ಶ್ರೀವಿಷ್ಣು ಹಾಗೂ ಶೇಷನಾಗನ ಸಂಬಂಧ

Upayuktha
0


ರ್ವಾಲಂಕೃತ ಭೂಷಿತನಾಗಿ ಭಗವಾನ್ ಶ್ರೀ ವಿಷ್ಣು ಸರ್ಪದ ಹಾಸಿಗೆ ಮೇಲೆ ಆನಂದದಿ ಪವಡಿಸಿದ್ದಾನೆ.ಯಾವುದೇ ಚಿತ್ರಪಟವನ್ನು ಸಾಮಾನ್ಯವಾಗಿ ಕಂಡಾಗ ಶ್ರೀವಿಷ್ಣುವು ಶೇಷನ ಮೇಲೆ ಶಯನಿಸಿರುತ್ತಾನೆ. ಸರ್ಪವು ವಿಷ್ಣುವಿನ ಪರಮಭಕ್ತ ಎಂದು ಹೇಳಲಾಗುತ್ತದೆ. ಮಹಾಭಾರತದ ಪ್ರಕಾರ ಕಶ್ಯಪ ಹಾಗೂ ಕದ್ರು ಶೇಷನಾಗನ ಮಾತಾಪಿತರು.


ಸರ್ಪಕ್ಕೆ ಅನಂತ ಎಂದು ಸಂಬೋಧಿಸುತ್ತಾರೆ. ಅನಂತ ಎಂದರೆ ಅಗಣಿತ, ಅಂತಿಮವಿಲ್ಲದ್ದು ಎಂಬ ಸೂಚನೆ ನೀಡುತ್ತದೆ.ಅನಂತನ ಹಾಸಿಗೆ ಮೇಲೆ ಮಲಗಿರುವ ಮಹಾವಿಷ್ಣುವನ್ನು ಅನಂತಶಯನ, ಶೇಷಶಯನ ಎಂದು ಕರೆಯುವುದುಂಟು. ಹಿಂದೂ ಪುರಾಣದಲ್ಲಿ ಅನಂತನನ್ನು ಆದಿಶೇಷ, ಶೇಷನಾಗ ಎಂದು ಕರೆಯುವ ಪ್ರತೀತಿ ಇದೆ. ಹೀಗಾಗಿ ವಿಷ್ಣು ಶೇಷಶಯನನೂ ಹೌದು. 


ವಿಷ್ಣು ಶೇಷನಾಗನ ಮೇಲೆ ಮಲಗಲು ಕಾರಣವೇನು:

ಪುರಾಣದ ಪ್ರಕಾರ ಒಮ್ಮೆ ಶಿವನು ಭೂಪ್ರವಾಸಕ್ಕೆ ಹೋದಾಗ ಮನುಷ್ಯರು ಬದುಕಿನಲ್ಲಿ ಘಟಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚಿಂತಿಸುತ್ತಿರುವುದನ್ನು, ದುಃಖಿಸುತ್ತಿರುವುದನ್ನು ಕಂಡನು. ಬಳಿಕ ವಿಷ್ಣುವಿನಲ್ಲಿ ಬಳಿ ಬ್ರಹ್ಮಾಂಡದಲ್ಲಿ ಧನಾತ್ಮಕತೆ, ಸುಖ-ಸಂತೋಷ ತುಂಬುವಂತೆ ಕೇಳಿದನು. 


ಪ್ರತಿಯಾಗಿ ವಿಷ್ಣು ಶೇಷನಾಗನ ಮೇಲೆ ಮಲಗಿ ಈ ಹಾವಿನಂತೆ ಮನುಷ್ಯನಿಗೆ ಕಷ್ಟ ದುಃಖಗಳು ಸರ್ವೇಸಾಮಾನ್ಯ ಎಂದು ಸಂದೇಶ ಹೇಳಿದನು. ಶಿವನು ಈ ಸನ್ನಿವೇಶ ಕಂಡು ವಿಷ್ಣುವಿನ ತತ್ವವನ್ನು ಜಗತ್ತಿಗೆ ಸಾರಿದನು. ಅಂದಿನಿಂದ ವಿಷ್ಣು ಶೇಷನನ್ನು ತನ್ನ ಹಾಸಿಗೆಯಾಗಿ ಮಾಡಿಕೊಂಡನು. 


ಶೇಷನಾಗ ವಿಷ್ಣುವಿನ ಹೊಸ ಅವತಾರ:

ವಿಷ್ಣುವಿನ ಮತ್ತೊಂದು ಅವತಾರ ಶೇಷನಾಗ ಎಂದು ಹೇಳಲಾಗುತ್ತದೆ. ಧರೆಯ ಮೇಲೆ ಪಾಪಗಳು ಅಸಂಖ್ಯವಾದಾಗ ಮಹಾವಿಷ್ಣುವು ಹೊಸ ಹೊಸ ರೂಪದಿ ಅವತಾರವೆತ್ತುತ್ತಾನೆ ಎಂದು ಪುರಾಣಗಳು ಹೇಳುತ್ತವೆ. 


