ಭಾನುವಾರವೆಂಬ ಭಾಗ್ಯ!!

Upayuktha
0


ಬ್ಬಾ ಶನಿವಾರ ಬಂತು! ಅಯ್ಯೋ ಸೋಮವಾರ ಬಂತು! ಎಂಬುವವರ ನಡುವೆ "ಯೆಸ್ ಟುಡೇ ಇಸ್ ಸಂಡೆ" ಎಂದು ಖುಷಿ ಪಡುವ ನಾವು, ಮನುಷ್ಯ ಜನ್ಮಕ್ಕೆ ದೊರೆತಿರುವ ಭಾಗ್ಯವೆಂದು ಭಾನುವಾರವನ್ನು ಬಿಂಬಿಸುತ್ತೇವೆ. ಸಣ್ಣವರಿರಲಿ ದೊಡ್ಡವರಿರಲಿ ಪ್ರತಿದಿನ ಕಾಯುವುದೇ ಭಾನುವಾರಕ್ಕಾಗಿ.


ಸಮುದ್ರದಲ್ಲಿ ಎಷ್ಟೇ ಹನಿಗಳಿದ್ದರೂ ಎಲ್ಲಾ ಹನಿಗಳು ಮುತ್ತಾಗಲು ಸಾಧ್ಯವಿಲ್ಲ. ಹಾಗೆಯೇ ವಾರದ ಮಧ್ಯದಲ್ಲಿ ಎಷ್ಟು ರಜೆ ಬಂದರೂ ಅದು ಸಂಡೇ ಆಗಲು ಸಾಧ್ಯವೇ ಇಲ್ಲ.


ಭಾನುವಾರಕ್ಕೆ ಇರುವ ಗೌರವ ಬಹುಶ ಯಾವ ವಾರಕ್ಕೂ ಇಲ್ಲ, ಕಾರಣ ಇಷ್ಟೇ ಭಾನುವಾರ ನಾವು ಏನೇನು ಮಾಡಬೇಕೆಂಬ ಪಟ್ಟಿಯನ್ನು ಇಡೀ ವಾರ ಕೂತು ನಿರ್ಧರಿಸುತ್ತೇವೆ.


ನನಗೆ ಗೊತ್ತಿದೆ, ನನ್ನ ಮತ್ತು ನಿಮ್ಮ ಪಟ್ಟಿಯಲ್ಲಿರುವ ಮೊದಲ ಪ್ಲಾನ್ ಲೇಟಾಗಿ ಏಳುವುದು ಎಂದು. ಯಾವುದರ ಬಗ್ಗೆಯೂ ಚಿಂತಿಸದೆ ಚಂದದ ನಿದ್ರೆ ನಮ್ಮ ಪಾಲಿಗೆ ನೀ ಡಲು ಭಾನುವಾರದಿಂದ ಮಾತ್ರ ಸಾಧ್ಯ. ಅಷ್ಟೇ ಅಲ್ಲಈ ಮದುವೆ ಮುಂಜಿಗಳಿಗೆಲ್ಲ ಅಚ್ಚುಮೆಚ್ಚಿನ ವಾರ ಅಂದ್ರೆ ಅದು ಭಾನುವಾರ. ಯಾಕೆಂದರೆ ಮನೆ ಮಂದಿ ಎಲ್ಲಾ ಹೋಗಿ ಬರಬಹುದು. ಅವಸರವಿಲ್ಲದೆ ಎಲ್ಲಾ ಕಡೆ ತಿರುಗಾಡಿಕೊಂಡು ಬರಬಹುದು ಎನ್ನುವ ಉದ್ದೇಶದಿಂದ.


