ಕೋಲಾರ- ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ

Upayuktha
0


ಕಾಸರಗೋಡು: ಸೀತಮ್ಮ ಪುರುಷ ನಾಯಕ ಡಾ. ವಾಮನ್ ರಾವ್ ನೇತೃತ್ವದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಮತ್ತು ಸ್ವರ್ಣ ಭೂಮಿ ಫೌಂಡೇಶನ್ (ರಿ.) ಕೋಲಾರ ಸಂಯುಕ್ತ ಆಶ್ರಯದಲ್ಲಿ ಕೋಲಾರ ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ 2025 ಸಮಾರಂಭವು ಕನ್ನಡ ಭವನ ವೇದಿಕೆಯಲ್ಲಿ ಅತ್ಯಂತ ವೈಭವವಾಗಿ ನಡೆಯಿತು.


ಹಲವಾರು ಗಣ್ಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರಿಗೆ ಗಡಿನಾಡು ಕನ್ನಡ ರಾಜ್ಯೋತ್ಸವ 2025 ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಹಾಗೆಯೇ ರಾಜ್ಯ ಹಾಗೂ ಅಂತರಾಜ್ಯ ಮಟ್ಟದ ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕುಮಾರಿ ವರ್ಷಾ ಶೆಟ್ಟಿ ಬಂಬ್ರಾಣ, ಕುಮಾರಿ ಜ್ಞಾನ ರೈ ಪುತ್ತೂರು, ಕುಮಾರಿ ನವ್ಯಶ್ರೀ ಕಮಾರ್ತೆ, ಕುಮಾರಿ ಆರಾಧ್ಯ ಎಸ್ ಆಳ್ವ ಅಂಬಿಲಡ್ಕ, ಕುಮಾರಿ ಭಾನ್ವಿ ಕುಲಾಲ್ ಸೂರಂಬೈಲ್ಕು,  ಕುಮಾರಿ ಜಯಲಕ್ಷ್ಮಿ ಎನ್ ಕಳತ್ತೂರು, ಕುಮಾರಿ ಸನುಷಾ ಸುಧಾಕರನ್ ನೆಲ್ಲಿಕಟ್ಟೆ, ಕುಮಾರಿ ಪ್ರಕೃತಿ ಪಿ ಶೆಟ್ಟಿ ಬಾಕ್ರoಬೈಲ್, ಮಾಸ್ಟರ್ ಭೂಷಣ್ ಎಂ ಶೆಟ್ಟಿ ಕಾವೂರು, ಕುಮಾರಿ ತೃಪ್ತಿ ಕೆ ಎಸ್ ಮಜಿಬೈಲ್, ಕುಮಾರಿ ವರ್ಷಾ ಎಂ ಆರ್ಸು ಸುಳ್ಯಮೆ, ಕುಮಾರಿ ಶ್ವೇತಾ ಹೊಳ್ಳ ಸೂರಂಬೈಲ್ ಮುಂತಾದ ಕಲಾವಿದರಿಗೆ ಬಾಲ ಪ್ರತಿಭೆಗಳಿಗೆ ಕೊಡಮಾಡುವ ಕನ್ನಡ ಭವನದ ಪ್ರತಿಷ್ಠಿತಯಾದ ಭರವಸೆಯ ಬೆಳಕು 2025 ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಈ ಸುಂದರ ಅರ್ಥಪೂರ್ಣ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವು ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದು ಯಶಸ್ವಿಯಾಯಿತು.


ಸಂಸ್ಥೆಯ ಕಲಾವಿದರಾದ, ಜ್ಞಾನ ರೈ ಪುತ್ತೂರು, ಶೈಲಜಾ ಹೊಳ್ಳ, ಜಯಪ್ರಭಾ, ಉಷಾ ಸುಧಾಕರನ್, ಪ್ರಮೀಳಾ ಕೆ, ಹಂಶಿತ್ ಆಳ್ವ, ಆರಾಧ್ಯ ಎಸ್ ಆಳ್ವ, ವಿಶಿಕಾ ಎಂ ಶೆಟ್ಟಿ, ತನ್ವಿ ಬಿ ಶೆಟ್ಟಿ, ಸಾನ್ವಿ ರೈ ಕೆ, ಧನ್ಯಶ್ರೀ ಕುಲಾಲ್, ತನ್ವಿತಾ ಕುಲಾಲ್, ಅಶ್ಮಿತಾ ಕುಲಾಲ್, ರಮ್ಯಾ, ಸ್ವಾತಿ ರೈ, ಅಕ್ಷಿತಾ, ಪ್ರಣಮ್ಯ ಕುಲಾಲ್, ಹರ್ಷ ಕುಲಾಲ್, ಜೀವಿಕಾ ಜೆ ಶೆಟ್ಟಿ, ಮನ್ವಿತ ಕುಲಾಲ್, ಯಾಶಿಕಾ ರೈ, ತನ್ಮಯಿ ಲಕ್ಷ್ಮೀ, ಸಾನ್ವಿಕ್, ಹಾರ್ಧಿಕ್, ತನ್ವಿ, ತನಿಷ್ಕ, ಧನ್ವಿತಾ, ಮುಂತಾದವರು ಭಾಗವಹಿಸಿ ರಂಜಿಸಿದರು. ಕಾರ್ಯಕ್ರಮದ ಕೊನೆಗೆ ವೇದಿಕೆಯಲ್ಲಿ ಉಪಸ್ಥಿತರಿರುವ ಶ್ರೀ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ ವಾಮನ್ ರಾವ್ ಬೇಕಲ್, ಧಾರ್ಮಿಕ ಮುಂದಾಳು ಡಾ. ವೆಂಕಟರಮಣ ಹೊಳ್ಳ ಹಿರಿಯ ಕವಿಗಳು, ಪತ್ರಕರ್ತರು ರಾಧಾಕೃಷ್ಣ ಉಳಿಯತ್ತಡ್ಕ, ಗುರುಪ್ರಸಾದ್ ಕೋಟೆಕಣಿ, ಪತ್ರಕರ್ತ, ಕನ್ನಡ ಭವನ ಸಂಸ್ಥೆಯ ಗೌವರಾಧ್ಯಕ್ಷರು ಪ್ರದೀಪ್ ಬೇಕಲ್ ಮುಂತಾದವರ ಸಮ್ಮುಖದಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ಮತ್ತು ಕನ್ನಡ ಭವನದ ವತಿಯಿಂದ ಅಭಿನಂದನಾ ಪತ್ರ ಹಾಗೂ ಕನ್ನಡ ಶಾಲು ನೀಡಿ ಗೌರವಿಸಲಾಯಿತು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top