ಜ.1ರಂದು ಕಟೀಲಿನಲ್ಲಿ ಶ್ರೀ ದುರ್ಗಾ ಹೋಮ- ಜಪಯಜ್ಞದ ಪೂರ್ಣಾಹುತಿ

Upayuktha
0


ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿಯ ಶ್ರೀ ರಾಮಕೃಷ್ಣ ತಪೋವನ ಹಾಗೂ ಅರ್ಘ್ಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ಜಪಯಜ್ಞ ಅಭಿಯಾನ- 2026ರ ಅಂಗವಾಗಿ ಶ್ರೀ ದುರ್ಗಾ ಹೋಮ ಮತ್ತು ಜಪಯಜ್ಞದ ಪೂರ್ಣಾಹುತಿ ಕಾರ್ಯಕ್ರಮವು 2026ರ ಜನವರಿ 1ರಂದು ಬೆಳಗ್ಗೆ 10 ಗಂಟೆಗೆ ಕಟೀಲು ಶ್ರೀದೇವಿಯ ಮೂಲ ಸಾನಿಧ್ಯವಾದ ಭ್ರಾಮರಿ ವನದಲ್ಲಿ ಜರುಗಲಿದೆ.


ಕಾರ್ಯಕ್ರಮದಲ್ಲಿ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು, ಉಪ್ಪಳದ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವಿವೇಕಚೈತನ್ಯಾನಂದಜಿ ಅವರು ಆಶೀರ್ವಚನ ನೀಡಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ವಾಸುದೇವ ಅಸ್ರಣ್ಣ ಅವರ ಸಾನಿಧ್ಯ ಕಾರ್ಯಕ್ರಮಕ್ಕೆ ವಿಶೇಷ ಗೌರವ ನೀಡಲಿದೆ.


ಕಟೀಲು ದೇವಸ್ಥಾನದ ಅನುವಂಶಿಕ ಮೊತ್ತೇಸರರಾದ ಶ್ರೀ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅವರ ಉಪಸ್ಥಿತಿ ಇರಲಿದ್ದು, ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ವಿವೇಕ್ ಆಳ್ವ ಹಾಗೂ CAPS ಫೌಂಡೇಶನ್ ಬೆಂಗಳೂರು ಇದರ ಅಧ್ಯಕ್ಷರಾದ CA ಚಂದ್ರಶೇಖರ ಶೆಟ್ಟಿ (ಮಂಗಳೂರು) ಅವರು ಘನ ಉಪಸ್ಥಿತರಾಗಲಿದ್ದಾರೆ.


ಖ್ಯಾತ ಅಂಕಣಕಾರರು ಮತ್ತು ಯುವ ವಾಗ್ಮಿ ಶ್ರೀ ಆದರ್ಶ ಗೋಖಲೆ ಅವರು "ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ" ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.


ಹಿನ್ನೆಲೆಯಲ್ಲಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ-ಪೊಳಲಿ ಶ್ರೀ ರಾಮಕೃಷ್ಣ ತಪೋವನ ಹಾಗೂ ಅರ್ಘ್ಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶ್ರೀ ದುರ್ಗಾ ಜಪಯಜ್ಞ ಅಭಿಯಾನ–2026ವನ್ನು ಹಮ್ಮಿಕೊಳ್ಳಲಾಗಿದೆ. ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆಯ ಪ್ರಯುಕ್ತ ಭಾರತಮಾತೆ ಮತ್ತು ಜಗನ್ಮಾತೆ ಶ್ರೀ ದುರ್ಗೆ ಅಭಿನ್ನ ಎಂಬ ಸಂದೇಶದೊಂದಿಗೆ "ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ" ಘೋಷವಾಕ್ಯದಲ್ಲಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ.


ಈ ಅಭಿಯಾನವು 2025ರ ಡಿಸೆಂಬರ್ 1ರಿಂದ 31ರವರೆಗೆ ನಡೆಯಲಿದ್ದು, ದೇಶ-ವಿದೇಶದ ಭಕ್ತರು ಮನೆಯಿಂದಲೇ ಕನಿಷ್ಠ 10 ದಿನಗಳ ಕಾಲ ಪ್ರತಿದಿನ 108 ಬಾರಿ "ಶ್ರೀ ದುರ್ಗಾಯೈ ನಮಃ" ಜಪ ಮಾಡುವ ಮೂಲಕ (ಒಟ್ಟು 1008 ಜಪ) ಪಾಲ್ಗೊಳ್ಳಬಹುದು. ಸಾವಿರಾರು ಭಕ್ತರ ಸಂಯುಕ್ತ ಜಪಶಕ್ತಿಯಿಂದ ರಾಷ್ಟ್ರಚೈತನ್ಯವನ್ನು ಬಲಪಡಿಸುವ ಸಂಕಲ್ಪ ಇದಾಗಿದೆ.


ಪೂರ್ಣಾಹುತಿ ಕಾರ್ಯಕ್ರಮವು ಜನವರಿ 1ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ಹೋಮದೊಂದಿಗೆ ನೆರವೇರಲಿದೆ. ಕುಟುಂಬ ಸಮೇತವಾಗಿ ಭಾಗವಹಿಸಿ ತಾಯಿ ದುರ್ಗೆಯ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.


ಈ ಸಂದರ್ಭದಲ್ಲಿ, ತಾಯಿ ದುರ್ಗೆಯ ಪರಮ ಭಕ್ತರಾದ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು 1886ರ ಜನವರಿ 1ರಂದು ಭಕ್ತರನ್ನು ಹರಸಿ ಆಶೀರ್ವದಿಸಿದ ಪುಣ್ಯ ದಿನದ ದಿವ್ಯ ಸ್ಮರಣೆಯನ್ನೂ ಭಕ್ತಿಪೂರ್ವಕವಾಗಿ ಆಚರಿಸಲಾಗುವುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top