'ಗಣಿತವೆಂಬ ಸಿಹಿಯ ಕಡಲೆಯನ್ನು ಸವಿಯೋಣವೇ'

Upayuktha
0


ಭಾರತದ ಮಹಾನ್ ಗಣಿತಶಾಸ್ತ್ರಜ್ಞ  ಶ್ರೀನಿವಾಸ್ ರಾಮಾನುಜನ್ ಅಯ್ಯಂಗಾರ್ ರವರು 22 ಡಿಸೆಂಬರ್ 1887 ರಂದು ತಮಿಳುನಾಡಿನ ಈರೋಡ್ ನಲ್ಲಿ ಜನಿಸಿದರು. ಆಗಿನ ಮದ್ರಾಸ್ ಪ್ರೆಸಿಡೆನ್ಸಿ. ಇವರ ಸಂಖ್ಯೆಗಳ ಸಿದ್ಧಾಂತ, ಅನಂತ ಸರಣಿಗಳು ಮತ್ತು ಭಿನ್ನರಾಶಿಗಳಲ್ಲಿನ ಅಪಾರ ಕೊಡುಗೆಯನ್ನು  ನಾವು ಕಾಣಬಹುದು. ಕೇಂಬ್ರಿಡ್ಜ್‌ನಲ್ಲಿ ಐದು ವರ್ಷಗಳ ಅವಧಿಯಲ್ಲಿ 21 ಪ್ರಬಂಧಗಳನ್ನು ಪ್ರಕಟಿಸಿದ್ದು ಅವರ ಕೆಲಸವು ಸಂಖ್ಯೆಗಳ ವಿಭಜನೆ, ಅನಂತ ಸರಣಿಗಳು ಮತ್ತು ಮಾಕ್ಸಿಮಮ್ ಫಾರ್ಮುಲಾ (Hardy-Ramanujan formula) ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ.


ಇವರ "ಟ್ಯಾಕ್ಸಿಕ್ಯಾಬ್ ಸಂಖ್ಯೆ" 1729, ವಿಶೇಷತೆ ಏನೆಂದರೆ ಈ ಸಂಖ್ಯೆಯು ಎರಡು ವಿಭಿನ್ನ ಘನಗಳ ಮೊತ್ತವಾಗಿ ವ್ಯಕ್ತಪಡಿಸಬಹುದಾದ ಅತಿ ಚಿಕ್ಕ ಸಂಖ್ಯೆ. 1³+12³ = 9³+10³ =1729. ಹಾಗೆಯೇ ರಾಮಾನುಜನ್ ಮ್ಯಾಜಿಕ್ ಸ್ಕ್ವೇರ್ ಅನ್ನು ನೋಡಬಹುದು. ಪುಟ್ಟ ವಯಸ್ಸಿನಲ್ಲೇ ಬಹಳ ಚುರುಕಾಗಿದ್ದ ಹುಡುಗ ರಾಮಾನುಜನ್.


ಗಣಿತಶಾಸ್ತ್ರದಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಹೊಂದಿರದಿದ್ದರೂ, ರಾಮಾನುಜನ್ ಅವರು ತಮ್ಮ ಸ್ವಯಂ-ಅಧ್ಯಯನ ಮತ್ತು ಅಂತಃಪ್ರಜ್ಞೆಯ ಮೂಲಕ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿರುವದನ್ನು ನಾವು ತಿಳಿಯಬಹುದು.


ರಾಮಾನುಜನ್ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಅಂದರೆ 32 ನೇ ವಯಸ್ಸಿನಲ್ಲಿ ನಿಧನರಾದರು. ಇವರ ಕೆಲಸಗಳು ಗಣಿತಜ್ಞರ ಪೀಳಿಗೆಗೆ ಸ್ಫೂರ್ತಿ ನೀಡಿದೆ. 2013 ರಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜೀವನ ಮತ್ತು ಕೆಲಸವನ್ನು ಚಿತ್ರಿಸುವ "ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ" ಚಿತ್ರ ಬಿಡುಗಡೆಯಾಯಿತು.


