ಡಿ.21: ಕಲಬುರಗಿಯಲ್ಲಿ ಬನ್ನಂಜೆ 90ರ ವಿಶ್ವ ನಮನ

Upayuktha
0

ಉಪನ್ಯಾಸ- ಸಂಗೀತ- ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ




ಕಲಬುರಗಿ: ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮತ್ತು ಕಲಬುರಗಿಯ ಶ್ರೀ ಹನುಮಾನ್ ಸೇವಾ ಸಂಘ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಡಿ.21 ರಂದು ನಗರದ ನೂತನ ವಿದ್ಯಾಲಯದ ಸಂಗಮೇಶ್ವರ ಸಭಾಗೃಹದಲ್ಲಿ ನಾಡಿನ ಹಿರಿಯ ವಿದ್ವಾಂಸ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಸ್ಮರಣಾರ್ಥ "ಬನ್ನಂಜೆ 90 ರ ವಿಶ್ವ ನಮನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬನ್ನಂಜೆ ಗೋವಿಂದಾಚಾರ್ಯ ವಿಶ್ವ ನಮನ ಕಾರ್ಯಕ್ರಮದ ಸ್ವಾಗತ ಸಮಿತಿಯ ಸದಸ್ಯರಾದ ಡಾ. ಸದಾನಂದ ಪೆರ್ಲ ಹೇಳಿದರು.


ನಗರದ ಪತ್ರಿಕಾ ಭವನದಲ್ಲಿ ಗುರುವಾರ (ಡಿ.18ರಂದು) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬನ್ನಂಜೆ ವಿಶ್ವನಮನ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 10.30 ಕ್ಕೆ ಅಸ್ಸಾಂನ ಕುಮಾರಭಾಸ್ಕರ ವರ್ಮಾ ಸಂಸ್ಕೃತ ಮತ್ತು ಪುರಾತನಾಧ್ಯಯನ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಲ್ಹಾದ್ ಜೋಶಿ  ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿ ಡಾ. ಮಲ್ಲೆಪುರಂ ಜಿ. ವೆಂಕಟೇಶ್, ಪ್ರತಿಷ್ಠಾನದ ವಿಶ್ವಸ್ಥರಾದ ಡಾ. ವೀಣಾ ಬನ್ನಂಜೆ ಅವರು ಆಗಮಿಸುವರು.


ಅತಿಥಿಗಳಾಗಿ ಪಾಲಿಕೆ ಸದಸ್ಯ ಡಾ. ಶಂಭುಲಿಂಗ ಬಳಬಟ್ಟಿ‌ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಡಾ. ಶ್ರೀನಿವಾಸ್ ಸಿರನೂರಕರ್ ವಹಿಸುವರು ಎಂದು ಅವರು ಹೇಳಿದರು.


ಗೋಷ್ಠಿ ಒಂದರಲ್ಲಿ "ಬನ್ನಂಜೆ ಚಿಂತನೆಯಲ್ಲಿ ದ್ವೈತ" ಕುರಿತು ರೋಹಿತ್ ಚಕ್ರತೀರ್ಥ, ಬನ್ನಂಜೆಯವರ ಭಾಗವತ (ಭಾಷೆ ಮತ್ತು ಶೈಲಿ) ಕುರಿತು ಡಾ. ವಾಸುದೇವ್ ಅಗ್ನಿಹೋತ್ರಿ  ಉಪನ್ಯಾಸ ನೀಡುವರು. ಹಿರಿಯ ಪತ್ರಕರ್ತ ವಾದಿರಾಜ್ ವ್ಯಾಸಮುದ್ರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.


ಗೋಷ್ಟಿ ಎರಡರಲ್ಲಿ ಗೋವಿಂದ ಪಂಡಿತಾಚಾರ್ಯರು ಕುರಿತು ಸಿ.ಜೆ. ವಿಜಯಸಿಂಹಾಚಾರ್ಯರು, ಪ್ರಾಚೀನತೆ ಮತ್ತು ಸಮಕಾಲೀನತೆಯ ಸೇತು ಕುರಿತು ಡಾ. ಸದಾನಂದ ಪೆರ್ಲ ಅವರು ಉಪನ್ಯಾಸ ನೀಡುವರು. ಪತ್ರಕರ್ತ ಶೇಷ ಮೂರ್ತಿ ಅವಧಾನಿ ಮತ್ತು ಉದ್ಯಮಿ ರಂಗನಾಥ ದೇಸಾಯಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪತ್ರಕರ್ತ ಪ್ರಭಾಕರ್ ಜೋಶಿ ವಹಿಸುವರು ಎಂದು ತಿಳಿಸಿದರು.


ಗೋಷ್ಠಿ ಮೂರರಲ್ಲಿ "ಅಷ್ಟಾಂಗ ಯೋಗ ಮತ್ತು ಪಂಚಕೋಶಗಳು" ಕುರಿತು ಡಾ. ರಮೇಶ ವಾಸುದೇವರಾವ್, ರಾಮಾಯಣ ಮತ್ತು ಮಹಾಭಾರತ_ ಬನ್ನಂಜೆಯವರ ದೃಷ್ಟಿಯಲ್ಲಿ ಕುರಿತು ಡಾ. ಶೈಲಜಾ ಕೊಪ್ಪರ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಉದ್ಯಮಿ ಡಾ. ಕೃಷ್ಣಾಜಿ ಕುಲಕರ್ಣಿ, ರಾಜೀವ ಕುಲಕರ್ಣಿ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣ್ಣೂರ್ ಅವರು ವಹಿಸುವರು ಎಂದು ಡಾ. ಪೆರ್ಲ ತಿಳಿಸಿದರು.


ಬನ್ನಂಜೆಯವರ ಹಾಡುಗಬ್ಬ, ನೃತ್ಯ ಹಾಗೂ "ನನ್ನ ಪಿತಾಮಹ" ನಾಟಕ ಜರುಗಲಿವೆ. ಬನ್ನಂಜೆ ಗೋವಿಂದಾಚಾರ್ಯರು ವಾಂಘ್ಮಯ ಪ್ರಪಂಚಕ್ಕೆ ನೀಡಿದ ಮಹಾನ್ ಕೊಡುಗೆಗಳು ಹಾಗೂ ಅವರ ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವ ಹಾಗೂ ಪುರಾಣ ಆಗಮ ಶಾಸ್ತ್ರ ವೇದ ಉಪನಿಷತ್ತುಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಜನಮಾನಸಕ್ಕೆ ಮುಟ್ಟಿಸಿದ ಕಾರ್ಯಗಳನ್ನು ಚಿರಸ್ಥಾಯಿಗೊಳಿಸಲು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಠಲ ಕುಲಕರ್ಣಿ ಆಂದೋಲಾ, ಶ್ರೀಕಾಂತರಾವ್ ಎಸ್. ಕುಲಕರ್ಣಿ, ಸತೀಶ ಜಾಗೀರದಾರ್, ರಾಘವೇಂದ್ರ ಆರ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top