ಹುಬ್ಬಳ್ಳಿ: ಶ್ರೀ ವಿಜಯದಾಸರ ಮಧ್ಯಾರಾಧನೆಯ ದಿನ (ಶುಕ್ರವಾರ, 31- ಅಕ್ಟೋಬರ) ಹುಬ್ಬಳ್ಳಿಯ ಕಲ್ಯಾಣನಗರದಲ್ಲಿರುವ ಶ್ರೀಮತಿ ಶಾರದಾ ಭಾವಿಕಟ್ಟಿಯವರ ಮನೆಯಲ್ಲಿ, ಶ್ರೀ ಡಾ. ನಾರಾಯಣಾಚಾರ್ಯ ಧೂಳಖೇಡ ಅವರಿಂದ ಮೂರು ದಿನಗಳ ಪ್ರವಚನದ ಮಂಗಳ ಶ್ರೀಮಠದ ವ್ಯವಸ್ಥಾಪಕ ಪಂ. ಹುಂಡೆಕಾರ ಆಚಾರ್ಯರ ವಿಶೇಷ ಉಪಸ್ಥಿತಿಯಲ್ಲಿ ಸಂಪನ್ನವಾಯಿತು.
ಕಳೆದ 27 ವರ್ಷಗಳಿಂದ ಭಾವಿಕಟ್ಟಿ ದಂಪತಿಗಳ ಸ್ವಗೃಹದಲ್ಲಿ ಶ್ರೀ ವಿಜಯದಾಸರ ಆರಾಧನೆಯ ನಿಮಿತ್ತ ಮೂರು ದಿನಗಳ ಕಾಲ ಶ್ರೀ ವಿಜಯದಾಸರ ಅಷ್ಟೋತ್ತರ ಪಾರಾಯಣ, ಪ್ರವಚನದ ಮಂಗಳದ ನಂತರ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಸದ್ಭಕ್ತರಿಗೆ ಶ್ರೀಮಠದಲ್ಲಿ ತೀರ್ಥಪ್ರಸಾದದ ವ್ಯವಸ್ಥೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