ವಿಷ್ಣು ಹಾಗೂ ಶೇಷನಾಗನ ಸಂಬಂಧ ಅವಿನಾಭಾವಾದದ್ದು:

ಜಗತ್ತನ್ನು ಸಂರಕ್ಷಣೆ ಮಾಡುವ ಆಶಯದಿ ವಿಷ್ಣುವು ಶೇಷನ ಮೇಲೆ ಮಲಗುತ್ತಾನೆ. ವಿಷ್ಣುವಿಗೆ ಇದು ಕೇವಲ ಶಯನಿಸುವ ಮೆತ್ತೆಯಲ್ಲ, ಅವನಿಗೆ ರಕ್ಷಣೆಯು ಹೌದು. ಕಂಸನ ಬಂಧನದಲ್ಲಿ ಜನಿಸಿದ ಕೃಷ್ಣನನ್ನು ಮಾವನ ಸಾವಿನ ದವಡೆಯಿಂದ ಪಾರು ಮಾಡಲು ವಸುದೇವ ಗೋಕುಲಕ್ಕೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಮಳೆಯ ರಭಸದಿ ಬಾಲಕೃಷ್ಣನನ್ನು ರಕ್ಷಣೆ ಮಾಡಿದ್ದು ಈ ಶೇಷನೆ ರಕ್ಷಿಸಿದ. 


ಮಹಾವಿಷ್ಣು ಹಾಗೂ ಶೇಷನಾಗನ ಸಂಬಂಧ ಅವಿನಾಭಾವವಾದದ್ದು, ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಣೆಗೈಯಲು ಶ್ರೀವಿಷ್ಣುವಿಗೆ ಅನಂತ, ಅನಂತನಂತವಾಗಿ ಸಹಕರಿಸಿದ್ದಾನೆ. ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ, ದ್ವಾಪರಯುಗದಲ್ಲಿ ಬಲರಾಮನಾಗಿ ಶೇಷ ಅವತರಿಸಿದ್ದಾನೆ ಹಾಗೂ ವಿಷ್ಣುವಿಗೆ ಕೆಟ್ಟವರನ್ನು ಕೆಟ್ಟತನವನ್ನು ನಾಶಮಾಡಲು ಸಹಾಯ ಮಾಡಿದ್ದಾನೆ. ಹಿಂದೂ ಧರ್ಮದ ಪ್ರಕಾರ ಶೇಷನಾಗ ವಿಷ್ಣುವಿನ ಬಲಿಷ್ಠವಾದ ಶಕ್ತಿ. ಆದಕಾರಣ ಶ್ರೀವಿಷ್ಣು ಅದೇ ಶಕ್ತಿಯ ಮೇಲೆ ಸದಾ ಮಲಗಿರುತ್ತಾನೆ. ಶೇಷನಾಗ ಮಹಾವಿಷ್ಣುವನ್ನು ಆರಾಧಿಸುವ ಸೇವಕ. 


ಶೇಷನಾಗ ಕಾಲದ ಮಾರ್ಗದರ್ಶಕ:

ವಿಷ್ಣುವಿನ ರೂಪವು ಕಾಲದ ಮಾರ್ಗದರ್ಶಕ ಎಂದು ಕರೆಯಲಾಗಿದೆ. ಆದಿಶೇಷನು ತನ್ನ ಮೈಯ ಸುರುಳಿಯನ್ನು ಬಿಚ್ಚುತ್ತಾ ಹೋದಾಗ ಕಾಲ ಮುಂದೆ ಸಾಗುತ್ತಾ ಹೋಗುತ್ತದೆ. ಸೃಷ್ಟಿ ಬದಲಾಗುತ್ತಾ ಹೋಗುತ್ತದೆ. ತನ್ನ ಆರಂಭಿಕ ಸುರುಳಿಗೆ ಪುನಃ ವಾಪಾಸ್ಸಾದಾಗ ಕಾಲ ನಿಲ್ಲುತ್ತದೆ ಎಂಬುದು ಪ್ರತೀತಿ ಇದೆ. ವಿಷ್ಣು ಹಾಗೂ ಶೇಷನ ಸಂಬಂಧ ಶಾಶ್ವತವಾದದ್ದು. 


ಅವನು ವಿಶ್ರಾಂತಿ ಪಡೆಯುತ್ತಿದ್ದಾನೆ. ಕೆಟ್ಟ ಸಮಯದಲ್ಲಿ ತೊಂದರೆಗಳನ್ನು ನಿಭಾಯಿಸಿ ಶಾಂತ, ಸಂಯಮ, ತಾಳ್ಮೆ ಮೂಲಕ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವುದು. ಕಷ್ಟದ ಸಮಯದಲ್ಲಿ ಶಾಂತ, ಸ್ಥಿರ, ನಿರ್ಭೀತ, ದೃಢಮನಸ್ಸು ಹಾಗೂ ಧರ್ಮವನ್ನು ಅನುಕರಣೆ ಮಾಡುವುದು ಶೇಷಶಯನನ ಸಂಕೇತವಾಗಿದೆ. ಶೇಷನ ಸಾವಿರ ತಲೆಗಳು ವಿಷ್ಣುವಿಗೆ ಕಿರೀಟವಾಗಿದೆ. ಶೇಷನಾಗನು ತನ್ನ ಜಿಹ್ವೆಯಿಂದ ಮಹಾವಿಷ್ಣುವಿನ ಸ್ತುತಿಯನ್ನು ನಿರಂತರವಾಗಿ ಪಠಿಸುತ್ತಾನೆ.


