ಪರಿಣಾಮಕಾರಿ ಸಂವಹನ ಕಲೆ: ವಿಶೇಷ ತರಬೇತಿ

Upayuktha
0

ಯುಪಿಎಂಸಿ- ಸಾಹಿತ್ಯ ಸಂಘದಿಂದ ಆಯೋಜನೆ




ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ನವೆಂಬರ್ 24ರಂದು ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜರಗಿತು.


ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿದಾರ, ಲೇಖಕ ಹಾಗೂ ಕಸಾಪ ಉಡುಪಿಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಇವರು 2025- 26ನೇ ಸಾಲಿನ ಸಾಹಿತ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ, ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. 


ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ನಿಖರತೆ, ಸ್ಪಷ್ಟತೆ, ವಸ್ತುನಿಷ್ಠತೆ ಇರಬೇಕು ಇದು ಸಂವಹನ ಕೌಶಲ ಉತ್ತಮ ಪಡಿಸಿಕೊಳ್ಳಲು  ಸಹಕಾರಿ, ಲವಲವಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿದರೆ ವ್ಯಕ್ತಿ ಸಾಧಕನಾಗಬಲ್ಲ, ತಾಳ್ಮೆಯಿಂದ ಉತ್ತಮ ಕೇಳುಗನಾದರೆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪ್ರತಿಭೆ ಅರಳುವುದರ ಜೊತೆಗೆ ಸೃಜನಶೀಲತೆ ಜಾಗೃತಗೊಳ್ಳಲು ಸಹಕಾರಿಯಾಗಲಿದೆ. ಹಾಗೆಯೇ ಲೇಖನ, ಕವನ ಬರೆಯಲು ಸಮಕಾಲೀನ ಪರಿಸ್ಥಿತಿಗಳನ್ನು ವಸ್ತುವಾಗಿಸಿ ಬರೆಯಲು ಸಾಧ್ಯವಿದೆ, ಎಲ್ಲವುದಕ್ಕೂ ಆಸಕ್ತಿ ಮುಖ್ಯ ಎಂದು ತಿಳಿಸಿದರು.


ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಹ ಸಂಚಾಲಕ ಹಾಗೂ ಕನ್ನಡ ಉಪನ್ಯಾಸಕರಾದ  ಶಶಿಕಾಂತ್ ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಹಿಂದಿ ಉಪನ್ಯಾಸಕಿ ಶ್ರೀಮತಿ ಸುನಿತಾ ಕಾಮತ್ ಉಪಸ್ಥಿತರಿದ್ದರು.


ಸಾಹಿತ್ಯ ಸಂಘದ ಸಂಚಾಲಕ ಹಾಗೂ ವಾಣಿಜ್ಯ ಉಪನ್ಯಾಸಕರಾದ ರಾಘವೇಂದ್ರ ಜಿ ಜಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ಅದೀಶ ಸ್ವಾಗತಿಸಿದರು, ಕೃತಿಕಾ ವಂದಿಸಿದರು, ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top