ಎಲ್ಲರಿಗೂ ಡಿಗ್ರಿ ಲೈಫ್ ಅಂದರೆ ಫ್ರೆಂಡ್ಸ್, ಕ್ಯಾಂಟೀನ್, ಇವೆಂಟ್ಸ್, ಅಸೈನ್‌ಮೆಂಟ್‌ಗಳು ಎಂದು ಅನ್ನಿಸುತ್ತದೆ.
ಆದರೆ ನನ್ನ ಡಿಗ್ರಿ ಲೈಫ್‌ನಲ್ಲಿ ನಾನು ಕೇಳಿದ್ದು ಲೈಟ್ಸ್, ಕ್ಯಾಮೆರಾ, ಆಕ್ಷನ್!
ಈ ಮೂರು ಪದಗಳನ್ನು ಕೇಳಿದಾಗ ನಿಮಗೆ ಗೊತ್ತಾಗಿರಬಹುದು, ನಾನು ಡಿಗ್ರಿಯಲ್ಲಿ ಕಲಿತದ್ದು “ಸಿನಿಮಾ” ಎಂದು.
ಸಿನಿಮಾ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಸಿನಿಮಾ ನೋಡುವುದು ಬಹಳ ಇಷ್ಟ. ಆದರೆ ಇಂತಹ ಕೋರ್ಸುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಏಕೆಂದರೆ ಸಿನಿಮಾ ನೋಡುವ ಆಸಕ್ತಿ ಎಲ್ಲರಲ್ಲಿದೆ, ಆದರೆ ಸಿನಿಮಾ ಮಾಡುವ ಆಸಕ್ತಿ ಕೆಲವರಲ್ಲೇ ಇರುತ್ತದೆ.
ಅದಕ್ಕಾಗಿಯೇ ನಮ್ಮ ಕ್ಲಾಸ್‌ನಲ್ಲಿ ಕೇವಲ ಆರು ಮಂದಿ ವಿದ್ಯಾರ್ಥಿಗಳಷ್ಟೇ ಇದ್ದರೂ, ನಮ್ಮಲ್ಲಿ ಒಗ್ಗಟ್ಟು ಅಚ್ಚಳಿಯದಂತೆ ಇತ್ತು. ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಒಟ್ಟಾಗಿ ಮಾಡುತ್ತಿದ್ದೆವು. ಇವರೆಗೂ ನಾವು ಸೇರಿ ಹತ್ತು ಕಿರುಚಿತ್ರಗಳು ಮತ್ತು ಒಂದು ಚಲನಚಿತ್ರವನ್ನು ಮಾಡಿದ್ದೇವೆ.
ಸಿನಿಮಾ ಎಂದರೆ ಒಗ್ಗಟ್ಟಿನ ಕೆಲಸ. ಜಗಳವಾಡಿಕೊಂಡರೆ ಸಿನಿಮಾ ಮಾಡುವುದು ಅಸಾಧ್ಯ.
ಮೊದಲನೇ ಇಯರ್‌ನಿಂದ ಮೂರನೇ ಇಯರ್‌ವರೆಗೂ ಅನೇಕ ಕಿರುಚಿತ್ರಗಳನ್ನು ಮಾಡಿದ್ದೇವೆ. ಕಷ್ಟಪಟ್ಟು, ಹಾರ್ಡ್ ವರ್ಕ್ ಮಾಡಿ, ನಮ್ಮದೇ ಕೆಲಸದಿಂದ ತೃಪ್ತಿಯನ್ನು ಪಡೆದಿದ್ದೇವೆ.
ಸಿನಿಮಾದಲ್ಲಿ ಹಲವು ಆಯಾಮಗಳಿವೆ ಕಥೆ, ಸ್ಕ್ರೀನ್‌ಪ್ಲೇ, ಡೈಲಾಗ್, ಕ್ಯಾಮೆರಾ ವರ್ಕ್, ಲೈಟಿಂಗ್, ಎಡಿಟಿಂಗ್, ಸೌಂಡ್ ಮತ್ತು ಇನ್ನಷ್ಟು.
ಪ್ರಿ-ಪ್ರೊಡಕ್ಷನ್, ಪ್ರೊಡಕ್ಷನ್ ಮತ್ತು ಪೋಸ್ಟ್-ಪ್ರೊಡಕ್ಷನ್ ಎಂಬ ಈ ಮೂರು ಹಂತಗಳಲ್ಲಿ ಕಠಿಣ ಪರಿಶ್ರಮ ಮಾಡಿದರೆ ಮಾತ್ರ ಒಂದು ಉತ್ತಮ ಸಿನಿಮಾ ಮೂಡಿಬರುತ್ತದೆ.
ನಮ್ಮ ಪ್ರಥಮ ವರ್ಷದ ಕಿರುಚಿತ್ರದ ಹೆಸರು “EMI”. ಅದು ಅಷ್ಟೊಂದು ಚನ್ನಾಗಿರಲಿಲ್ಲ, ಆದರೆ ನಮ್ಮ ಮೊದಲ ಪ್ರಯತ್ನವಾಗಿತ್ತು. ಅದು ನಮ್ಮ ಸಿನೆಮಾ ಪ್ರಯಾಣದ ಮೊದಲ ಹೆಜ್ಜೆ.
