ಸಮಯ ಅನ್ನೋದು ಬದುಕಿನಲ್ಲಿ ತುಂಬಾ ಕಲಿಸುತ್ತದೆ.ಸಮಯದ ಮೌಲ್ಯವನ್ನು ಅರಿತವರು ಯಾರು ಬದುಕಿನಲ್ಲಿ ಖಂಡಿತ ಸೋಲುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಯಾವಾಗ ಹೇಗೆ ಸಮಯವನ್ನು ಉಪಯೋಗಿಸಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ನಮ್ಮ ಈ ಜೀವನದಲ್ಲಿ ದುಃಖ, ನೋವು, ತೊಂದರೆಗಳು, ಸಮಸ್ಯೆಗಳು ಬದುಕಿನ ಭಾಗವಷ್ಟೇ ಹೊರತು ಅದುವೇ ಜೀವನವಲ್ಲ. ಹಾಗೆಯೇ ಸಂತೋಷ , ಸಂಭ್ರಮ,ಆನಂದ ಎಲ್ಲವೂ ಕೂಡ ಬದುಕಿನ ಭಾಗವಷ್ಟೇ ಹೊರತು ಅದುವೇ ಬದುಕಲ್ಲ .
ಕೆಲವೊಮ್ಮೆ ಜನರು ತಮ್ಮ ಹಣೆ ಬರಹವನ್ನು ವಿಧಿ ಎಂದರೆ, ಇನ್ನು ಕೆಲವರು ಸಮಯಕ್ಕೆ ಹೋಲಿಸಿ, ದುಃಖಿಸುವುದನ್ನು ನಾವು ಕಾಣಬಹುದು. ಆದರೆ,ಇದು ತಪ್ಪು. ವಿಧಿ ಆಟವನ್ನು ಇಲ್ಲಿ ಅರಿತವರು ಯಾರು ಇಲ್ಲ. ಆದರೆ, ಬಂದ ಸಮಸ್ಯೆಗೆ ಪರಿಹಾರವನ್ನು ಹುಡುಕದೇ ದುಃಖಿಸುತ್ತಾ ತಮ್ಮ ಹಣೆಬರಹವನ್ನ ದೂಷಿಸುತ್ತಾ ಸಮಯವನ್ನು ವ್ಯರ್ಥ ಮಾಡುವುದು ತಪ್ಪು.
ಹೀಗೆ ನಮ್ಮ ಜೀವನದಲ್ಲಿ ಆನಂದ ನೋವು ಎರಡು ರಸಗಳು ಸಮ ಪಾಲಿನಲ್ಲಿ ಇರಬೇಕು ಅದನ್ನು ಬಿಟ್ಟು ಬದುಕಿನಲ್ಲಿ ತೊಂದರೆ ಬಂದಾಗ ಕುಗ್ಗದೆ ಗೆಲುವು ಬಂದಾಗ ನಮ್ಮ ಪಾಡಿಗೆ ನಮ್ಮ ಕೆಲಸಗಳನ್ನು ಮಾಡುತ್ತಾ ಸಮಯದೊಂದಿಗೆ ನಾವು ಮುಂದುವರಿಯಬೇಕು ಹೊರತು ಬ್ಯಾಟರಿ ನಿಂತ ಗಡಿಯಾರದಂತೆ ಸೋತು ನಿಂತು ಬಿಡಬಾರದು.
"ಬದುಕು ಬಂದಂತೆ ಹೊರತು ಬಯಸಿದಂತಲ್ಲ"! ಎಂಬ ಮಾತನ್ನು ನಾವು ಖಂಡಿತ ಕೇಳಿರುತ್ತೇವೆ ಬದುಕಿನಲ್ಲಿ ನಿರೀಕ್ಷೆಗಳು ಇರಬೇಕು ಆದರೆ ನಿರೀಕ್ಷೆಗಳೇ ಬದುಕಾಗಬಾರದು. ಇವಾಗ ಸಮಯಕ್ಕೂ ನಿರೀಕ್ಷೆಗಳಿಗೂ ಏನು ಸಂಬಂಧ ಮುಂದೆ ಹೇಳುತ್ತೇನೆ ಕೇಳಿ...
ಬಯಸುವುದಾದರೂ ಯಾಕೆ..? ಹಾಗೆ ಬಯಸಿದ್ದು ಆಗದಿರುವಾಗ ದುಃಖಿಸುವುದು ಯಾಕೆ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಯೇ ಇದೆ ಹೊರತು ಅದಕ್ಕೆ ಕಾರಣ ನಮ್ಮ ಹಣೆಬರಹ , ವಿಧಿ ಅಥವಾ ಸಮಯ ಅಲ್ಲ. ಬದುಕಿನಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು, ಅತಿಯಾದರೆ ಅಮೃತವೂ ವಿಷ ಎಂಬಂತೆ ನಿರೀಕ್ಷೆಗಳು ಜೀವನದಲ್ಲಿ ಹೆಚ್ಚಾದಾಗ ನೋವು ಕೂಡ ಖಂಡಿತ ಹೆಚ್ಚಾಗುತ್ತದೆ ಎಂಬುದನ್ನು ನಾವು ಅರಿತರೆ ಖಂಡಿತ ನಾವು ಸಮಯವನ್ನು ದೂರುವುದಿಲ್ಲ .
ಸಮಯವು ಕೆಲವೊಮ್ಮೆ ತುಂಬಾ ಪಾಠ ಕಲಿಸುತ್ತದೆ ಕೆಲವೊಮ್ಮೆ ನಾವು ನಮ್ಮವರಿಂದ ದೂರವಾದಾಗ ತುಂಬಾ ಬೇಸರವಾಗುತ್ತದೆ. ಸಮಯವೇ ಅವರಿಂದ ನಮ್ಮನ್ನು ದೂರ ಮಾಡಿತು ಅಂತ ನಿರಾಶರಾಗಿ ಬಿಡುತ್ತೇವೆ. ಆದರೆ ಅವರ ಜೀವನದಲ್ಲಿ ನಮ್ಮ ಸ್ಥಾನ ಏನು ಎಂಬುದನ್ನು ನಾವು ತಿಳಿದುಕೊಂಡಿರುವು ದಿಲ್ಲ. ಸಮಯ ಅವರನ್ನು ಬದಲಾಯಿಸಿತೋ? ಅಥವಾ ಅವರ ಬದುಕಿನಲ್ಲಿ ನಮ್ಮ ಅವಶ್ಯಕತೆ ಮುಗಿದು ಹೋಯಿತೋ ..? ಯಾರಿಗೆ ಗೊತ್ತು.. ? ಹಾಗೆ ಅವಶ್ಯಕತೆ ಮುಗಿದ ಸಂಬಂಧಗಳಿಗೆ ಅಳುವುದರಲ್ಲಿ ಅರ್ಥವಿಲ್ಲ ಎಂಬಂತೆ ನಾವು ಸಮಯವನ್ನು ದೂರುವುದನ್ನು ನಿಲ್ಲಿಸಿ ನಮ್ಮ ಕೆಲಸಗಳನ್ನ ಮಾಡುತ್ತಾ ಹೋದರೆ ಖಂಡಿತ ಒಂದಲ್ಲ ಒಂದು ದಿನ ಗೆಲುವು ನಮ್ಮದಾಗುತ್ತದೆ..
ಕವನ ಚಾರ್ಮಾಡಿ
ದ್ವಿತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಕಾಲೇಜು ಉಜಿರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ








