ಕವನ: ಬಿಡೆನಾ ನುಡಿಯ

Upayuktha
0



ಚಂದನದ ನಾಡಲ್ಲಿ ಚಂದದಾ ಬೀಡಲ್ಲಿ

ಅಂದ ಕನ್ನಡ ನನ್ನ ಜಿಹ್ವೆಯಲ್ಲಿ

ಬಂಧವನು ಬಿಡೆ ನಾನು ಕನ್ನಡದ ನುಡಿಯಲ್ಲಿ

ಸಂದು ಹೋದರು ಜೀವ ಈ ನೆಲದಲಿ


ನಾಲಿಗೆಯ ಸೀಳಿದರೆ ಮೂಗಿನಲಿ ಕನ್ನಡವ

ಆಲಿಸುವ ತೆರನಾಡುವಂಥ ರತ್ನ

ಪಾಲಿಸಲೆ ಬೇಕಲ್ಲ ಹೊನ್ನು ಕನ್ನಡ ನುಡಿಯ

ಲಾಲಿ ಹಾಡಿನ ಹಾಗೆ ಇರಿಸಿ ಯತ್ನ


ನನಗೆ ನನ್ನಯ ನಾಡು ತಾಯಿಗಿಂತಲು ಮಿಗಿಲು

ತನು ಮನದಿ ನಮಿಸುವೆನು ನಿತ್ಯ ನಾನು

ಕನಸು ಮನಸಲು ಎರಡು ಎಣಿಸದಿಹ ಭಾವವದು

ಎನಗದುವೆ ಸವಿಯನ್ನು ಕೊಡುವ ಹಾಲ್ಜೇನು 


ತೊರೆಯೆ ಕನ್ನಡ ನಾಡ ಮೆರೆವೆ ಇಲ್ಲಿಯೆ ಎನುವ

ಹಿರಿಯ ಭಾವವ ತುಂಬಿ ಕೊಳ್ಳಬೇಕು

ನರಿಯಂತೆ ಕಪಟತನ ಹೊಂದಿ ನಾಡನು ಮರೆಯೆ

ತರವಲ್ಲ ಚಂದನದ ನಾಡಲಿರೆ ಬದುಕು


ಕನ್ನಡವು ಬರಿಭಾಷೆಯಲ್ಲ ತಿಳಿ ಓ ಜಾಣ

ಚಿನ್ನದಂತಹ ನಾಡಿನಮೃತವದು

ಬನ್ನವನು ಕಾಣದೆಯೆ ತನ್ನ ತನವನು ಉಳಿಸಿ

ಭಿನ್ನವಿಲ್ಲದ ಮನವು ಇರಲಿ ಹೊಳೆದು


-ಡಾ ಸುರೇಶ ನೆಗಳಗುಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top