ಹಣ ಜೀವನದ ಸಂಪತ್ತು. ದುಡ್ಡು ಇಲ್ಲದೇ ಬದುಕು ಕಟ್ಟಲು ಕಷ್ಟದ ಮಾತು. ಹಣದ ಆದಾಯ ಕೆಲಸದಿಂದಲೇ ಪ್ರಾರಂಭ, ಜೀವನ ಮಾಡುವುದಕ್ಕೆ ಉದ್ಯೋಗಗಳು ತರವಾರಿ ಇರುತ್ತದೆ. ದುಡ್ಡನ್ನು ಹಲವು ರೀತಿಯಲ್ಲಿ ಸಂಪಾದಿಸಬಹುದು, ಆ ಸಂಪಾದನೆ ನ್ಯಾಯಯುತವಾಗಿದ್ದರೆ ಮನುಷ್ಯನ ಜೀವನದಲ್ಲಿ ಒಂದು ತೃಪ್ತಿ. ಆದರೆ ಹಣವೊಂದೇ ಮಾಡುವ ಚಟ ಅದು ಯಾರೊಬ್ಬರಿಗೂ ಇರಬಾರದು. ಮನುಷ್ಯನಿಗೆ ಆಸೆ ಸಹಜ ಆದರೆ ಅತಿಸೆ ಖಂಡಿತ ಇರಬಾರದು.ಬಡವನಿಗೆ ಹಣದ ಮಹತ್ವ ಹೆಚ್ಚು, ಹಾಗಂತ ಹೇಳಿ ಶ್ರೀಮಂತ ಆದವನಿಗೆ ಹಣದ ಮೇಲೆ ಬೆಲೆ ಇಲ್ಲ ಯೆಂದು ಅಲ್ಲ. ಕೆಲವರಿಗೆ ಹಣ ಇದ್ದರು ಸಹ ಇಲ್ಲ ಇಲ್ಲ ಎಂದೇ ಹೇಳುತ್ತಾರೆ, ಆದರೆ ಅವರ ಜೊತೆ ಇರುವ ಸಂಪತ್ತು ನೋಡಿದರೆ ಇಲ್ಲವೆಂಬ ಪದಕ್ಕೆ ಅವಮಾನ ವಾಗುತ್ತದೆ.
ನನ್ನ ತಂದೆ ಆತನ ಚಿಕ್ಕ ವಯಸ್ಸಿದಲೇ ಬಡತನ ಕಂಡವರು, ಒಂದ್ ಒಂದ್ ರೂಪಾಯಿಗೂ ಕಷ್ಟ, ಕಣ್ಣೀರು, ಬೆವರು ಸುರಿಸಿದವರು. ಆ ಕಷ್ಟ ಮುಂದೆ ಅವರಿಗೆ ಸುಖ ತಂದು ಕೊಟ್ಟಿದು, ಆದರೆ ದುಡಿದ ಕೈಗಳಿಂದ ಹಣ ಪಡೆಯಲು ಎಷ್ಟು ಕಷ್ಟವಾಯಿತೋ ಅದನ್ನು ಖರ್ಚು ಮಾಡಲು ಸಹ ಅಷ್ಟೇ ಆಲೋಚನೆ ಮಾಡಿದವರು. ಅದು ಅಸೆ, ಅಥವಾ ಹಣ ಮುಗಿಯುತದೆ ಅಂದು ಅಲ್ಲ, ಅದರ ಹಿಂದಿನ ಪರಿಶ್ರಮದಿಂದ.
ಹಣ ತಿನ್ನಲು ಸಾಧ್ಯವಿಲ್ಲ. ನಾವು ಹೋಗುವಾಗ ಏನು ಕೊಂಡೋಯುವುದಿಲ್ಲ, ಕೊನೆಗೆಮನುಷ್ಯ ಬೂದಿಯ ಕಣಗಲೇ.ಮನುಷ್ಯ್ನ ಜೀವನ ಎಲ್ಲಿ ತನಕ ಇರುತದೋ ಅಲ್ಲಿಯವರೆಗೆ ಹಣ, ಉದ್ಯೋಗ, ಗೌರವ ಎಲ್ಲ ಸಾಧ್ಯ. ಯಾವಾಗ ಜೀವನ ಅಂತಿಮ ಚುಕ್ಕಿ ಕಾಣುತ್ತಾದೋ ಆಗ ಹಣ, ಅದರ ಹಿಂದಿನ ಪರಿಶ್ರಮ ಎಲ್ಲ ಮಣ್ಣಿನ ನೆಲದಲ್ಲಿ ಸೀಮಿತ ಅಷ್ಟೇ.
-ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



