ಕವನ: ದಾಸೋಹದ ಸೂರ್ಯ

Upayuktha
0



ಶತಮಾನದ ಬೆಳಕು ಈ ಪುಣ್ಯ ಮೂರ್ತಿ,

ದಾಸೋಹದಲಿ ಬೆಳಗಿತು ಇವರ ಕೀರ್ತಿ ll೦೧ll 


ಕಾವಿಯ ಬಣ್ಣದಲಿ ಕರುಣೆಯ ಕಡಲು,

ಬಡವರ ಪಾಲಿನ ಬೆಚ್ಚನೆಯ ಮಡಿಲು ll೦೨ll 


ಅಕ್ಷರ, ಅನ್ನದ ದಾನವೇ ಮಂತ್ರ,

ಸಿದ್ಧಗಂಗೆಯಲಿ ಕಂಡೆವು ಹೊಸ ಚರಿತ್ರ ll೦೩ll 


ನಡೆದಾಡುವ ದೇವರಿಗೆ ಶಿರಬಾಗಿ ನಮಿಪೆವು,

ಸರಳತೆಯ ಹಾದಿಯಲಿ ನಾವಿಂದು ನಡೆಯುವೆವು ll೦೪ll 


ಹಣೆಯ ಮೇಲಣ ವಿಭೂತಿ ಜ್ಞಾನದ ಕುರುಹು,

ಬಾಡಿದ ಮುಖಗಳಲಿ ಮೂಡಿಸಿದರಿವರು ಹರುಷವು ll೦೫ll 


ಸಾವಿರ ಕಾಲದ ಸಾರ್ಥಕ ಬದುಕಿನ ಪಯಣ,

ನಮಿಸಲಿ ಜಗತ್ತು ಇವರ ಪಾದಕೆ ಕ್ಷಣ ಕ್ಷಣ ll೦೬ll 


- ಕುಮಾರಿ ರೂಪಾ‌ ಬಿ. ನಾಟೀಕಾರ, ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top