ಪುತ್ತೂರು: "ಗಣರಾಜ್ಯೋತ್ಸವವು ಗಳಿಸಿದ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಎಚ್ಚರಿಸುವ ದಿನ. ಭವ್ಯ ಭಾರತದ ಪ್ರಜೆಗಳಾಗಿರುವ ನಾವು ಕಾನೂನಿಗೆ ತಲೆಬಾಗಿ ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕು. ಶಿಸ್ತನ್ನು ಭಯದಿಂದ ಪಾಲಿಸುವುದಲ್ಲ ಅರಿವಿನಿಂದ ರೂಢಿಸಿಕೊಳ್ಳಬೇಕು. ಪರಿಶ್ರಮ, ಸತತ ಪ್ರಯತ್ನ, ಸ್ಪಷ್ಟ ಗುರಿ, ಮತ್ತು ಸೋಲನ್ನು ಒಪ್ಪಿಕೊಳ್ಳದ ಮನೋಸೈರ್ಯಗಳಿಂದ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ. ಭಾರತ ದೇಶವು ನಮಗೆ ಬಹಳಷ್ಟು ಸೌಭಾಗ್ಯಗಳನ್ನು ಕೊಟ್ಟಿದೆ. ಹೊಣೆಯರಿತ ಪ್ರಜೆಯಾಗಿ ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದು ನಮ್ಮ ಕರ್ತವ್ಯ "ಎಂದು ಇಂಡಿಯನ್ ನೇವಿಯ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಭುವನ್ ಕುಮಾರ್ ಕೆ ನುಡಿದರು.
ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ 77 ನೇ ವರ್ಷದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಗೈದು ಮಾತನಾಡುತ್ತಿದ್ದರು. ಸುದಾನ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಶ್ರೀಯುತರು ತಮ್ಮ ಶಾಲಾ ದಿನಗಳನ್ನು ಪಡೆದ ಸ್ಪೂರ್ತಿಯನ್ನು ನೆನಪಿಸಿಕೊಂಡರು.
ಸುದಾನ ಪದವಿ ಪೂರ್ವಕಾಲೇಜಿ ನ ಸಂಚಾಲಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವರು ಮಾತನಾಡುತ್ತಾ "ಭಾರತವು ಹಳೆಯ ಪ್ರಜಾಪ್ರಭುತ್ವ ದೇಶ. ಗಣರಾಜ್ಯ ಎನ್ನುವುದು ಈ ದೇಶಕ್ಕೆ ಹೊಸದಲ್ಲ. ಆರನೇ ಶತಮಾನದಿಂದಲೂ ಇದು ನಮ್ಮಲ್ಲಿತ್ತು ಎಂದು ಇತಿಹಾಸವು ಹೇಳುತ್ತದೆ. ಗಣತಂತ್ರವನ್ನು ರೂಪಿಸಿ ದೇಶವನ್ನು ಸಂವಿಧಾನ ಬದ್ಧವಾದ ಏಕಸೂತ್ರದ ಆಳ್ವಿಕೆಗೆ ತಂದ ಅದ್ಭುತ ದಿನ ಇದು. ನಾವೆಲ್ಲರೂ ಪಡೆದಿರುವ ಹಕ್ಕುಗಳ ಬಗೆಗೆ ಮತ್ತು ದೇಶಕ್ಕೆ ನಾವು ಮಾಡಬೇಕಾದ ಕರ್ತವ್ಯಗಳ ಬಗೆಗೆ ನಮಗೆ ಅರಿವಿರಬೇಕು. ಕರ್ತವ್ಯವನ್ನು ನಿರ್ವಹಿಸಿದವರಿಗೆ ಮಾತ್ರ ಹಕ್ಕುಗಳನ್ನು ಪಡೆಯಲು ಅವಕಾಶವಿರುತ್ತದೆ" ಎಂದು ನುಡಿದರು.
ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಮಹತ್ವದ ಬಗೆಗೆ ವಿದ್ಯಾರ್ಥಿನಿ ಪ್ರತಿಭಾ ಕಲಾ ಸಂಘದ ವಿದ್ಯಾರ್ಥಿ ನಾಯಕಿ ಸಮನ್ವಿತಾ ಶರ್ಮ ವಿವರಿಸಿದರು. ವಿದ್ಯಾರ್ಥಿ ವಿರೋಧ ಪಕ್ಷದ ಉಪನಾಯಕ ಭಗತ್ ಕೃಷ್ಣ ಮತದಾನದ ಹಕ್ಕು ಮತ್ತು ಅದರ ಮಹತ್ವವನ್ನು ವಿವರಿಸಿ, ಪ್ರಮಾಣ ವಚನವನ್ನು ಬೋಧಿಸಿದರು. ಸುದಾನ ಪದವಿ ಪೂರ್ವಕಾಲೇಜಿ ನ ಪ್ರಾಂಶುಪಾಲರಾದ ಸುಪ್ರೀತ್ ಕೆ ಸಿ, ಶಾಲಾ ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ಆಡಳಿತಾಧಿಕಾರಿ ಶ್ರೀ ಸುಶಾಂತ್ ಹಾರ್ವಿನ್, ಉಪಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ ಶ್ರೀಮತಿ ಪ್ರತಿಮಾ ಎನ್ ಜಿ, ಗಾಯತ್ರಿ ಕೆ, ಅಮೃತವಾಣಿ, ಶಾಲಾ ವಿದ್ಯಾರ್ಥಿ ನಾಯಕ ವಿಸ್ಮಯ್ ಬಿ ವಿ, ವಿದ್ಯಾರ್ಥಿ ಕಾರ್ಯದರ್ಶಿ ವಿಕಾಸ್ ಹನುಮಂತ್ ರಾಥೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಚಿರನ್ ಗೌಡ ಸ್ವಾಗತಿಸಿ, ವಿದ್ಯಾರ್ಥಿನಿ ಫಾತಿಮಾ ಸನ ವಂದಿಸಿದರು. ವಿದ್ಯಾರ್ಥಿನಿ ಫಾತಿಮಾ ಶನುಮ್ ಮುಖ್ಯ ಅಭ್ಯಾಗತರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿಗಳಾದ ಶಿಝಾ ಫಾತಿಮಾ ಫಾತಿಮಾ ಶಝಾ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಮತ್ತು ನೃತ್ಯ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಸಿಹಿ ಹಂಚಲಾಯಿತು. ಶಾಲೆಯ ಜಾಗೃತಿ ಸೋಷಿಯಲ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿರ್ದೇಶಕರಾದ ಯೋಗಿತಾ ಕೆ, ಅಶ್ವಿನಿ, ಹರ್ಷಿತಾ ನಾಯ್ಕ, ನಿಶ್ಮಿತಾ, ಯೋಗಿತಾ ಎ ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