ಶೇಷನಾಗನು ವಿಷ್ಣುವಿನ ಅಭಿವ್ಯಕ್ತಿಯಾಗಿದ್ದು, ವಿಷ್ಣು ವಿಶ್ರಾಂತಿ ಪಡೆಯಲು ಸುರುಳಿಯ ಮೆತ್ತೆಯನ್ನು ಒದಗಿಸುತ್ತಾನೆ. "ಶಾಂತಕರಂಭುಜಶಯನಂ" ಶಾಸ್ತ್ರದಲ್ಲಿ ಭುಜಂಗ ಎಂದರೆ ಶೇಷನಾಗನ ಮೇಲೆ ಮಲಗಿದ ವಿಷ್ಣುವಿನ ಶಾಂತ ಸ್ವರೂಪ. ಶಾಂತರೂಪಿ ಭಗವಾನ್ ವಿಷ್ಣುವಿನ ವಿಶ್ರಾಂತಿ ತಾಣ ಶೇಷನಾಗ. ಶೇಷನಾಗ ವಿಷ್ಣುವಿನ ಶಕ್ತಿಯ ಪ್ರತಿರೂಪ. ಶೇಷನಾಗ ಎಲ್ಲ ಗ್ರಹಗಳನ್ನು ತನ್ನ ಸುರುಳಿಯೊಳಗೆ ಇಟ್ಟುಕೊಂಡು ಸ್ತುತಿ ಹಾಡುತ್ತಾನೆ. 


ವಿಷ್ಣು ಹಾಗೂ ಶೇಷನಾಗ ಒಂದೇ ಆತ್ಮ ಎರಡು ದೇಹ:

ಒಮ್ಮೆ ಶಿವ ತಾಂಡವ ಮಾಡುತ್ತಿರುವಾಗ ವಿಷ್ಣು ಶಿವನ ನೃತ್ಯವನ್ನು ವೀಕ್ಷಿಸುತ್ತ ಭಾವಪರವಶರಾದನು ಶಿವನ ನೃತ್ಯದಲ್ಲಿ ಸಂಪೂರ್ಣವಾಗಿ ತಲ್ಲೀನನಾದನು. ತನ್ಮಯನಾದನು. ಇದು ಶೇಷನಿಗೆ ಕಂಪನವನ್ನು ಉಂಟುಮಾಡಿತು. ಶೇಷನ ಮೇಲೆ ತೀವ್ರತರ ಒತ್ತಡವನ್ನುಂಟು ಮಾಡಿತು. ಶಿವನು ನೃತ್ಯವನ್ನು ನಿಲ್ಲಿಸಿದಾಗ ವಿಷ್ಣು ಸಹಜಸ್ಥಿತಿಗೆ ಮರಳಿದನು. ಶೇಷನ ಮೇಲಿನ ಭಾರವು ಕಡಿಮೆಯಾಯಿತು. ಈ ಕುರಿತು ಶೇಷ, ವಿಷ್ಣುವಿನ ಬಳಿ ಕೇಳಿದಾಗ ತಾನು ಶಿವನ ನೃತ್ಯವನ್ನು ಭಾವಪರವಶವಾಗಿ ವೀಕ್ಷಿಸುತ್ತಿದ್ದೆ ಎಂದು ಮುಗುಳ್ನಕ್ಕನು. 


ಮನುಜನಾದ ವಿಷ್ಣುವಿನ ಭಕ್ತ:

ಈ ಸನ್ನಿವೇಶವನ್ನು ಕಂಡು, ಕೇಳಿ ಶೇಷನು ತಾನು ಶಿವ ತಾಂಡವವನ್ನು ಕಲಿಯಬೇಕು ಎಂದು ವಿಷ್ಣುವಿನ ಹತ್ತಿರ ಕೇಳಿದಾಗ ಸನ್ಮನದಿಂದ  ಆಶೀರ್ವದಿಸಿದನು. ಮುಂದೆ ಮಾನವ ಜನ್ಮ ಪಡೆದನೆಂಬುದಕ್ಕೆ ಇತಿಹಾಸವಿದೆ.


-ದೀಪಶ್ರೀ ಎಸ್ ಕೂಡ್ಲಿಗಿ

ಶಿಕ್ಷಕಿ ಕಥೆಗಾರ್ತಿ ಹಾಗೂ ಹವ್ಯಾಸಿ ಬರಹಗಾರ್ತಿ 



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top