ಮನೆಯಲ್ಲಿ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸೋಣ

Upayuktha
0





ಕ್ಯಾಲೆಂಡರ್ ವರ್ಷ 2025 ಕೊನೆಯಾಗುತ್ತಿದೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಬರುತ್ತಿದೆ. ಈ ನಿಟ್ಟಿನಲ್ಲಿ ಜನಸಂದಣಿಯಿಂದ ದೂರ ಉಳಿಯುವ ಮೂಲಕ ಮನೆಯಲ್ಲೇ ಹೊಸ ವರ್ಷದ ಆಚರಣೆಯನ್ನು ಸ್ಮರಣೀಯವಾಗಿಸಲು ಕೆಲವು ಯೋಜನೆಗಳಿವೆ. ಇದರಿಂದ ವೆಚ್ಚವೂ ಹೆಚ್ಚುವುದಿಲ್ಲ ಮತ್ತು ಕುಟುಂಬದೊಂದಿಗೆ ಖುಷಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು.

 

ಜನರು ಈಗಾಗಲೇ ಹೊಸ ವರ್ಷವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವರು ಪರ್ವತಗಳಿಗೆ ಪ್ರವಾಸದ ಕುರಿತು ಯೋಚಿಸುತ್ತಿದ್ದರೆ, ಇತರರು ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಿದ್ಧತೆಯಲ್ಲಿ ದ್ದಾರೆ. ಇನ್ನು ಕೆಲವರು ಮನೆಯಲ್ಲೇ ಕುಟುಂಬದೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯಲು ಯೋಜಿಸುತ್ತಿದ್ದಾರೆ.


ಪೈಜಾಮ ಪಾರ್ಟಿ: ಹೊಸ ವರ್ಷದ ಮುನ್ನಾದಿನ ಮನೆಯಲ್ಲಿ ಪೈಜಾಮ ಪಾರ್ಟಿ ಆಯೋಜಿಸಬಹುದು. ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ನೀವು ಮನೆಯಲ್ಲಿ ಸಂಭ್ರಮಾಚರಣೆಯ ಸಂಜೆಯನ್ನು ಕಳೆಯ ಬಹುದು. ಈ ರೀತಿಯಲ್ಲಿ ಹೊಸ ವರ್ಷದ ಮುನ್ನಾದಿನವನ್ನು ಆಚರಿಸುವುದು ಯಾವುದೇ ಒತ್ತಡ ಇಲ್ಲವೇ ಕಿರಿಕಿರಿ ಒಳಗೊಂಡಿರುವುದಿಲ್ಲ. ಹೊಸ ವರ್ಷವನ್ನು ನಿರಾಳ ಹಾಗೂ ಆರಾಮದಾಯಕ ರೀತಿಯಲ್ಲಿ ಸ್ವಾಗತಿಸಬಹುದು.


ನಿಮ್ಮ ಸಿನಿಮಾ ನೋಡಿ:

ಜನಸಂದಣಿಯಿಂದ ದೂರವಾಗಿ ನಿಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದರೆ ಚಲನಚಿತ್ರವನ್ನು ವೀಕ್ಷಿಸಬಹುದು. ಇದಕ್ಕಾಗಿ ನೀವು ತಿಂಡಿಗಳನ್ನು ಸೇವಿಸುತ್ತಾ ಮಂದ ಬೆಳಕಿನ ಮಧ್ಯೆ ನಿಮ್ಮ ಮನೆಯಲ್ಲಿ ಚಿಕ್ಕ ಚಿತ್ರಮಂದಿರವನ್ನು ಸ್ಥಾಪಿಸಬಹುದು. ಹೊಸ ವರ್ಷದ ಮುನ್ನಾದಿನ ನಿಮ್ಮ ಕುಟುಂಬದೊಂದಿಗೆ ಚಲನಚಿತ್ರಗಳನ್ನು ನೋಡುವುದು ವಿಶ್ರಾಂತಿ ನೀಡುವುದಲ್ಲದೆ ತುಂಬಾ ವಿಶೇಷವೂ ಆಗಿರುತ್ತದೆ. ಇದು ಗದ್ದಲದ ಪ್ರಪಂಚದ ಒತ್ತಡಗಳಿಲ್ಲದೆ ವರ್ಷದ ನೆನಪುಗಳನ್ನು ಒಟ್ಟಿಗೆ ಪ್ರತಿಬಿಂಬಿಸಲು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಸಂಬಂಧವನ್ನೂ ಬಲಪಡಿಸುತ್ತದೆ.


