ನಮ್ಮ ಕಲೆ-ಸಂಸ್ಕೃತಿಗಳಿಂದ ಯುವಜನತೆ ಸಧೃಡ: ಗೋಪಾಲಕೃಷ್ಣ ರಾವ್

Chandrashekhara Kulamarva
0


ಕೋಡಿಕಲ್‌, ಮಂಗಳೂರು: "ನಮ್ಮ ದೇಶ ಸನಾತನ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಕಲೆ- ಸಂಸ್ಕೃತಿಯ ಆಧಾರದ ಮೇಲೆ ನಿಂತಿದೆ. ಎಂತಹಾ ಕಠಿಣ ಸನ್ನಿವೇಶಗಳು ಬಂದರೂ ಕಲಾಪ್ರಕಾರಗಳ ವೀಕ್ಷಣೆಯಿಂದ ಮನಸ್ಸು ಮುದಗೊಳ್ಳುತ್ತದೆ. ಸಂಸ್ಕೃತಿಯ ಅಭ್ಯಾಸದಿಂದ ನಾವೆಲ್ಲಿದ್ದೇವೆ ಎಂಬುದರ ಸಿಂಹಾವಲೋಕನ ಮಾಡಿ ಮುಂದುವರಿಯಲು ಸಾಧ್ಯವಾಗುತ್ತದೆ. ಅದನ್ನೇ ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಮೈಕುಣಿಸುವ ಸಂಸ್ಕಾರವನ್ನು ಬಿಟ್ಟು ಮನಸ್ಸನ್ನು ಪ್ರಫುಲ್ಲಿಸುವ ಕಲೆ ಈಗಿನ ಕಾಲದ ಒತ್ತಡ. ಈ ಕಲಾ ಶಿಕ್ಷಣ ಚಿಣ್ಣರಿಗೆ ಎಲ್ಲೆಡೆ ದೊರಕಲಿ" ಎಂದು ಎಂಸಿಎಫ್ ನ ನಿವೃತ್ತ ಹಿರಿಯ ಅಧಿಕಾರಿ ಗೋಪಾಲಕೃಷ್ಣ ರಾವ್ ಹೇಳಿದರು.



ಅವರು ಕೋಡಿಕಲ್‌ನ ವಿಪ್ರವೇದಿಕೆಯ ದಶಮಾನೋತ್ಸವ ಸರಣಿಯ ಷಷ್ಠಿ ಕಾರ್ಯಕ್ರಮ" ಗೀತ-ನೃತ್ಯ ಸಂಭ್ರಮ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.



ಅವಿನಾಶ್ ರವರು ನೃತ್ಯ ಸಂಭ್ರಮ ಕಾರ್ಯಕ್ರಮ ನಿರ್ವಹಿಸಿದರು. ಸ್ವಪ್ನಾ ಅವಿನಾಶ್ ಹಾಗೂ ಸುಧಾ ಭಟ್ ರವರು ವೀಣಾವಾದನವನ್ನು ನಡೆಸಿಕೊಟ್ಟರೆ ಶ್ರೇಯಸ್ ಮೃದಂಗದಲ್ಲಿ ಸಹಕರಿಸಿದರು. ಶ್ರೀಮತಿ ವಿದ್ಯಾಗಣೇಶರವರು ಭರತನಾಟ್ಯ ಕಾರ್ಯಕ್ರಮ ನಿರ್ವಹಿಸಿದರು. ಎಂ.ಟೆಕ್. ವಿದ್ಯಾರ್ಥಿನಿ ಕು. ಅನೋಕ್ಷಾ ಹಾಗೂ ಕು. ಅದ್ವಿಕಾ ಮಡಿ ಭರತನಾಟ್ಯ ಕಾರ್ಯಕ್ರಮ ನೀಡಿದರು. ಶ್ರೀಮತಿ ಸವಿತಾ ದುರ್ಗಾದಾಸ್ ಸಂಗೀತ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕು. ದೇವಿಕಾ, ಡಾ. ಮೇಘನಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.


ವೃಂದಾ ವಿ. ಸ್ವಾಗತಿಸಿದರೆ ಶ್ರೀಮತಿ ವಿಜಯಾ ಭಟ್ ಧನ್ಯವಾದವಿತ್ತರು. ವೇದಿಕೆಯ ಹಿರಿಯ ಸದಸ್ಯರಾದ ವಿ.ಎಸ್.ಹೆಬ್ಬಾರರು ಸ್ಮರಣಿಕೆಗಳನ್ನು ನೀಡಿದರು. ಟ್ರಸ್ಟಿಗಳಾದ ವಿಶ್ವ ಕುಮಾರ್ ಜೋಯಿಸರು, ಜಯರಾಮ ಪದಕಣ್ಣಾಯ, ಅನೂಪ್ ರಾವ್ ಬಾಗ್ಲೋಡಿ, ಗಿರೀಶ್ ರಾವ್ ಪ್ರಭಾವತಿ ಮಡಿ, ವರ್ಕಾಡಿ ರವಿ ಅಲೆವೂರಾಯ, ವಿಶ್ವೇಶ್ವರ ಭಟ್, ಟಿ., ದುರ್ಗಾದಾಸ್ ಕಟೀಲ್, ಕಿಶೋರ್ ಕೃಷ್ಣ, ಶಿವಾನಂದ ಐಗಳ್, ಹಾಗೂ ವೇದಿಕೆಯ ಹಿರಿಯರು ಹಾಗೂ ವಿಪ್ರ ಬಂಧುಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top