ಗೋವಾ ರಾಜಭವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Chandrashekhara Kulamarva
0


ಪಣಜಿ: ಗೋವಾ ರಾಜಭವನದ ದರ್ಬಾರ್ ಹಾಲ್ ನಲ್ಲಿ ನವೆಂಬರ್ 1 ರಂದು ಸಂಜೆ ಗೋವಾ ಕನ್ನಡ ಸಮಾಜ ಪಣಜಿ ಸಂಘದ ಪದಾಧಿಕಾರಿಗಳು, ಕನ್ನಡಿಗರು ಹಾಗೂ ವಿವಿಧ ರಾಜ್ಯಗಳ ಸಂಘಟನೆಗಳ ಉಪಸ್ಥಿತಿಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.


ಗೋವಾ ರಾಜ್ಯಪಾಲರಾದ ಪಿ. ಅಶೋಕ ಗಜಪತಿ ರಾಜು ರವರು ದೀಪ ಬೆಳಗಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿದರು. ನಂತರ ಗೋವಾ ಕನ್ನಡ ಸಮಾಜ ಪಣಜಿ ಪದಾಧಿಕಾರಿಗಳು ಗೋವಾ ರಾಜ್ಯಪಾಲರಿಗೆ ಕನ್ನಡ ರಾಜ್ಯೋತ್ಸವದ ಸವಿ ನೆನಪಿಗಾಗಿ ವಿಶೇಷವಾಗಿ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಅರುಣಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಪ್ರಶಾಂತ ಜೈನ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಖಜಾಂಚಿ ಸಂದೇಶ ಗಾಡವಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಂಸುದ್ದೀನ್‌ ಸೊಲ್ಲಾಪುರಿ, ಪ್ರಕಾಶ್ ಭಟ್, ಮಂಜುನಾಥ ದೊಡ್ಮನಿ, ಸಿ.ಜಿ. ಕಣ್ಣೂರ್, ನೀರಜ್ ದಿವಾಕರ್, ಸುನೀಲ್ ಕುಮಟಳ್ಳಿ, ಚಿನ್ಮಯ ಎಂ.ಸಿ ಸೇರಿದಂತೆ ಕನ್ನಡ ಸಮಾಜದ ಹಿರಿಯರು, ಕನ್ನಡಿಗರು ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಉಮಾರಾವ್ ಸಂಗಡಿಗರ ಯಕ್ಷನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಅಂತೆಯೇ ಗೋವಾ ರಾಜ್ಯದಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಕಲಾ ತಂಡಗಳ ಪ್ರದರ್ಶನ ಕೂಡ ನಡೆಯಿತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top