ಬೆಳ್ತಂಗಡಿ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಭಾನುವಾರ (ನ.2) ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹದಿನೈದನೇ ಅಧ್ಯಾಯ ಪುರುಷೋತ್ತಮ ಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ, ಲೇಖಕ ಭರತೇಶ್ ಶೆಟ್ಟಿ ಎಕ್ಕಾರು ಇವರು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ) ಉಜಿರೆಯ ವಿಶ್ರಾಂತ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಇವರು ವಹಿಸಿದ್ದರು.
ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ಶ್ರೀಮತಿ ಮಂಗಳಾ ಇವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ರಚಿಸಿದ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗಸಂಯೋಜಿಸಿ ಹಾಡಿದರು. ರಾಮಕೃಷ್ಣ ಭಟ್ ಬದನಾಜೆ ಇವರು ಆಗಮಿಸಿದ್ದ ಸರ್ವರನ್ನು ಸ್ವಾಗತಿಸಿದರು. ಅಭ್ಯಾಗತರನ್ನು ತಾಂಬೂಲ ನೀಡಿ ಸ್ವಾಗತಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಭರತೇಶ್ ಶೆಟ್ಟಿ ಎಕ್ಕಾರು ಇವರು ಗೀತೆಯ 15ನೇ ಅಧ್ಯಾಯವನ್ನು ವಿವರಿಸುತ್ತಾ, ಕೆಳಮುಖವಾಗಿ ನಿಂತು ಅಶ್ವಥ ಮರವನ್ನು ಉದಾಹರಣೆಯಾಗಿ ನೀಡಿ, ಹೇಗೆ ನಾವು ಮರದ ಕೊಂಬೆಗಳಲ್ಲಿ ಬೀಜವನ್ನು ಹುಡುಕಲು ಸಾಧ್ಯವಿಲ್ಲವೋ, ಹಾಗೆಯೇ ನಮ್ಮ ಜೀವನದ ಮೂಲವೂ ಇಹಲೋಕದಲ್ಲಿಲ್ಲ. ಅದು ದಿವ್ಯತೆಯಲ್ಲಿದೆ. ಒಂದು ದಿನ ಎಲೆ ಉದುರುತ್ತದೆ. ವೃಕ್ಷ ಶಾಶ್ವತವಾಗಿ ಇರುತ್ತದೆ. ನಾವು ಜೀವ ಇರುವ ನಶ್ವರ, ದೇವರು ಶಾಶ್ವತ ಎಂದು ವಿವರಿಸಿದರು.
ನಿಜವಾದ ಪ್ರಗತಿ ಎಂದರೆ ಹೊರಗಿನ ಸಾಧನೆ ಅಲ್ಲಿ, ಒಳಗಿನ ಶುದ್ಧತೆ. ಯಾವುದು ಪಾಪ, ಯಾವುದು ಪುಣ್ಯ ಅರಿತು ಕರ್ಮ ಶುದ್ಧಿ, ಧರ್ಮ ಶುದ್ಧಿಯಿಂದ ಆತ್ಮದ ಶುದ್ಧೀಕರಣ ಮಾಡಿಕೊಂಡು ಪುರುಷೋತ್ತಮನನ್ನು ಕಾಣಬೇಕು. ಎನ್ನುವುದನ್ನು ಅನೇಕ ಉದಾಹರಣೆಗಳೊಂದಿಗೆ ಮಂತ್ರ ಮುಗ್ದರನ್ನಾಗಿಸುವಂತೆ ವಿವರಿಸಿದರು.
ಡಾ. ಕುಮಾರ ಹೆಗ್ಡೆ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹುಟ್ಟು ಸಾವಿನ ನಡುವೆ ಇರುವ ಬದುಕನ್ನು ನಾವು ಹೇಗೆ ಬದುಕುವುದರಿಂದ ಪರಮಾತ್ಮನನ್ನು ತಲುಪಲು ಸಾಧ್ಯ ಎನ್ನುವುದನ್ನು ತಿಳಿದುಕೊಳ್ಳಲು ಇರುವ ಮಾರ್ಗದರ್ಶಿಯೇ ಭಗವದ್ಗೀತೆ. ಸರ್ವ ಕಾಲದಲ್ಲೂ ಒಪ್ಪುವಂತಹ ಭಗವಂತನ ಮಾತುಗಳನ್ನು ನಾವೆಲ್ಲರೂ ಬದುಕಲ್ಲಿ ಅಳವಡಿಸಿಕೊಳ್ಳೋಣ ಎಂದು ಸಾಹಿತ್ಯದ ಅನೇಕ ಉದಾಹರಣೆಗಳೊಂದಿಗೆ ಸುಂದರವಾಗಿ ನಿರೂಪಿಸಿದರು.
ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರವೀಂದ್ರ ಶೆಟ್ಟಿ ಬಳಂಜ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ವಸಂತಿ ಕುಳಮರ್ವ ಇವರು ಸರ್ವರಿಗೂ ಧನ್ಯವಾದವನ್ನಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

