ಬಂಟ್ವಾಳ: ನಿರಂತರ 24 ಗಂಟೆಗಳ ಕಾಲ ನಡೆಯುವ ಏಕಾಹ ಭಜನೆ ಒಂದು ಕಾರ್ಯಕ್ರಮ ಮಾತ್ರವಲ್ಲ; ಅದು ಶ್ರದ್ಧೆಯ ಅನಾವರಣ, ಸಂಘಟಿತ ಭಕ್ತಿಯ ಸಾಕ್ಷ್ಯ ಹಾಗೂ ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹೇಳಿದರು.
ಅವರು ಡಿಸೆಂಬರ್ 27ರಂದು ಸೂರ್ಯೋದಯದಿಂದ ಡಿಸೆಂಬರ್ 28ರ ಸೂರ್ಯೋದಯದವರೆಗೆ 24 ಭಜನಾ ತಂಡಗಳ ಸಹಭಾಗಿತ್ವದಲ್ಲಿ ನಡೆದ ಏಕಾಹ ಭಜನಾ ಮಹೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾತ್ರಿ–ಹಗಲು ಎನ್ನದೆ ಸ್ವರ, ಲಯ ಹಾಗೂ ಭಾವಗಳೊಂದಿಗೆ ಭಕ್ತರು ಸಾಗುವ ಈ ಪಯಣ ಮನಸ್ಸುಗಳನ್ನು ಶುದ್ಧಗೊಳಿಸುವ ಮಹಾಯಾತ್ರೆಯಾಗಿದ್ದು, ಸರ್ವರ ಶ್ರಮದಿಂದ ಭಕ್ತಿ ಶಬ್ದವಾಗಿ, ಶಬ್ದ ಶಕ್ತಿಯಾಗಿ, ಶಕ್ತಿ ಶಾಂತಿಯಾಗಿ ಪರಿವರ್ತನೆಯಾಗಲಿದೆ ಎಂದರು.
ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ಸದಸ್ಯರಾದ ಬಡಾಜೆಗುತ್ತು ರವಿಶಂಕರ್ ಶೆಟ್ಟಿ ದೀಪ ಬೆಳಗುವ ಮೂಲಕ ಏಕಾಹ ಭಜನಾ ಮಹೋತ್ಸವವನ್ನು ಉದ್ಘಾಟಿಸಿದರು.
ಮೊಗರ್ನಾಡ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವೇದಮೂರ್ತಿ ಜನಾರ್ಧನ ಭಟ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಲೋಕೇಶ್ ಶಾಂತಿ ತಂತ್ರಿಗಳ ನೇತೃತ್ವದಲ್ಲಿ ಭಜನಾ ವೈದಿಕ ವಿಧಿವಿಧಾನಗಳು ನೆರವೇರಿದವು. ಅರ್ಚಕರು ತಿಲಕ್ ಶಾಂತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಕೋಶಾಧಿಕಾರಿ ಸುನೀಲ್ ಕುಂದರ್, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಜತೆ ಕಾರ್ಯದರ್ಶಿ ಆನಂದ ಪೂಜಾರಿ ಶಂಬೂರು, ಕಾರ್ಯಕ್ರಮ ಸಂಚಾಲಕರಾದ ಸತೀಶ್ ಕುಮಾರ್ ಅಮರ್ ಮತ್ತು ಉಮೇಶ್ ನೆಲ್ಲಿಗುಡ್ಡೆ, ಬಿಲ್ಲವ ಮಹಿಳಾ ಸಮಿತಿ ಉಪಾಧ್ಯಕ್ಷೆ ಭವಾನಿ ಕೆ., ಕಾರ್ಯದರ್ಶಿ ಮಲ್ಲಿಕಾ ಪಚ್ಚಿನಡ್ಕ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಧನ್ಯವಾದ ಅರ್ಪಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರೈ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


