ಮಂಗಳೂರು: ನೃತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಶ್ರೀಮಂತಿಕೆಯನ್ನು ತಂದು ಕೊಟ್ಟು, ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ ಕೊಲ್ಯ ಎಂದು ಯೂನಿವರ್ಸಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಕೆ ಎಂ ಉಷಾ ನುಡಿದರು.
ಅವರು ನಾಟ್ಯನಿಕೇತನದ ಸಭಾಗೃಹ ಇಲ್ಲಿ ನಾಟ್ಯಮೋಹನ ನವತ್ಯುತ್ಸವ ನೃತ್ಯಸರಣಿ 23 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪಂದನಲ್ಲೂರು ಶೈಲಿಯ ನೃತ್ಯ ಶೈಲಿಯನ್ನು ಕಳೆದ ಹಲವು ದಶಕಗಳಿಂದ ಬೋಧಿಸುತ್ತಾ ಇಂದು ದೇಶ ವಿದೇಶಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ನಾಟ್ಯಕ್ಷೇತದ ಭೀಷ್ಮರೆಂದೇ ಪ್ರಸಿದ್ಧಿಯನ್ನು ಪಡೆದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಅಭಿನಂದನೀಯರು ಎಂದರು.
ಅದೇ ರೀತಿಯಲ್ಲಿ ತಂದೆಯವರ 90 ತುಂಬಿದ ಹರ್ಷದ ಪ್ರಾರಂಭಿಸಿದ ಈ ಕಾರ್ಯಕ್ರಮದ ರೂವಾರಿ ಸುಪುತ್ರಿ ರಾಜಶ್ರೀ ಉಳ್ಳಾಲ್ ರನ್ನು ಸಹ ಶ್ಲಾಘಿಸಲೇಬೇಕು ಎಂದರು. ಉಳ್ಳಾಲ್ ಮೋಹನ ಕುಮಾರ್ ಶಾಸ್ತ್ರೀಯ ಚೌಕಟ್ಟಿನಲ್ಲಿ ಭಾವಪೂರ್ಣ ಅಭಿನಯದ ಮೂಲಕ ನೃತ್ಯ ಪ್ರಸ್ತುತಿ ಮಾಡಿದ ಹಿರಿಯ ಶಿಷ್ಯೆ ಇಂಗ್ಲೆಂಡಿನ ವಿದುಷಿ ಚಿತ್ರಾಲೇಖಾ ಬೋಳಾರ್ ಮತ್ತು ಅವರ ಸುಪುತ್ರಿ ಆನಯ್ಯ ವಸುಧ ಆಶೀರ್ವದಿಸಿ ಅಭಿನಂದಿಸಿದರು.
ಗುರುಗಳ ಅನುಗ್ರಹದಿಂದ ಇಂದು ನಾನು ದೂರದ ಇಂಗ್ಲೆಂಡ್ ನಲ್ಲಿ ನೃತ್ಯ ಕಲೆಯನ್ನು ಅಲ್ಲಿನ ಆಸಕ್ತರಿಗೆ ಹೇಳಿಕೊಡಲು ಸಾಧ್ಯವಾಯಿತು ಎಂದು ಕಲಾವಿದೆ ಚಿತ್ರಲೇಖಾ ಹೇಳಿದರು. ವಿದುಷಿ ರಾಜಶ್ರೀ ಉಳ್ಳಾಲ್ ವಂದಿಸಿದರು. ಗುರು ಶ್ರೀಧರ ಹೊಳ್ಳ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







