ಸಮಾಜದ ಸ್ವಾಸ್ಥ್ಯ ಕಾಪಾಡಿ ಎಲ್ಲರೊಂದಿಗೆ ಬೆರೆತು ಬದುಕಲು ರಾಮ ನಾಮ ಅನಿವಾರ್ಯ: ಕಶೆಕೋಡಿ
ಬಂಟ್ವಾಳ: ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ನೆತ್ತರಕೆರೆ ಇದರ ಅಶ್ರಯದಲ್ಲಿ ಡಿ.21ರಂದು ತಾಲೂಕಿನ ಕಳ್ಳಿಗೆ-ಪುದು ಗ್ರಾಮದ ನೆತ್ತರಕೆರೆಯಲ್ಲಿ ನಡೆಯಲಿರುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಪೂರ್ವಭಾವಿ ನಡೆಯುವ 48 ದಿನಗಳ ಜಪ ಸಂಕಲ್ಪ ದೀಕ್ಷಾ ಕಾರ್ಯಕ್ರಮಕ್ಕೆ ನ.2ರಂದು ಭಾನುವಾರ ನೆತ್ತರಕೆರೆಯಲ್ಲಿ ಚಾಲನೆ ನೀಡಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ರಾಮನಾಮ ಜಪದ ಯಜ್ಞದ ಸಂಕಲ್ಪ ಹಾಗೂ ದೀಕ್ಷೆ ನೀಡಿ ಬಳಿಕ ಮಹತ್ವದ ಬಗ್ಗೆ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಿ ಎಲ್ಲರೊಂದಿಗೆ ಬೆರೆತು ಬದುಕಲು ರಾಮತ್ವ ನಮ್ಮೊಳಗೆ ಪ್ರವೇಶವಾಗಬೇಕು. ಅದಕ್ಕಾಗಿ ರಾಮನಾಮದ ಅನುಷ್ಠಾನ ಅಗತ್ಯ, ಬೆಂಕಿಯಂತ ವ್ಯಕ್ತಿತ್ವ, ನೀರಿನನಂತ ಪಾರದರ್ಶಕ ಬದುಕು ನಮ್ಮದಾಗಬೇಕಾದರೆ ಶ್ರದ್ದಾ ಭಕ್ತಿಯಿಂದ ರಾಮ ನಾಮ ಸ್ಮರಣೆ ಮಾಡೋಣ, ಬುದ್ದಿಯ ಮಟ್ಟದಲ್ಲಿ ಯೋಚನೆ ಮಾಡಿ ನಮ್ಮತನವನ್ನು ಕಾಪಾಡಿ, ರಾಷ್ಟ್ರ ಸೇವೆಯಲ್ಲಿ ತೊಡಗಿ ಶ್ರೀ ರಾಮ ರಾಜ್ಯದ ಕನಸು ನನಸು ಮಾಡೋಣ ಎಂದು ಹೇಳಿದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ನಾವೆಲ್ಲರೂ ದೇವರ ರೂಪ,ನಮ್ಮಲಿ ನಮಗೆ ಶ್ರದ್ದೆ ಬೇಕು ನಮ್ಮಲ್ಲಿರುವ ದೈವತ್ವವನ್ನು ಜಾಗೃತಿ ಮಾಡಲು ರಾಮ ನಾಮ ತಾರಕ ಮಂತ್ರ ಅನಿವಾರ್ಯ, ಹಿಂದೂ ಸಮಾಜದ ಸಂಘಟನೆಗೆ, ಉದ್ದಾರಕ್ಕೆ ತಾರಕ ಮಂತ್ರದ ಮೂಲಕ ಶ್ರೀ ರಾಮನಲ್ಲಿ ಪ್ರಾರ್ಥನೆ ಮಾಡೋಣ ವಿಶ್ವಕ್ಕೆ ಕಲ್ಯಾಣವಾಗಲಿ ಎಂದು ಹೇಳಿದರು.
ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಮಾತನಾಡಿ, ಭಗವಂತನ ನಾಮ ಸ್ಮರಣೆಗೆ ಅಪಾರವಾದ ಶಕ್ತಿ ಇದೆ. ಎಲ್ಲಾ ಪಾಪ ಪರಿಹಾರಕ್ಕಾಗಿ, ಮೋಕ್ಷ ಸಿದ್ದಿಗಾಗಿ ರಾಮನಾಮ ತಾರಕಮಂತ್ರ ಪೂರಕವಾಗಲಿ ಎಂದು ಹೇಳಿದರು.
ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ ಕೊಡ್ಮಾಣ್ ಅಧ್ಯಕ್ಷತೆ ವಂದಿಸಿದರು. ವಿಶ್ವನಾಥ ಕುಲಾಲ್ ಪ್ರಾರ್ಥಿಸಿ, ಸಂಯೋಜಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


