ಮಂಗಳೂರು: ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನದ ಅಂಗವಾಗಿ ಕನ್ನಡದ ನಡಿಗೆ ಶಾಲೆಯ ಕಡೆಗೆ, ಅಡಿಯಲ್ಲಿ ಬುಧವಾರ (ಡಿ.17) ಮಧ್ಯಾಹ್ನ 2.00 ರ ವೇಳೆಗೆ ಕಾಸ್ಸಿಯ ಪ್ರೌಢಶಾಲೆ ಜೆಪ್ಪು, ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮಕ್ಕಳ ಕವಿಗೋಷ್ಠಿಯೊಂದಿಗೆ ಕನ್ನಡ ಭವನ ದಕ್ಷಿಣ ಕನ್ನಡದ ಜಿಲ್ಲಾ ಘಟಕದ ಕಾರ್ಯಕ್ರಮವನ್ನು ನಡೆಸಲಾಯಿತು.
ಶಿಕ್ಷಕಿ, ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತ ಗೈದ ಈ ಸಮಾರಂಭವನ್ನು ಕಾಸಿಯಾ ಪ್ರೌಢಶಾಲೆ, ಮುಖ್ಯ ಶಿಕ್ಷಕ ಶ್ರೀ ಎವರೆಸ್ಟ್ ಕ್ರಾಸ್ತ ಇವರ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಆಲೀಸ್ ಕೆ ಜೆ ದೀಪ ಬೆಳಗಿ ಉದ್ಘಾಟನೆಗೈದರು.
ಡಾ. ರವೀಂದ್ರ ಜೆಪ್ಪು ಅವರು ಮಂಗಳೂರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು ಹಾಗೂ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮೂಲವ್ಯಾಧಿ ತಜ್ಞ ಹಾಗೂ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಗಜಲ್ ಕವಿ ಡಾ. ಸುರೇಶ್ ನೆಗಳಗುಳಿ ಅವರು ಮುಖ್ಯ ಅತಿಥಿಯಾಗಿ ಮಕ್ಕಳ ಕವನ ವಾಚನದ ವಿಮರ್ಶೆಯೊಂದಿಗೆ ಕವನ ರಚನೆ, ವಾಚನದ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರು ಸ್ವಭಾಷೆ ಅಮೃತ ಸಮಾನ ಅದು ಸದಾ ಸೇವನೀಯ ಎಂದರು.
ಅನಿರುದ್ಧ, ಆದಿತ್ಯ, ವಿಠಲ, ನಿಶಾಂತ್, ಸೋನಾಲಿ, ಅಂಜಲಿ, ನೇತ್ರಾವತಿ, ಸಂಜಯ, ಶಶಾಂಕ, ಯಶಸ್, ರಾಹುಲ್, ದ್ಯಾಮಣ್ಣ, ಚಿರಂತ್, ಅರ್ಜುನ್, ಸಂಜನ್, ಮನೋಜ್, ಮನವೀತ್, ಸಚೀಂದ್ರ, ಚಿನ್ಮಯ ಸಹಿತ ಸುಮಾರು 25 ರಷ್ಟು ವಿದ್ಯಾರ್ಥಿಗಳು ಕವನ ವಾಚನ ಹಾಗೂ ರಸ ಪ್ರಶ್ನೆಯಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಸಂತೋಷ್ ಕವನ ವಾಚನಗೈದರು. ಉಮೇಶ್ ರಾವ್ ಕುಂಬ್ಳೆ ಕಾರ್ಯಾಧ್ಯಕ್ಷರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಸುನೀತಾ ರೋಸ್ ಕ್ರಾಸ್ತಾ, ನಿರೂಪಣೆಗೈದರು. ಕವನ ವಾಚನ, ರಸ ಪ್ರಶ್ನೆ ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಶಾಲಾ ಶಿಕ್ಷಕಿ ಶೃತಿ ವಂದನಾರ್ಪಣೆಗೈದರು.
ಶಿಕ್ಷಕಿ ಅಲೀಸ್ ಕೆ ಜೆ, ಡಾ ರವೀಂದ್ರ ಶ್ರೀಮತಿ ಸುನೀತಾ ಹಾಗೂ ಡಾ ನೆಗಳಗುಳಿ ಅವರನ್ನು ಶಾಲು ಸ್ಮರಣಿಕೆ ಸಹಿತ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

