿಟ್ಟ ಬರುವಂಗ ಮಾಡದ್ರ. ಈಗ ದುಡ್ಡು ಇಲ್ಲ, ಉತ್ತಕಂಡ, ಬಿತ್ಕಂಡ ತಿನ್ನು ಅನ್ನೊಕೆ ಒಂದ ಗುಂಟೆ ಜಾಗನು ಇಲ್ಲ. ಸುರುವಾಗ ಹತ್ತಿಪ್ಪತ್ತ ಮಂದಿ ಬಂದ ನಾವ್ ಊರ ಬಿಡುದ ಬ್ಯಾಡ. ಸ್ಟೈಕು ಮಣ್ಣು ಮಸಿ ಅದ್ಯಂಡ, ಧನ ತುಂಬದಂಗ ಟೆಂಪೊ ತು೦ಬಂಡೆಲ್ಲ ಹೋದ್ರ, ಅದೇನು ಪರಕೆ ಬೀಳಿಲ್ಲ. ಉರಿ ಬಿಸಲಲ್ಲ ಕುಂತದ ಅಟ್ಟೆ ಬಂತ, ನಾವ್ ಊರ್ ಬಿಡುದ ತಪ್ಪನೀಲ್ಲ.


ಒಕ್ಕಲಕೇರಿಲಿದ್ದಗ ಎಲ್ಲದಕ್ಕು ಲೈಕ್ ಆತೀತ, ನುಗ್ಗಿಕಾಯಿ, ಬಸಲಿಕಟ್ಟು, ಅಂತ ಮಾರಕಂಡು ಜೀವನ ಹೋತಿತ. ನನ್ನ ಗಂಡ ದುಡಿದದ್ದ ದುಡ್ಕಲ್ಲ ಗೋವಿ ಸರಾಯಿ ಹಾಕದ್ರು, ನಿಮಗೆಲ್ಲ ನಮ್ಮ ದುಡಮಿನೆ ಸಾಕಾಗತಿತ. ಈಗೇ ನೋಡ ಒಡಿದಿರ ಮನಿ ಹೋಗಬೇಕ ಅಂದ್ರ ಒಂದೆರಡ ತಾಸ ಬೇಕ, ಈ ಕತ್ರಿ ಗುಡ್ಡಿ ಇಳದ, ಬೇಲಿಕೇರಿ ಸುತ್ತಾಂಕಡ ಭಾವಿಕೇರಿ ಹೋಗುವರಿಗೆ ಜೀವ ಹೋಗ ಜೀವ ಬಂದಂಗ ಆತಿದ.


ಅಬ್ಬಿ ಮಗಳು ಇಬ್ರು ಸೇರಕಂಡ ಏನ ಗೌಜಿ ಹಾಕಣತೆ ಇವಿ, ನೀ ಈಗ ಒಡೆದಿರ ಮನಿಗೆ ಹೋಗ ಉದ್ಧಾರ ಮಾಡುದ ಬ್ಯಾಡ, ನಾ ನಾಳಗ ಹೋಗುದಿದ. ನೀನು ಬಂದರಾಯತ. ನಮ್ಮ ಮಾತ ಕೇಳಕಂಡ ಈಗ ಬಯುಕ ಬಂದ, ಮಗಳ ಮುದಿ ಗಿದಿ ಮಾಡುದ ತಲಿಲ ಇಲ್ಲ.


ಒದರುಕ ಸೂರುನ ಮಾಡಬ್ಯಾಡವೇ, ಮಾರಾಯತಿ, ಒಡೆದಿರ ಮನಿಗ ಹೋಗುದ ಅದಕ್ಕೆ, ಮುದಿಗೆನರು ಎದ್ಯಕಂಡರೆ, ದುಡ್ಡ ಗಿಡ್ಡ ಏನು ಬ್ಯಾಡ ಅಂದ 46 ಮಾಡ್ಕಂಡಿಯೇನ್, ಒಡಿದಿರನು, ಅಮ್ಮನು ಕೇಳ ನೋಡತಿ, ದುಡ್ಡ ಕುಡತಿ ಅಂದ ಮುದಿ ಮಾಡ್ ವಾಲಗ ಊದಸಬಿಡುದೆ.


ನೋಡ ತಡಿ ತಡಿರಿ ಯಾರ ಕೂಗಕಣತೆ ಬಂದಂಗ ಆತಿದ, ಲೇ ಚುಕ್ರಿ ಯಾರ ಅವ್ವ ಬ್ಯಾಗ ಬಾರೆ ಮಾರಾಯತಿ, ಆ ಚೋಮಿನೆ ಮತ್ತ ತಲಿ ಕೆಟ್ ಸಾಯೋಕ ಹೋತೆ ಇದ ನೋಡೆ, ಅದರ ಹಿಡಿನೇ ಮಾರಾಯ್ತಿ......


ಅಂಯ್ಯೋ ಎಲ್ಲ ಹೋದಿಯೋ, ನನ್ನ ಗಂಡನೇ, ಮಕ್ಕಳಿಲ್ಲ, ಮರಿಯಿಲ್ಲ, ಜಾಗಿಲ್ಲ, ಮನಿ ಇಲ್ಲ ಆ ನನ್ನ ಮಕ್ಕ, ಬಂದ ಎಲ್ಲನು ನುಂಗ ನೀರ ಕುಡದರಲ್ಲೋ ನಾಂಗ ಇಲ್ಲಿರುಕ ಆತಿಲ್ಲೋ ನಾನು ಬತಿನೋ.


(ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬುಡಕಟ್ಟು ಹಾಲಕ್ಕಿ ಜನರ ಭಾಷೆಯಲ್ಲಿ, ಅವರ ನಿರಾಶ್ರಿತ ಬದುಕಿನಾಧಾರಿತ ಕಥೆ)


- ರೇಷ್ಮಾ ಉಮೇಶ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top