ಆಟದ ರಾತ್ರಿಗಳನ್ನು ಪ್ಲಾನ್​ ಮಾಡಿ: 

ಈ ಹೊಸ ವರ್ಷದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಆಟದ ರಾತ್ರಿಗೆ ಆಹ್ವಾನಿಸಬಹುದು. ಸುತ್ತುಗಳಲ್ಲಿ ಆಟಗಳನ್ನು ಆಡುವುದು ಮೋಜಿನಿಂದ ಕೂಡಿರುತ್ತದೆ. ತಂಡ ಆಧಾರಿತ ಆಟಗಳಿಂದ ಪ್ರಾರಂಭಿಸಿ ಹಾಗೂ ಬಳಿಕ ವೈಯಕ್ತಿಕ ಆಟಗಳನ್ನು ಮುಂದುವರೆಸಿರಿ.


ಡಿನ್ನರ್ ಪಾರ್ಟಿ ಮಾಡಿ:

ಡಿನ್ನರ್ ಪಾರ್ಟಿಯನ್ನು ಆಯೋಜಿಸುವುದು ಹೊಸ ವರ್ಷವನ್ನು ಆಚರಿಸಲು ಉತ್ತಮ ಮಾರ್ಗ. ನೀವು ನಿಮ್ಮ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಬಹುದು. ರುಚಿಕರವಾದ ಆಹಾರದ ಜೊತೆಗೆ ಬೆಳಕಿನ ಅಲಂಕಾರಗಳು, ಮೇಣದಬತ್ತಿಯ ಬೆಳಕು ಮತ್ತು ಸಂಗೀತವನ್ನು ವ್ಯವಸ್ಥೆ ಮಾಡುವ ಮೂಲಕ ನೀವು ವಿಶೇಷ ವಾತಾವರಣವನ್ನು ಸೃಷ್ಟಿಸಬಹುದು. ಪಾರ್ಟಿಯನ್ನು ಇನ್ನಷ್ಟು ಮೋಜಿನ ಹಾಗೂ ಸ್ಮರಣೀಯವಾಗಿಸಲು ಡಿನ್ನರ್ ನಂತರ ಆಟಗಳನ್ನು ಆಡಲು, ಚಲನಚಿತ್ರ ವೀಕ್ಷಿಸಲು ಸಮಯವನ್ನೂ ಸಹ ಪ್ಲಾನ್​ ಮಾಡಬಹುದು.


ಹೊಸ ವರ್ಷ ತರಲಿ ಹಷ೯

ಹೊಸ ವರ್ಷವೆಂದರೆ ಅದು ಬರಿ ಒಂದು ಹೊಸ ಕ್ಯಾಲೆಂಡರ್ ಬದಲಾವಣೆ ಅಲ್ಲ. ನಮ್ಮ ಬದುಕಿನ ಹೊಸ ನಿರ್ಣಯ ತೆಗೆದುಕೊಳ್ಳಲೊಂದು ಸುಸಮಯ.


ಅದು ನಮ್ಮ ಹಳೆಯ ನೋವುಗಳನ್ನು ಮರೆಯಲು, ಹೊಸತನ್ನು ಸಂಭ್ರಮಿಸಲು ಕಾರಣ. ಇದು ನಮ್ಮ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಹಾಗು ಇತರರಿಗೆ ಸಂದೇಶಗಳನ್ನು ಕಳುಹಿಸಿ, ನಮ್ಮ ಸಂಬಂಧಗಳನ್ನು ನೆನಪಿಸಲು ಇರುವ ಉತ್ತಮ ಅವಕಾಶ. ನಮ್ಮ ನಡುವಿನ ಎಲ್ಲಾ ವೈಮನಸ್ಸುಗಳನ್ನು ದೂರ ಮಾಡಿ, ಹೊಸ ಸಂಬಂಧದ ಬೆಸುಗೆ ರೂಪಿಸಲು ಅತ್ಯುತ್ತಮ ಸಮಯ. ಶುಭ ನುಡಿದು, ಅವರ ಮನಸ್ಸು ಗೆಲ್ಲಲು ಇರುವ ಅವಕಾಶ. ಆ ಮೂಲಕ ಹೊಸ ವರ್ಷವನ್ನು ನಾವು ಸಾರ್ಥಕವಾಗಿ ಎದುರುಗೊಳ್ಳಬಹುದು.


ಹೊಸ ವರ್ಷದ ನೆನಪಿನಲ್ಲಿ ನಮ್ಮ ವಯಸ್ಸಿನಷ್ಟು ಸಂಖ್ಯೆಯ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡೋಣ.


- ರಾಘವೇಂದ್ರ ಪ್ರಭು ಕರ್ವಾಲು



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top