ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್‌ ರೈ ಯವರಿಗೆ ಡಾಕ್ಟರೇಟ್‌ ಪದವಿ

Upayuktha
0



ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥೆ ಭಾರತಿ ಎಸ್‌ ರೈ ಯವರು ಸಲ್ಲಿಸಿದ “ರಿಇನ್ವೆಂಟಿಂಗ್‌ ಕರ್ಣ: ಅನ್‌ ಎಕ್ಸಪ್ಲೋರೇಷನ್‌ ಆಫ್‌ ಸೆಲೆಕ್ಟ್‌ ರಿಟೆಲ್ಲಿಂಗ್ಸ್‌ ಆಫ್‌ ದ ಮಹಾಭಾರತ” [REINVENTING KARNA: AN EXPLORATION OF SELECT RETELLINGS OF THE MAHABHARATA] ಎಂಬ ಮಹಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯವು ಡಾಕ್ಟರೇಟ್‌ ಪದವಿಯನ್ನು ನೀಡಿದೆ.


ಅವರಿಗೆ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕಿ ಡಾ| ಮಂಜುಳಾ ಕೆ ಟಿ ಇವರು ಮಾರ್ಗದರ್ಶನ ನೀಡಿರುತ್ತಾರೆ. ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಹನ್ನೆರಡು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತ ರಾಷ್ಟ್ರೀಯ ಪೀರ್-ರಿವ್ಯೂಡ್ ಸಂಶೋಧನಾ  ನಿಯತಕಾಲಿಕಗಳಲ್ಲಿ(Peer Reviewed) ಪ್ರಕಟಿಸಿದ್ದಾರೆ, ಮಾತ್ರವಲ್ಲದೆ ಅವರು 3 ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.




ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಎಂ., ಫಿಲ್ ಹಾಗೂ ಕಾನೂನು ಪದವೀಧರೆಯಾಗಿರುವ ಇವರು ಪ್ರಸ್ತುತ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ   ಇಂಗ್ಲೀಷ್‌ ವಿಭಾಗದ ಮುಖ್ಯಸ್ಥೆ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸಾಧನೆಗೆ ಸಂಸ್ಥೆಯ ಸಂಚಾಲಕರಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಾಸ್ ರವರು ಹಾಗೂ ಪ್ರಾಚಾರ್ಯರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ ಅವರು ಅಭಿನಂದಿಸಿದ್ದಾರೆ. ಶೈಕ್ಷಣಿಕ ಪ್ರಯಾಣದುದ್ದಕ್ಕೂ ಅವರಿಗೆ ಪ್ರೋತ್ಸಾಹ ನೀಡಿದ ಸಂಸ್ಥೆಯ ಪ್ರಾಚಾರ್ಯರುಗಳು, ಮಾರ್ಗದರ್ಶಕರಾದ ಡಾ| ಮಂಜುಳಾ ಕೆ ಟಿ ಅವರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಶುಭಕೋರಿದ್ದಾರೆ.


Post a Comment

0 Comments
Post a Comment (0)
To Top