ಕಲಬುರಗಿ ರಾಮಮಂದಿರ: ಕಾರ್ತಿಕ ಲಕ್ಷ ದೀಪೋತ್ಸವ ಸಂಭ್ರಮ, ಪ್ರಣವಾನಂದ ಶ್ರೀಗಳ ಭೇಟಿ

Upayuktha
0


(ವರದಿ: ಡಾ. ಸದಾನಂದ ಪೆರ್ಲ)

ಕಲಬುರಗಿ: ಇಲ್ಲಿನ ರಾಮ ಮಂದಿರದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಲಕ್ಷ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು ಈ ಸಂದರ್ಭದಲ್ಲಿ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ರಾಮ ಮಂದಿರದಲ್ಲಿ ನವೆಂಬರ್ 20 ರಂದು ನಡೆದ ವಿಶೇಷ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀರಾಮ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಮಮಂದಿರದ ಆಡಳಿತ ಮಂಡಳಿಯ ವಕ್ತಾರಾದ ಕಿಶೋರ್ ದೇಶಪಾಂಡೆ ಸ್ವಾಮೀಜಿಯವರನ್ನು ಮಂದಿರಕ್ಕೆ ಸ್ವಾಗತಿಸಿ ಹಾರ ಮತ್ತು ಶಾಲು, ಹಣ್ಣು ಹಂಪಲು ನೀಡಿ ಗೌರವಿಸಿದರು.


ರಾಮಮಂದಿರದ ಕಾರ್ತಿಕ ಪೂಜೆಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷದಾಯಕವಾದ ಸಂಗತಿ. ಹಾಗೂ ಪ್ರಪ್ರಥಮ ಬಾರಿಗೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದೇನೆ. ಶ್ರೀರಾಮಚಂದ್ರ ದೇವರು ಭಕ್ತರ ಇಷ್ಟಾರ್ಥ ನೆರವೇರಿಸಿ ಶಾಂತಿ ಸಮೃದ್ಧಿ ಕರುಣಿಸಲಿ ಮತ್ತು ಕಾರ್ತಿಕ ದೀಪೋತ್ಸವ ಬೆಳಗಿದಂತೆ ಎಲ್ಲರ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಶುಭಾಶಿರ್ವಾದ ಮಾಡಿದರು. ಸುಮಾರು ನಾಲ್ಕು ಸಾವಿರದಷ್ಟು ಸೇರಿದ ಭಕ್ತರು ರಾಮಮಂದಿರದ ಆವರಣದಲ್ಲಿ ಅಲಂಕೃತವಾಗಿ ಜೋಡಿಸಿದ ಲಕ್ಷದಷ್ಟು ಹಣತೆಗಳನ್ನು ಬೆಳಗಿಸಿ ಕಾರ್ತಿಕೋತ್ಸವದಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಪುನೀತರಾದರು. ಆನಂತರ ಪಲ್ಲಕ್ಕಿ ಉತ್ಸವ, ತೊಟ್ಟಿಲ ಸೇವೆ ಮಹಾಮಂಗಳಾರತಿ ಯಲ್ಲಿ ಭಕ್ತರು ಪಾಲ್ಗೊಂಡರು.


ಈ ಸಂದರ್ಭದಲ್ಲಿ ರಾಮಮಂದಿರದ ವ್ಯವಸ್ಥಾಪಕರಾದ ನಿರಂಜನ ರಾವ್, ಅರ್ಚಕರಾದ ನಾಗರಾಜ್, ಡಾ. ಸದಾನಂದ ಪೆರ್ಲ, ವೆಂಕಟೇಶ ಕಡೇಚೂರ್, ರಾಜೇಶ್ ದತ್ತು ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಅನಿಲ್ ಯರಗೋಳ್, ಸುನಿಲ್ ಶೆಟ್ಟಿ, ಸುರೇಶ್ ಗುತ್ತೇದಾರ್ ಮಟ್ಟೂರ, ತಿಮ್ಮಪ್ಪ ಗಂಗಾವತಿ, ರಮೇಶ್ ಮತ್ತಿತರ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top