ಭಾಷೆ–ಸಾಹಿತ್ಯ–ಸಂಸ್ಕೃತಿಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣ: ಡಾ. ಎಚ್. ಪ್ರಭಾಕರ್ ರಾವ್

Upayuktha
0


ಕಾಸರಗೋಡು: ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಪೂರ್ಣ ರಾಗಿರುತ್ತಾರೆ. ಇಂತಹ ಚಟುವಟಿಕೆಗಳು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಡಾ. ಎಚ್. ಪ್ರಭಾಕರ್ ರಾವ್ ಅಭಿಪ್ರಾಯಪಟ್ಟರು.


ಅವರು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ಆಯೋಜಿಸಲಾದ “ನಾಡು–ನುಡಿ ಹಬ್ಬ–2026” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ವ್ಯಕ್ತಿಯ ಆರೋಗ್ಯವನ್ನು ವೈದ್ಯರು ಸರಿಪಡಿಸಬಹುದು; ಆದರೆ ಸಮಾಜದ ಸಮಗ್ರ ಆರೋಗ್ಯಕ್ಕಾಗಿ ವಾಮನ ರಾಯರಂತಹ ಸಂಘಟಕರ ಯೋಚನೆಗಳು ಮತ್ತು ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು. ಅದಕ್ಕೆ ಸಮಾಜದ ಎಲ್ಲ ವರ್ಗಗಳ ಸ್ಪಂದನೆ ಅಗತ್ಯ” ಎಂದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ರವೀಂದ್ರ ಜೆಪ್ಪು ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ “ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಪ್ರದಾನ ಮಾಡಲಾಯಿತು.


ಡಾ. ರವೀಂದ್ರ ಜೆಪ್ಪು, ಕೆ. ಶ್ರೀನಿವಾಸ್ ಸೆರ್ವೆಗಾರ್ (ಹೆಬ್ರಿ), ಎಚ್. ಶಶಿಧರ್ ನಾಯಕ್, ಜೆ.ಕೆ. ರಾವ್ (ಮಂಗಳೂರು), ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಡಾ. ದೇವಪ್ಪ ಕೆ.ವಿ, ಡಾ. ಸತೀಶ್, ಡಾ. ರಾಜೇಶ್ (ಮಂಗಳೂರು), ಪ್ರದೀಪ್ ಬೇಕಲ್, ಕೊತ್ವಾಲ್ ಪದ್ಮನಾಭ ಶೆರುಗಾರ್, ಡಾ. ರಾಜೇಂದ್ರ, ಮಂಜುನಾಥ ಬೈಂದೂರು, ಗಣಪತಿ ಹೋಬಳಿದಾರ್, ಉಮೇಶ್ ಕುಂಬ್ಳೆ, ದಿನೇಶ್ ನಾಗರಕಟ್ಟೆ, ಶ್ರೀಮತಿ ರೇಖಾ ಸುಧೇಶ್ ರಾವ್ ಮತ್ತು ನಾಗರಾಜ್ ಮದ್ದೋಡಿ ಅವರಿಗೆ ಪ್ರಶಸ್ತಿಗಳು ಪ್ರದಾನಿಸಲಾಯಿತು.



ಇದೇ ವೇದಿಕೆಯಲ್ಲಿ ಕಾಸರಗೋಡು ನಗರಸಭೆಗೆ ಆಯ್ಕೆಯಾದ ಬಿಜೆಪಿಯ 12 ನೂತನ ನಗರಸಭಾ ಸದಸ್ಯರನ್ನು ಕನ್ನಡ ಭವನದ ವತಿಯಿಂದ ಡಾ. ವಾಮನ್ ರಾವ್ ಬೇಕಲ್ ಗೌರವಿಸಿದರು. ಕನ್ನಡ ಭವನದ ಕಳೆದ 25 ವರ್ಷಗಳ ಸಹಯಾತ್ರಿಕರಿಗೆ “ರಜತ ಸಂಭ್ರಮದ ಗೌರವ ಪ್ರಶಸ್ತಿ” ನೀಡಲಾಯಿತು.


ಕಾರ್ಯಕ್ರಮದಲ್ಲಿ ರಜತ ಸಂಭ್ರಮ ಸಮಿತಿ ಸಂಚಾಲಕ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸ್ವಾಗತಿಸಿದರು. ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಸುಧೇಶ್ ರಾವ್ ಕಾರ್ಯಕ್ರಮ ನಿರೂಪಣೆಗೈದರು. ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದ ಅರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top