ಹೈದರಾಬಾದ್‌ ಐಐಐಟಿಯಲ್ಲಿ ಬಹುಭಾಷೆ-2025 ಸಮ್ಮೇಳನ: ಭರತೇಶ ಅಲಸಂಡೆಮಜಲು ಭಾಗಿ

Upayuktha
0


ಮಂಗಳೂರು: ನವೆಂಬರ್ 6ರಿಂದ 8ರ ವರೆಗೆ ಹೈದರಾಬಾದ್‌ನ ಪ್ರಸಿದ್ಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ (IIIT Hyderabad) ನಡೆದ ‘ಬಹುಭಾಷೆ 2025’ ಸಮ್ಮೇಳನದಲ್ಲಿ ಭರತೇಶ ಅಲಸಂಡೆಮಜಲು ಭಾಗವಹಿಸಿದರು. ಭಾರತೀಯ ಭಾಷಾ ವೈವಿಧ್ಯತೆ ಮತ್ತು ಭಾಷಾ ತಂತ್ರಜ್ಞಾನಗಳ ಒಗೆಗಿನ ಭಾಷೆ ಮತ್ತು ತಂತ್ತಜ್ಞಾನದ ಸಂವಾದ ಕಾರ್ಯಕ್ರಮವಾಗಿತ್ತು.


ಮೂರು ದಿನಗಳ ಈ ಸಮ್ಮೇಳನದಲ್ಲಿ ಮುಕ್ತ ಜ್ಞಾನ, ಕಾಪಿರೈಟ್, ಭಾಷೆ ಮತ್ತು ಅಂತರಜಾಲ, ತೆರೆದ ಡೇಟಾ, ಯಂತ್ರಾನುವಾದ, AI ನೀತಿ, ಪುಸ್ತಕ ಡಿಜಿಟಲೀಕರಣ, ಭಾಷಾ ಡಿಜಿಟಲೀಕರಣ, ಪಠ್ಯ , ಸ್ವಯಂಸೇವಾ ಸಂಸ್ಥೆಗಳ(NGO) ಪಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ಉತ್ತೇಜನ ಸೇರಿದಂತೆ ಅನೇಕ ವಿಷಯಗಳ ಕುರಿತ ಚರ್ಚೆಗಳು ನಡೆಯಿತು. ಭಾಷಾ ತಜ್ಞರು, ವಿಕಿಮೀಡಿಯಾ ಸಂಪಾದಕರು, ನಿವೃತ್ತ ಅಧಿಕಾರಿಗಳು, ತಂತ್ರಜ್ಞರು, ಅನುವಾದಕರು ಮತ್ತು ಸಂಸ್ಕೃತಿ ಪೋಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.


ಈ ಕಾರ್ಯಕ್ರಮವನ್ನು Open Knowledge Initiatives (OKI) ಮತ್ತು Language Technologies Research Centre (LTRC), IIIT Hyderabad ಸಂಯುಕ್ತವಾಗಿ ಆಯೋಜಿಸಿದ್ದು, ದೇಶದ ಸುಮಾರು 25ಕ್ಕೂ ಹೆಚ್ಚು ಭಾಷೆಗಳ ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು.


ಭರತೇಶ ಅಲಸಂಡೆಮಜಲು ಅವರು ತುಳು ಮತ್ತು ಅರೆಭಾಷೆಗಳ ಪ್ರತಿನಿಧಿಯಾಗಿ ಭಾಗವಹಿಸಿ ಗಮನಸೆಳೆದರು. ಇವರು ಪುತ್ತೂರಿನ ಪೆರ್ಲಂಪಾಡಿ, ಅಲಸಂಡೆಮಜಲಿನವರು, ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ – ಕಾವು ಶಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top