ಕಾಸರಗೋಡು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕಾಸರಗೋಡು ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ (ರಿ) ಆಯೋಜಕತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ಡಾ. ವಾಣಿಶ್ರೀ ಅವರ ಸಾಹಿತ್ಯ ಪ್ರಸ್ತುತಿಯೊಂದಿಗೆ ಮಧುಲತಾ ಪುತ್ತೂರು ಹಾಗೂ ದಿವಾಕರ ಕಾಸರಗೋಡು ಅವರಿಂದ ಗಾನ ವೈಭವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆ ಸಂಸ್ಥೆಯ ಕಲಾವಿದೆ ನೃತ್ಯದಲ್ಲಿ ವಿಶ್ವದಾಖಲೆ ಮಾಡಿದ ಗೋಲ್ಡನ್ ಗರ್ಲ್ ರೆಮೋನಾ ಅವರಿಂದ ನಡೆಯಿತು.
ಸಂಸ್ಥೆಯ ಕಲಾವಿದರು ಹಲವು ಪ್ರಕಾರದ ಕನ್ನಡದ ಹಾಡಿಗೆ ನೃತ್ಯ ಪ್ರಸ್ತುತಿ ನೀಡಿ ಜನಮನ ಗೆದ್ದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯಿಂದ ಗೌರವ ಸ್ಮರಣಿಕೆ ಹಾಗೂ ನೆನಪಿನ ಪತ್ರ ಕೊಟ್ಟು ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಅವರಿಗೆ ಗೌರವ ಸ್ಮರಣಿಕೆ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು.
ಕಾಸರಗೋಡು ಕೋಟೆಕಣಿ ರಾಮನಗರದಲ್ಲಿ ನಡೆದ ಈ ಕಾಸರಗೋಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರಾದ ಗುರುಪ್ರಸಾದ್, ಅಚ್ಯುತ ಭಟ್, ವೆಂಕಟರಮಣ ಹೊಳ್ಳ, ಸತೀಶ್, ಮೋಹಿನಿ, ವನಿತಾ. ಉಷಾ, ಶಾಂತ, ಅಶ್ವಿನಿ, ಗಿರೀಶ್, ಗೀತಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


