ಮಂಗಳೂರು- ಬಿಜೈ: ಸುರಭಿ ಕಾಂಪ್ಲೆಕ್ಸ್ ನಲ್ಲಿ ನಂದಿನಿ ಹೋಟೆಲ್ ಶುಭಾರಂಭ

Upayuktha
0


ಮಂಗಳೂರು: ನಗರದ ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಕಾಪಿಕಾಡ್- ಬಿಜೈ ರಸ್ತೆಯಲ್ಲಿರುವ  ಜನಪ್ರಿಯ ಸುರಭಿ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಬೆಳಗ್ಗೆ ಹೋಟೆಲ್ ನಂದಿನಿ ಬಾರ್ ಅಂಡ್ ರೆಸ್ಟೋರೆಂಟ್ ಶುಭಾರಂಭಗೊಂಡಿತು.


ನಂದಿನಿ ಲಾಡ್ಜ್ ನ ಕೆಳ ತಳದಲ್ಲಿ ಸಕಲ ಸೌಲಭ್ಯಗಳೊಂದಿಗೆ ಪ್ರಾರಂಭಿಸಲಾದ ಹೋಟೆಲ್ ನಂದಿನಿ ಬಾರ್ & ರೆಸ್ಟೋರೆಂಟ್ ಅನ್ನು ಪೂಜಾ ವಿಧಿ ವಿಧಾನಗಳೊಂದಿಗೆ ಉದ್ಘಾಟಿಸಲಾಯಿತು.


ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ಎ. ಸದಾನಂದ ಶೆಟ್ಟಿ, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಡಾ. ಗುರುಕಿರಣ್, ಕೆ.ಎಸ್.ಆರ್ಟಿಸಿ ಮಂಗಳೂರು ಜಿಲ್ಲಾ ನಿಯಂತ್ರಕರಾದ ರಾಜೇಶ್ ಶೆಟ್ಟಿ ಅವರು ದೀಪ ಬೆಳಗಿ ಉದ್ಘಾಟಿಸಿದರು.



ಡಾ. ಎ ಸದಾನಂದ ಶೆಟ್ಟಿ ಹಾಗೂ ಅವರ ಕುಟುಂಬ ವರ್ಗದವರು, ಅವರ ಸಹೋದರ ಹಾಗೂ ಸುರಭಿ ಕಾಂಪ್ಲೆಕ್ಸ್  ಮಾಲೀಕರಾದ ಎ. ಸುಧೀರ್ ಪ್ರಸಾದ್ ಶೆಟ್ಟಿ ಮತ್ತು ಕುಟುಂಬದವರು, ಬಂಧು ಬಳಗ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಸುಧೀರ್ ಪ್ರಸಾದ್ ಶೆಟ್ಟಿ ಅವರ ಪತ್ನಿ ಯಶೋದಾ ಶೆಟ್ಟಿ, ರಂಗಭೂಮಿ ಹಾಗೂ ಚಿತ್ರರಂಗದ ಖ್ಯಾತ ನಟ ಕಾಸರಗೋಡು ಚಿನ್ನಾ, ಕೆನರಾ ಪದವಿಪೂರ್ವ ಕಾಲೇಜು ಡೀನ್ ಕೆ. ಗೋಪಾಲಕೃಷ್ಣ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರರಾದ ರಾಜಗೋಪಾಲ್ ರೈ, ಮಂಗಳೂರು ಸೆಂಟ್ರಲ್ ರೋಟರಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟಬೀಡು, ರೋಟರಿ ಸಹಾಯಕ ಗವರ್ನರ್ ಡಾ. ಚಿನ್ನಗಿರಿ ಗೌಡ,  ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ  ಶ್ರೀ ಪಿ.ಎಂ. ಉತ್ತಪ್ಪ, ಮೆಡಿಸ್ಕನ್ ರೇಡಿಯಾಲಜಿಸ್ಟ್ ಡಾ. ನವೀನಚಂದ್ರ ಶೆಟ್ಟಿ, ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್  ಪಿ. ಕರುಣಾಕರ್ ಆಳ್ವ,  ಜಯಂತ್ ಶೆಟ್ಟಿ (ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ), ಡಾ. ಶಿವಪ್ರಸಾದ್ ರೈ (ಮಾಜಿ ಗೃಹರಕ್ಷಕ ದಳದ ಮುಖ್ಯಸ್ಥರು), ಡಾ. ಶಿವಶರಣ ಶೆಟ್ಟಿ (RGUHS ಸಿಂಡಿಕೇಟ್ ಸದಸ್ಯ),  ಶ್ರೀ ವೇಣುಗೋಪಾಲ್ ಪುತ್ರನ್ (ಬೋಳಾರ್ ಮಾರಿಗುಡಿ ದೇವಸ್ಥಾನದ ಟ್ರಸ್ಟಿ), ಶ್ರೀ ಪ್ರಶಾಂತ್ ಕಾಮತ್ (ಕಾರ್ ಸ್ಟ್ರೀಟ್ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿ),  ಶ್ರೀ ಅಶೋಕ ಶೆಟ್ಟಿ (ಅಧ್ಯಕ್ಷರು ಆಟೋ ಚಾಲಕರ ಸಂಘ) ಮುಂತಾದ ಗಣ್ಯರು ಪಾಲ್ಗೊಂಡಿದ್ದರು.


Post a Comment

0 Comments
Post a Comment (0)
To Top