ಪ್ರಥಮ ವರ್ಷದಲ್ಲೇ ನಾವು ಸ್ಟೋರಿ ಬರೆದು, ಡಿಸ್ಕಸ್ ಮಾಡಿ, ಶೂಟಿಂಗ್‌ಗೆ ತೆರಳಿದ್ದೆವು.
ನಮ್ಮ ವಿಭಾಗದ ಶಿಕ್ಷಕರು ನಮಗೆ ಅಮೂಲ್ಯ ಸಲಹೆ ನೀಡಿ, ಕೆಲಸದಲ್ಲಿ ಮಾರ್ಗದರ್ಶನ ಮಾಡಿದರು.
ಅವರು ಹೇಳಿದ ತಿದ್ದುಪಡಿ ಮತ್ತು ಸೂಚನೆಗಳಿಂದ ನಾವು ದಿನದಿಂದ ದಿನಕ್ಕೆ ಕಲಿತುಕೊಂಡೆವು ಕ್ಯಾಮೆರಾ ಹೇಗೆ ಹಿಡಿಯಬೇಕು, ಲೈಟ್ಸ್ ಹೇಗೆ ಹಾಯಿಸಬೇಕು, ಎಡಿಟಿಂಗ್ ಹೇಗೆ ಮಾಡಬೇಕು ಎಂಬ ಎಲ್ಲವನ್ನೂ ಪ್ರಾಯೋಗಿಕವಾಗಿ ಅರಿತುಕೊಂಡೆವು.
ಅನೇಕ ಸ್ಥಳಗಳಲ್ಲಿ ಶೂಟಿಂಗ್‌ಗಳಿಗೆ ನಮ್ಮನ್ನು ಕರೆದೊಯ್ದರು, ಹಲವಾರು ವರ್ಕ್‌ಶಾಪ್‌ಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತು.
ಅಲ್ಲಿ ನಾವು ಸಿನಿಮಾದ ತೆರೆಯ ಹಿಂದೆ ಎಷ್ಟು ಜನ ಶ್ರಮಿಸುತ್ತಾರೆ, ಒಂದು ದೃಶ್ಯಕ್ಕಾಗಿ ಎಷ್ಟು ಪ್ರಯತ್ನ ಮಾಡಬೇಕಾಗುತ್ತದೆ ಎಂಬುದನ್ನೂ ಅರಿತುಕೊಂಡೆವು.
ಫೈನಲ್ ಇಯರ್‌ನಲ್ಲಿ ನಮ್ಮ ಡಿಪಾರ್ಟ್‌ಮೆಂಟ್‌ಗೆ ಬೇಕಾದ ಅನೇಕ ಉಪಕರಣಗಳು ಬಂದವು. ಇದೇ ಸಮಯದಲ್ಲಿ ನಮ್ಮ ಫೀಚರ್ ಫಿಲ್ಮ್ ಮಾಡುವ ಅವಕಾಶವೂ ಸಿಕ್ಕಿತು.
ಅದಕ್ಕೆ ಬೇಕಾದ ಹಣ, ನಟರು, ಸ್ಕ್ರಿಪ್ಟ್ ಎಲ್ಲವನ್ನೂ ನಾವು ಯೋಜನೆ ಮಾಡಿಕೊಂಡೆವು.
ಪ್ರಿ-ಪ್ರೊಡಕ್ಷನ್ ಹಂತದಲ್ಲಿ ದಿನಕ್ಕೆ 6 ಗಂಟೆ ತರಗತಿಯಲ್ಲಿ ಕೂತು ಡಿಸ್ಕಸ್ ಮಾಡುತ್ತಿದ್ದೆವು.
ರಾತ್ರಿ ಗೂಗಲ್ ಮೀಟ್ ಮೂಲಕ ಶೂಟಿಂಗ್ ಪ್ಲಾನ್ ಮಾಡುತ್ತಿದ್ದೆವು.
ಶೂಟಿಂಗ್ ಸುಮಾರು ಒಂದು ತಿಂಗಳ ಕಾಲ ನಡೆಯಿತು. ಈ ಚಿತ್ರದಲ್ಲಿ ನಾವು ಮಾಡಿದ ಪರಿಶ್ರಮ, ಒಗ್ಗಟ್ಟು ಮತ್ತು ನಿಷ್ಠೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ.
ನಮ್ಮ ಚಿತ್ರಕ್ಕೆ ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ, ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ.
ನಮ್ಮ ಪುಟ್ಟ ಪ್ರಯತ್ನಕ್ಕೆ ನೀವು ಬೆಂಬಲ ನೀಡಬೇಕು.
ಹೀಗೆ ಬೆಂಬಲ ಸಿಕ್ಕರೆ ಮುಂದಿನ ದಿನಗಳಲ್ಲಿ ಇಂತಹ ಫಿಲ್ಮ್‌ಮೇಕಿಂಗ್ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಬರಲಿದ್ದಾರೆ ಎಂಬ ನಂಬಿಕೆ ಇದೆ.
-ಶರತ್ ಎ.ಎಸ್.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