ನಾವು ಸಣ್ಣವರಿದ್ದಾಗ ಶಾಲೆಗೆ ಹೋಗುವ ಸಮಯದಲ್ಲಿ ಶನಿವಾರವೆಂದರೆ ಬಹಳ ಖುಷಿ, ಯಾಕೆಂದರೆ ನಾಳೆ ಭಾನುವಾರವೆಂಬ ಸಂಭ್ರಮ ಎಲ್ಲರ ಮನಸಲ್ಲೂ ಮನೆ ಮಾಡಿತ್ತು. ಅದೇ ರೀತಿ ಈಗ ಕಾಲೇಜು ಹೋಗುವಾಗಲೂ ಆ ಖುಷಿ ತಪ್ಪಿಲ್ಲಅದರಂತೆ ಮುಂದೆ ಕೆಲಸಕ್ಕೆ ಸೇರಿದರು ಆ ಸಂಭ್ರಮ ಮರೆಯಾಗದು ಎಂಬ ನಂಬಿಕೆ ನನಗಿದೆ. ಶನಿವಾರದ ನಮ್ಮ ದಿನ ಉಲ್ಲಾಸವಾಗಿರಲು ಮರುದಿನದ ಭಾನುವಾರವೇ ಕಾರಣ. ಅದರಲ್ಲೂ ಭಾನುವಾರದ ದಿನವೂ ಸ್ಪೆಷಲ್ ಕ್ಲಾಸ್ ಅಥವಾ ಡ್ಯೂಟಿ ಇದ್ದರಂತೂ ಮುಗಿಯಿತು. ನಮ್ಮ ಸಂಭ್ರಮವೆಲ್ಲ ಮಣ್ಣು ಪಾಲು.


ಇಡೀ ವಾರ ಕೆಲಸ ಮಾಡಿದರು ಪರವಾಗಿಲ್ಲ. ಆದರೆ ಭಾನುವಾರದ ದಿನ ಮಾತ್ರ ನೆಮ್ಮದಿಯಾಗಿ ಮನೆಯಲ್ಲಿ ಇರಬೇಕು ಎಂದು ಯೋಚಿಸುವವರ ಸಂಖ್ಯೆ ಜಾಸ್ತಿಯೇ ಇದೆ ಅದರಲ್ಲಿ ನಾವು ನೀವು ಇರಲೂಬಹುದು.


ನಾವು ಭಾನುವಾರವನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದಕ್ಕೆ ಉದಾಹರಣೆ ಎಂದರೆ, ಯಾವುದಾದರೂ ಒಳ್ಳೆ ಹಬ್ಬ ಭಾನುವಾರ ಬಿದ್ದಿದ್ದರೆ ಹಾಳಾದ ಹಬ್ಬ ಹೋಗಿ ಹೋಗಿ ಭಾನುವಾರನೇ ಬಂದ್ಬಿಟ್ಟಿದೆ ಬೇರೆ ದಿನನಾದರೂ ಬಂದಿದ್ದರೆ ಹೊಸ ರಜೆ ಆದ್ರು ಸಿಕ್ತಿತ್ತು ಅಂತ ಹಬ್ಬಕ್ಕೆ ಬೈತೀವಿ ಬಿಟ್ರೆ ಭಾನುವಾರಕ್ಕೆ ಏನು ಅನ್ನಲ್ಲ.


ಒಂದು ವೇಳೆ ಭಾನುವಾರ ಇಲ್ಲದೆ ಹೋಗಿದ್ದರೆ? ಈ ಪ್ರಶ್ನೆಯನ್ನು ನಾನು ಊಹಿಸಲು ಸಾಧ್ಯವಿಲ್ಲ, ಯಾಕೆಂದರೆ ಇದು ನನ್ನ ಊಹೆಗೂ ಮೀರಿ ಉತ್ತರಗಳನ್ನು ಹೊಂದಿದೆ.


ಭಾನುವಾರ ಪ್ರಿಯರಾದ ನಾವು ಭಾನುವಾರವಿಲ್ಲದಿದ್ದರೆ ಒಂದು ಹಂತದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದೆವೋ ಏನೋ, ಅಷ್ಟೇ ಯಾಕೆ ಭಾನುವಾರವನ್ನೇ ನಂಬಿರುವ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಮೀನಾಮೇಷ ಎಣಿಸುತ್ತಿದ್ದರೋ ಏನೋ. ಅದೇನೇ ಇರಲಿ ಭಾನುವಾರವಿಲ್ಲದ ಜೀವನ ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯ ಕುಲದ ಭಾಗ್ಯವೆಂದರೆ ಅದು ಭಾನುವಾರ ಎಂದರೆ ತಪ್ಪಾಗಲಾರದು.




- ಹರ್ಷಿತ ಶಿಶಿಲ

ಪತ್ರಿಕೋದ್ಯಮ ವಿಭಾಗ

ಎಸ್‌ಡಿಎಂಸಿ ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top