ಇವರ ಅಪಾರ ಕೊಡುಗೆಯನ್ನು ಗಮನಿಸಿ 2012 ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್  ರವರು ರಾಮಾನುಜನ್ 125 ನೇ ಜನ್ಮ ದಿನದಂದು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ  "ರಾಷ್ಟ್ರೀಯ ಗಣಿತ ದಿನ" ಎಂದು ಘೋಷಿಸಿದರು. ಅಂದಿನಿಂದ ಪ್ರತಿವರ್ಷ ರಾಮಾನುಜನ್ ಜನ್ಮ ದಿನವನ್ನು "ರಾಷ್ಟ್ರೀಯ ಗಣಿತ ದಿನ"ವನ್ನಾಗಿ ಆಚರಿಸುತ್ತಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿವಿಧ ರೀತಿಯ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ.


ಕಬ್ಬಿಣದ ಕಡಲೆ ಯಾವುದೆಂದರೆ ತತ್ ಕ್ಷಣ ಎಲ್ಲರೂ ಹೇಳುವುದು ಗಣಿತ ಎಂದು. ಹಾಗೆ ಶಾಲೆಗಳಲ್ಲಿ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರವಚನ ಮಾಡಿದ್ದಾರೆ.ಹಾಗೆಯೇ ಗರಿಷ್ಠ ಶೇಕಡಾವಾರು ತುಂಬಾ ಕಷ್ಟದ ವಿಷಯವು ಗಣಿತವೇ. ನಮಗೂ ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣ ಸಮಯದಲ್ಲಿ ನಮ್ಮ ಗುರುಗಳು ಗಣಿತ ಒಂದು ಕಬ್ಬಿಣದ ಕಡಲೆ ಎಂದೇ ಹೇಳಿದ್ದರು. ಆದರೆ ನಾನು ಉನ್ನತ ಅಧ್ಯಯನ ಸಂದರ್ಭದಲ್ಲಿ ಅರಿತಿದ್ದು ಗಣಿತ ವು ಒಂದು "ಸಿಹಿಯ ಕಡಲೆ".


2023 ರಲ್ಲಿ ಚೆನ್ನೈನಲ್ಲಿ ನ "ರಾಮಾನುಜನ್ ವಸ್ತುಸಂಗ್ರಹಾಲಯ ಮತ್ತು ಗಣಿತ ಶಿಕ್ಷಣ ಕೇಂದ್ರಕ್ಕೆ" ಭೇಟಿ ನೀಡಿದ್ದೆ. ರಾಮಾನುಜನ್ ರವರ ಪುಸ್ತಕಗಳು ಮತ್ತು ಬರವಣಿಗೆಯನ್ನು ವೀಕ್ಷಿಸಿದ ನೆನಪು ಇಂದಿಗೂ.


ನನ್ನ ಪ್ರೌಢ ಶಿಕ್ಷಣ ಸಂದರ್ಭದಲ್ಲಿ ಕನ್ನಡ ಶಿಕ್ಷಕನಾಗಬೇಕೆಂಬ ಗುರಿ ಹಂಬಲವಿತ್ತು. ಆದರೆ ಪಿಯುಸಿ ಗೆ ಬಂದಾಗ ಗಣಿತವು ನನ್ನ ಮನಸ್ಸಿಗೆ ಬಹಳ ಹತ್ತಿರವಾಯಿತು. ಆ ಸಮಯದಲ್ಲಿ ಎರಡು ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದ್ದೆ. ಅವರು ಕಷ್ಟವೆಂದು ಭಾವಿಸಿದ್ದ ಗಣಿತವನ್ನು ಬಹಳ ಹಚ್ಚಿಕೊಂಡುಬಿಟ್ಟರು. ಗಣಿತ ಒಂದು ಆಟ. ಆಸಕ್ತಿ ಹಂಬಲ ಇದ್ರೆ ಮಾತ್ರ ಆ ಆಟವನ್ನು ಸಂತಸದಿಂದ ಆಡಲು ಸಾಧ್ಯ.


ಈ ನಿಟ್ಟಿನಲ್ಲಿ ಗಣಿತಕ್ಕೆ  ಭಯಪಡದೆ ಹಿಂಜರಿಯದೆ ಸಿಹಿಯ ಕಡಲೆಯನ್ನು ಸವಿಯಲು ಮುಂದಾಗೋಣ.



- ಪ್ರಜ್ವಲ್ ಕೆ ವಿ ಸಿ,

ಚಿಂತಕ,

ವ್ಯವಸ್ಥಾಪಕ ಭಾವೈಕ್ಯ ಯುವ ಜನ ಸಂಘ, ಚಿಕ್ಕಬಳ್ಳಾಪುರ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top